ರಮೇಶ್ ಜಾರಕಿಹೊಳಿ ಬಿಜೆಪಿ ಸಂಸ್ಕೃತಿ ಬಿಂಬಿಸುವ ‘ದೊಡ್ಡ ದೊಡ್ಡ‘ ಮಾತಾಡಿದ್ದಾರೆ, ಇದು ಹೊಲಸುತನದ ಪರಮಾವಧಿ: ಕರ್ನಾಟಕ ಕಾಂಗ್ರೆಸ್

ರಮೇಶ್ ಜಾರಕಿಹೊಳಿ ಬಿಜೆಪಿ ಸಂಸ್ಕೃತಿ ಬಿಂಬಿಸುವ ‘ದೊಡ್ಡ ದೊಡ್ಡ‘ ಮಾತಾಡಿದ್ದಾರೆ, ಇದು ಹೊಲಸುತನದ ಪರಮಾವಧಿ: ಕರ್ನಾಟಕ ಕಾಂಗ್ರೆಸ್
ಸಾಂದರ್ಭಿಕ ಚಿತ್ರ

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಬಗ್ಗೆ ಕಾಂಗ್ರೆಸ್ ಟೀಕೆ ಖಾರವಾಗಿ ಟೀಕೆ ಮಾಡಿದೆ. ಸಂತ್ರಸ್ತೆಗೆ ರಕ್ಷಣೆ ನೀಡುವ ಬದಲಿಗೆ ಆರೋಪಿಗೆ ಭದ್ರತೆ ನೀಡುತ್ತಿದ್ದೀರಿ ಎಂದು ಟ್ವೀಟ್​ ಮಾಡಿ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿಗೆ ಪ್ರಶ್ನೆ ಮಾಡಿದೆ.

TV9kannada Web Team

| Edited By: ganapathi bhat

Apr 05, 2022 | 1:10 PM

ಬೆಂಗಳೂರು: ಸಂತ್ರಸ್ತೆಗೆ ರಕ್ಷಣೆ ನೀಡುವ ಬದಲಿಗೆ ಆರೋಪಿಗೆ ನೂರಾರು ಪೊಲೀಸರ ನಿಯೋಜಿಸಿ ಬಿಗಿ ಭದ್ರತೆ ನೀಡುತ್ತಿರುವ ಸರ್ಕಾರ. ಪೊಲೀಸರನ್ನು ಕಳಿಸಬೇಕಿದ್ದಿದ್ದು ಅರೆಸ್ಟ್ ಮಾಡುವುದಕ್ಕೋ ಅಥವಾ ರಕ್ಷಣೆ ಮಾಡುವುದಕ್ಕೋ ಬಸವರಾಜ ಬೊಮ್ಮಾಯಿ ಅವರೇ? ಇದೇ “ಯುಪಿ ಮಾಡೆಲ್” ಅಲ್ಲವೇ? ಎಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿ ಪಕ್ಷದ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದಾರೆ. ಈ ನವರಂಗಿ ಆಟಗಳನ್ನು ಬಿಟ್ಟು ಕೂಡಲೇ ಆರೋಪಿಯನ್ನು ಬಂಧಿಸಿ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂಧಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಬಗ್ಗೆ ಕಾಂಗ್ರೆಸ್ ಟೀಕೆ ಖಾರವಾಗಿ ಟೀಕೆ ಮಾಡಿದೆ. ಸಂತ್ರಸ್ತೆಗೆ ರಕ್ಷಣೆ ನೀಡುವ ಬದಲಿಗೆ ಆರೋಪಿಗೆ ಭದ್ರತೆ ನೀಡುತ್ತಿದ್ದೀರಿ ಎಂದು ಟ್ವೀಟ್​ ಮಾಡಿ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿಗೆ ಪ್ರಶ್ನೆ ಮಾಡಿದೆ. ರೇಪಿಸ್ಟ್ ರಮೇಶ್​ನನ್ನು ಬಂಧಿಸಿ ಎಂದು ಕಾಂಗ್ರೆಸ್ ಹ್ಯಾಷ್​ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.

