ನಿನ್ನೆ ಒಂದು ಮಾತಾಡ್ತಾರೆ, ಇಂದು ಒಂದು ಹೇಳ್ತಾರೆ, ನಾಳೆ ಮತ್ತೊಂದು ಹೇಳ್ತಾರೆ, ಎಲ್ಲದಕ್ಕೂ ಉತ್ತರಿಸೋಕಾಗಲ್ಲ -ರಮೇಶ್​ ಸವಾಲ್​ಗೆ ಡಿಕೆಶಿ ರಿಯಾಕ್ಷನ್​

|

Updated on: Mar 27, 2021 | 7:11 PM

ನಿನ್ನೆ ಒಂದು ಮಾತಾಡುತ್ತಾರೆ, ಇಂದು ಒಂದು ಹೇಳುತ್ತಾರೆ, ನಾಳೆ ಮತ್ತೊಂದು ಹೇಳುತ್ತಾರೆ, ಎಲ್ಲದಕ್ಕೂ ಉತ್ತರಿಸಲಾಗಲ್ಲ. ನಾನು ನನ್ನ ಡ್ಯೂಟಿ ಮಾಡುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ನಿನ್ನೆ ಒಂದು ಮಾತಾಡ್ತಾರೆ, ಇಂದು ಒಂದು ಹೇಳ್ತಾರೆ, ನಾಳೆ ಮತ್ತೊಂದು ಹೇಳ್ತಾರೆ, ಎಲ್ಲದಕ್ಕೂ ಉತ್ತರಿಸೋಕಾಗಲ್ಲ -ರಮೇಶ್​ ಸವಾಲ್​ಗೆ ಡಿಕೆಶಿ ರಿಯಾಕ್ಷನ್​
ಡಿ.ಕೆ.ಶಿವಕುಮಾರ್
Follow us on

ಚೆನ್ನೈ: ಪಾಪ.. ಅವರು ಒತ್ತಡದಲ್ಲಿದ್ದಾರೆ, ಮಾತನಾಡಿದ್ದಾರೆ ಎಂದು ರಮೇಶ್​ ಜಾರಕಿಹೊಳಿ ನಡೆಸಿದ ಸುದ್ದಿಗೋಷ್ಠಿ ಬಗ್ಗೆ ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಆರೋಪಗಳಿಗೆ ಉತ್ತರಿಸುತ್ತ ಕೂರಲು ಆಗುವುದಿಲ್ಲ. ನನ್ನ ಬಳಿ ಯಾವುದೇ ಯುವತಿ ಬಂದಿಲ್ಲ, ಮಾಹಿತಿ ಇಲ್ಲ. ಕಾನೂನು ಇದೆ, ಅಧಿಕಾರಿಗಳು ಇದ್ದಾರೆ, ತನಿಖೆ ಮಾಡ್ತಾರೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಶಿವಕುಮಾರ್​ ಮಾತನಾಡಿದ್ದಾರೆ.

ಅವರದ್ದೇ ಸರ್ಕಾರವಿದೆ, ಯಾವುದೇ ಕ್ರಮಕೈಗೊಳ್ಳಬಹುದು. ಯಾವುದೇ ತನಿಖೆ ನಡೆಸಿ ಕ್ರಮಕೈಗೊಳ್ಳಬಹುದು. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಏನೋ ಸಮಸ್ಯೆ ಇರಬೇಕು, ಅವರ ವೈಯಕ್ತಿಕ ವಿಚಾರ. ಅದು ಅವರ ವೈಯಕ್ತಿಕ, ನನಗೂ ಅದಕ್ಕೂ ಸಂಬಂಧವಿಲ್ಲ. ನಿನ್ನೆ ಒಂದು ಮಾತಾಡುತ್ತಾರೆ, ಇಂದು ಒಂದು ಹೇಳುತ್ತಾರೆ, ನಾಳೆ ಮತ್ತೊಂದು ಹೇಳುತ್ತಾರೆ, ಎಲ್ಲದಕ್ಕೂ ಉತ್ತರಿಸಲಾಗಲ್ಲ. ನಾನು ನನ್ನ ಡ್ಯೂಟಿ ಮಾಡುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ಇತ್ತ, ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು ಮುನ್ನೆಲೆಗೆ ಬಂದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ನಾಯಕರು ಪೇಚಿಗೆ ಸಿಲುಕಿರುವುದು ತಿಳಿದುಬಂದಿದೆ. ಡಿಕೆಶಿ ವಿಚಾರಕ್ಕೆ ಮುಜುಗರ ಆಗುತ್ತಿದೆ ಎಂದು ‘ಕೈ’ ನಾಯಕರು ನಿಲುವು ತಾಳಿದ್ದಾರೆ. ಹಾಗಾಗಿ, ಡಿಕೆಶಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡದಿರಲು ನಿರ್ಧಾರ ಕೈಗೊಂಡಿದ್ದಾರೆ. ಪ್ರತಿಕ್ರಿಯೆ ನೀಡದಿರಲು ಕೆಲ ಕಾರ್ಯಾಧ್ಯಕ್ಷರು ನಿರ್ಧಾರ ಮಾಡಿದ್ದಾರೆ.

‘ಡಿಕೆಶಿ ಒತ್ತಡಕ್ಕೆ ಮಣಿದು ಪ್ರಸ್ತಾಪ ಮಾಡಬಾರದಿತ್ತು’
ಡಿಕೆಶಿ ಒತ್ತಡಕ್ಕೆ ಮಣಿದು ಪ್ರಸ್ತಾಪ ಮಾಡಬಾರದಿತ್ತು. ಸದನದಲ್ಲಿ ಸಿಡಿ ವಿಚಾರವನ್ನ ಪ್ರಸ್ತಾಪ‌ ಮಾಡಬಾರದಿತ್ತು. ಸದನದಲ್ಲಿ ಮೌನವಾಗಿದ್ದರೆ ಸಮರ್ಥಿಸಿಕೊಳ್ಳಬಹುದಿತ್ತು. ಈಗ ಹೇಗಾದರೂ ಸಮರ್ಥನೆ ಮಾಡಿಕೊಳ್ಳಬಹುದಿತ್ತು. ಆದರೆ ಡಿಕೆಶಿ ಸ್ವಹಿತಾಸಕ್ತಿಯಿಂದ ಇಷ್ಟೆಲ್ಲ ಬೆಳವಣಿಗೆ ಆಗಿದೆ. ಸ್ವಹಿತಾಸಕ್ತಿಯಿಂದ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾಗಿದೆ. ಸಿಡಿ ಪ್ರಕರಣದಿಂದ ಕಾಂಗ್ರೆಸ್​ ಪಕ್ಷಕ್ಕೆ ಡ್ಯಾಮೇಜ್ ಆಗ್ತಿದೆ. ಹೀಗಾಗಿ, ಬಹಿರಂಗ ಹೇಳಿಕೆಗಳನ್ನು ನೀಡುವ ಮೊದಲು ಮತ್ತೊಮ್ಮೆ ಚಿಂತನೆ ನಡೆಸಲು ‘ಕೈ’ ನಾಯಕರ ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ: Ramesh Jarkiholi Press Meet | ನಾನು ಗಂಡಸು.. ಆ ಮಹಾನಾಯಕ ಗಾಂ.. ಅವನನ್ನು ಒದ್ದು ಒಳಗಾಕಿ -ರಮೇಶ್ ಜಾರಕಿಹೊಳಿ

Published On - 6:46 pm, Sat, 27 March 21