60 ಅಡಿ ಆಳದ ಎರಡು ಬಾವಿ ನಿರ್ಮಾಣ; ಇಡಿ ಊರಿಗೆ ನೀರನ್ನು ಉಣಿಸಿದ ಕಾರವಾರದ ಮಹಿಳೆ
ಯಾರ ಸಹಾಯ ಇಲ್ಲದೆ ಏಕಾಂಗಿಯಾಗಿ ಒಬ್ಬಳೆ ಸಾಹಸಗೈದಿರುವ ಗೌರಿ ಒಂದಲ್ಲ ಎರಡಲ್ಲ ಬರೋಬ್ಬರಿ 60 ಅಡಿ ಆಳದ ಬಾವಿ ತೋಡಿ ಜಲ ಉಕ್ಕಿಸಿದ್ದಾರೆ. ಈ ಮಹಿಳೆ ತೋಡಿರುವ ಬಾವಿ ಈಗ ಗಿಡಮರಗಳಿಗೆ ಆಸರೆಯಾಗಿದೆ. ಅಷ್ಟೇ ಅಲ್ಲ ಅಕ್ಕಪಕ್ಕದ ಜನರ ನೀರಿನ ದಾಹವನ್ನು ತೀರಿಸಿದ್ದಾಳೆ.
ಉತ್ತರ ಕನ್ನಡ : ಜಿಲ್ಲೆಯ ಮಹಿಳೆಯೊಬ್ಬರು ಎರಡು ಬಾವಿಗಳನ್ನು ತೋಡಿ ಸಾಹಸ ಮೆರೆದಿದ್ದಾರೆ.ಲಾಕ್ಡೌನ್ನಲ್ಲಿ ಕಾಲಿ ಕೂರುವ ಬದಲು ನೀರಿನ ದಾಹ ತೀರಿಸಲು ಒಂದು ಬಾವಿ ನಿರ್ಮಾಣ ಮಾಡಬಹುದು ಎಂದು ನಿರ್ಧರಿಸಿದ 56 ವರ್ಷದ ಮಹಿಳೆ ಗೌರಿ ನಾಯ್ಕ್ ಒಂದೂವರೆ ತಿಂಗಳಲ್ಲಿ 60 ಪೀಟ್ ಆಳದ ಎರಡು ಬಾವಿ ತೋಡಿ ಇತರರಿಗೆ ಮಾದರಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಭಾಗವಾದ ಶಿರಸಿಯ ಗಣೇಶ ನಗರದ ಗೌರಿ ನಾಯ್ಕ್ ಎಂಬ ಮಹಿಳೆ 60 ಅಡಿ ಆಳದ ಬಾವಿ ತೋಡಿದ್ದಾರೆ. ಸರಾಗವಾಗಿ ಹಗ್ಗ ಹಿಡಿದು ಬಾವಿಯ ಆಳದಲ್ಲಿ ಇಳಿಯುವ ಈ ಮಹಿಳೆಯ ಸಾಧನೆ ನಿಜಕ್ಕೂ ಪ್ರಶಂಸನೀಯವಾದದ್ದು. ಕೊರೊನಾ ಮಹಾಮಾರಿಗೆ ಇಡೀ ದೇಶವೆ ಸ್ತಬ್ಧವಾದ ದಿನಗಳಲ್ಲಿ ಶಿರಸಿಯಲ್ಲಿ ಬಿರು ಬಿಸಿಲು, ಬತ್ತುತ್ತಿರುವ ಜಲ ಮೂಲಗಳು ಅದರಲ್ಲೂ ಗಿಡಮರಗಳಿಗೆ ನೀರುಣಿಸುವ ಮನೆ ಬಾವಿಗಳು ಕೂಡ ಬತ್ತಿ ಬರಡಾಗುವ ದಿನವಾಗಿತ್ತು. ಈ ಸಂದರ್ಭದಲ್ಲಿ ಗಿಡ ಮರಗಳಿಗೆ ನೀರುಣಿಸಬೇಕು, ಜತೆಗೆ ಅಕ್ಕಪಕ್ಕದ ಜನರ ನೀರಿನ ದಾಹ ಕೂಡ ತೀರಿಸಬೇಕು ಎನ್ನುವ ನಿಟ್ಟಿನಲ್ಲಿ ಗೌರಿ ನಾಯ್ಕ್ ಒಂದು ಬಾವಿ ತೋಡಿದ್ದಾರೆ.