ತನ್ನ ಮತ್ತೊಂದು ಟ್ವೀಟ್​ನಲ್ಲಿ ರಮೇಶ್ ಜಾರಕಿಹೊಳಿಯ ದೃಶ್ಯವಷ್ಟೇ ಅಶ್ಲೀಲವಲ್ಲ. ಮಾತೂ ಅಶ್ಲೀಲ ಎಂದು ರಾಜ್ಯ ಕಾಂಗ್ರೆಸ್ ಘಟಕ ವ್ಯಂಗ್ಯವಾಡಿದೆ. ರಮೇಶ್ ಜಾರಕಿಹೊಳಿ ಬಿಜೆಪಿ ಸಂಸ್ಕೃತಿ ಬಿಂಬಿಸುವ ‘ದೊಡ್ಡ ದೊಡ್ಡ’ ಮಾತಾಡಿದ್ದಾರೆ. ಇದು ಹೊಲಸುತನದ ಪರಮಾವಧಿ. ಅಂಥಾ ಪದಗಳು ಬಿಜೆಪಿಗರ ಬಾಯಲ್ಲಿ ಮಾತ್ರ ಬರಲು ಸಾಧ್ಯ. ಬಸವರಾಜ ಬೊಮ್ಮಾಯಿಯವರೇ, ಕೇಸ್ ದಾಖಲಾಗಿದ್ದರೂ ರಮೇಶ್ ಬಂಧಿಸದೇ ಇಂತಹ ಕೀಳು ನಾಟಕ ಆಡಲು ಬಿಟ್ಟಿದ್ದೀರಾ? ರೇಪಿಸ್ಟ್ ರಮೇಶ್​ನನ್ನು ಬಂಧಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಯಾರೋ ಹೆಸರು ಹೇಳಿದ್ದಕ್ಕೆ ರಾಜೀನಾಮೆ ಕೇಳುವ ಬಿಜೆಪಿಗರೇ, ಚಾಂದಿನಿ ನಾಯ್ಕ್‌ರಿಗೆ ಹಲ್ಲೆ ನಡೆಸಿದ ಶಾಸಕ ಸಿದ್ದು ಸವದಿಯನ್ನು ಉಚ್ಛಾಟಿಸಿ. ತಡೆಯಾಜ್ಞೆ ತಂದಿರುವ 6 ಸಚಿವರ ರಾಜೀನಾಮೆ ಪಡೆಯಿರಿ. ಸದನ ಸದಸ್ಯರ ಚಾರಿತ್ರ್ಯ ಪ್ರಶ್ನಿಸಿದ ಸುಧಾಕರ್ ರಾಜೀನಾಮೆ ಪಡೆಯಿರಿ. ಅತ್ಯಾಚಾರಿ ಮಾಜಿ ಸಚಿವನ ಪಕ್ಷದಿಂದ ಉಚ್ಛಾಟಿಸಿ. ನೈತಿಕತೆ ತೋರಿ ಎಂದು ಕಾಂಗ್ರೆಸ್ ಹೇಳಿದೆ.

ಇದನ್ನೂ ಓದಿ: Ramesh Jarkiholi Press Meet | ನಾನು ಗಂಡಸು.. ಆ ಮಹಾನಾಯಕ ಗಾಂ.. ಅವನನ್ನು ಒದ್ದು ಒಳಗಾಕಿ -ರಮೇಶ್ ಜಾರಕಿಹೊಳಿ

ನಮ್ಮ ಅಕ್ಕನನ್ನು ಡಿ.ಕೆ.ಶಿವಕುಮಾರ್ ಒತ್ತೆಯಾಳಾಗಿಸಿ ಕೊಂಡಿದ್ದಾರೆ; ಆಕೆಯನ್ನು ವಾಪಸ್​ ತಂದುಕೊಟ್ಟುಬಿಡಿ -ಸಿಡಿ ಲೇಡಿ ಸಹೋದರ

Follow us on

Related Stories

Most Read Stories

Click on your DTH Provider to Add TV9 Kannada