ತಂದೆಯೊಂದಿಗೆ ಪಲ್ಲಂಗ ಹಂಚಿಕೊಳ್ಳೋಕೆ ಒತ್ತಡ, ಕೊಪ್ಪಳ ಎಸ್ಪಿಗೆ ನೊಂದ ಮಹಿಳೆ ದೂರು

|

Updated on: Jan 23, 2020 | 11:28 AM

ಕೊಪ್ಪಳ: ತನ್ನ ತಂದೆ ಜತೆ ಮಲಗುವಂತೆ ಪತಿಯಿಂದ ಪತ್ನಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ವಿಚಿತ್ರ ಆರೋಪ ಕೇಳಿ ಬಂದಿದೆ. ಕೊಪ್ಪಳ ತಾಲೂಕಿನ ಬೊಮ್ಮಸಾಗರ ತಾಂಡಾ ನಿವಾಸಿ ರತ್ನಮ್ಮ ಸಂಗನಾಳ ತನ್ನ ಪತಿ ಗೋಕುಲ್ ವಿರುದ್ಧವೇ ಇಂತಹದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಅಲ್ಲದೆ ಈ ವಿಚಾರವಾಗಿ ತಾವರಗೇರಾ ಠಾಣೆ ಪೊಲೀಸರಿಗೆ ಪತಿಯ ಕುಟುಂಬಸ್ಥರ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ಈ ಹಿನ್ನೆಲೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. 2018ರಲ್ಲಿ ಕಳಮಳ್ಳಿ ತಾಂಡಾದ ಗೋಕುಲ್ […]

ತಂದೆಯೊಂದಿಗೆ ಪಲ್ಲಂಗ ಹಂಚಿಕೊಳ್ಳೋಕೆ ಒತ್ತಡ, ಕೊಪ್ಪಳ ಎಸ್ಪಿಗೆ ನೊಂದ ಮಹಿಳೆ ದೂರು
Follow us on

ಕೊಪ್ಪಳ: ತನ್ನ ತಂದೆ ಜತೆ ಮಲಗುವಂತೆ ಪತಿಯಿಂದ ಪತ್ನಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ವಿಚಿತ್ರ ಆರೋಪ ಕೇಳಿ ಬಂದಿದೆ. ಕೊಪ್ಪಳ ತಾಲೂಕಿನ ಬೊಮ್ಮಸಾಗರ ತಾಂಡಾ ನಿವಾಸಿ ರತ್ನಮ್ಮ ಸಂಗನಾಳ ತನ್ನ ಪತಿ ಗೋಕುಲ್ ವಿರುದ್ಧವೇ ಇಂತಹದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಅಲ್ಲದೆ ಈ ವಿಚಾರವಾಗಿ ತಾವರಗೇರಾ ಠಾಣೆ ಪೊಲೀಸರಿಗೆ ಪತಿಯ ಕುಟುಂಬಸ್ಥರ ವಿರುದ್ಧ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ಈ ಹಿನ್ನೆಲೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

2018ರಲ್ಲಿ ಕಳಮಳ್ಳಿ ತಾಂಡಾದ ಗೋಕುಲ್ ಜತೆ ರತ್ನಮ್ಮಗೆ ವಿವಾಹವಾಯಿತು. ಗೋಕುಲ್ ತನ್ನ ಮೊದಲ ಮದುವೆ ಮುಚ್ಚಿಟ್ಟು ವಿವಾಹವಾಗಿದ್ದ. ಮದುವೆಯಾದ ಬಳಿಕ ಗೋಕುಲ್‌ನಿಂದ ಪತ್ನಿಗೆ ಕಿರುಕುಳ ನೀಡಲಾಗುತ್ತಿದೆ. ಕಿರುಕುಳದ ಜತೆಗೆ ತನ್ನ ತಂದೆ ಜತೆ ಮಲಗುವಂತೆ ಒತ್ತಾಯ ಕೇಳಿ ಬಂದಿದೆಯಂತೆ. ಪತಿಯ ಕಿರುಕುಳಕ್ಕೆ ಬೇಸತ್ತು ಈ ಬಗ್ಗೆ ದೂರು ನೀಡಲು ಹೋದ್ರೂ ಪೊಲೀಸರು ದೂರು ಸ್ವೀಕರಿಸಿಲ್ಲ ಹೀಗಾಗಿ ಪತಿ ಮತ್ತು ತಾವರಗೇರಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಿಳೆ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾರೆ.

Published On - 11:27 am, Thu, 23 January 20