ಯಾರ ಸಹಾಯ ಇಲ್ಲದೆ ಏಕಾಂಗಿಯಾಗಿ ಒಬ್ಬಳೆ ಸಾಹಸಗೈದಿರುವ ಗೌರಿ ಒಂದಲ್ಲ ಎರಡಲ್ಲ ಬರೋಬ್ಬರಿ 60 ಅಡಿ ಆಳದ ಬಾವಿ ತೋಡಿ ಜಲ ಉಕ್ಕಿಸಿದ್ದಾರೆ. ಈ ಮಹಿಳೆ ತೋಡಿರುವ ಬಾವಿ ಈಗ ಗಿಡಮರಗಳಿಗೆ ಆಸರೆಯಾಗಿದೆ. ಅಷ್ಟೇ ಅಲ್ಲ ಅಕ್ಕಪಕ್ಕದ ಜನರ ನೀರಿನ ದಾಹವನ್ನು ತೀರಿಸಿದ್ದಾಳೆ. ಈಗ ಗೌರಿ ಊರುಕೇರಿಯಲ್ಲಿ ಬಾವಿ ಗೌರಿ ಎಂದೇ ಮನೆ ಮಾತಾಗಿದ್ದು, ಎಲ್ಲರು ಈಕೆಯ ಸಾಧನೆಯನ್ನು ಹಾಡಿ ಹೊಗಳುತ್ತಿದ್ದಾರೆ.
ಕಳೆದ ಎರಡು ವರ್ಷದ ಹಿಂದೆ ಗೌರಿ ನಾಯ್ಕ್ ತಮ್ಮದೆ ತೋಟದ ಜಾಗದಲ್ಲಿ 60 ಅಡಿ ಆಳದ ಒಂದು ಬಾವಿ ತೋಡಿ ಹೆಸರು ಮಾಡಿದ್ದರು. ಈಗ ಮತ್ತೆ ಲಾಕ್ಡೌನ್ನಲ್ಲಿ ಬಾವಿ ತೋಡಿ ಮನೆ ಮಾತಾಗಿದ್ದಾರೆ. ಮುಂಜಾನೆ 5 ಗಂಟೆಗೆ ಎದ್ದು ಬಾವಿ ಕೆಲಸಕ್ಕೆ ಇಳಿದರೆ ಮಧ್ಯಾಹ್ನದ ಊಟ ಮುಗಿಸಿ ಮತ್ತೆ ಬಾವಿ ಕೆಲಸಕ್ಕೆ ಇಳಿದು ಸಂಜೆ 6 ರ ತನಕ ಕೆಲಸ ಮಾಡುತ್ತಿದ್ದರು. ಇನ್ನು ಮನೆಯಲ್ಲಿ ಸಂಬಂಧಿಕರು, ಮಕ್ಕಳು ಇದ್ದರೂ ಕೂಡಾ ಯಾರ ಸಹಾಯವೂ ಪಡೆಯದೆ ಓರ್ವಳೆ ಬಾವಿ ತೋಡಿ ಸಾಹಸಗೈದಿದ್ದಾರೆ.
ಸದ್ಯ ಗೌರಿಯ ಸಾಹಸಕ್ಕೆ ಮನೆ ಮಂದಿ ಖುಷಿಯಾಗಿದ್ದಾರೆ. ಎರಡು ಅಡಿ ಆಳದ ಗುಂಡಿ ತೋಡಲು ಹರಸಾಹಸಪಡುವ ಜನರ ಮಧ್ಯೆ 60 ಅಡಿ ಆಳದ ಬಾವಿ ತೋಡಿ ಸಾಹಸ ಮಾಡಿರುವ ಗೌರಿಯ ಸಾಧನೆ ನಿಜಕ್ಕೂ ಹೆಮ್ಮೆ ತರುವಂತದ್ದು.
ಇದನ್ನೂ ಓದಿ:
ನೀರೆಚ್ಚರದ ಬದುಕು | ನಾಡಿನ ಜಲಸುರಕ್ಷೆಗೆ ವರದಾನವಾಗಬಲ್ಲ ಇಂಗುಬಾವಿಗಳು