ನೀರೆಚ್ಚರದ ಬದುಕು | ನಾಡಿನ ಜಲಸುರಕ್ಷೆಗೆ ವರದಾನವಾಗಬಲ್ಲ ಇಂಗುಬಾವಿಗಳು

ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚು ನೀರನ್ನ ಭೂಮಿಯ ಒಡಲಿಗೆ ತುಂಬಿಸುವ ಕ್ಷಮತೆ ಇಂಗುಬಾವಿಗೆ ಇದೆ. ಉಳಿದ ಎಲ್ಲಾ ನೀರು ಇಂಗಿಸುವ ರಚನೆಗೆ ಹೋಲಿಸಿದರೆ ಇಂಗು ಬಾವಿಯ ನೀರು ಕುಡಿಯುವ ಶಕ್ತಿ ಅದ್ಭುತ.

ನೀರೆಚ್ಚರದ ಬದುಕು | ನಾಡಿನ ಜಲಸುರಕ್ಷೆಗೆ ವರದಾನವಾಗಬಲ್ಲ ಇಂಗುಬಾವಿಗಳು
ಇಂಗುಬಾವಿ ತೋಡುತ್ತಿರುವ ದೃಶ್ಯ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 26, 2021 | 6:08 PM

ಮುಂದೊಂದು ದಿನ ವಿಶ್ವದಲ್ಲಿ ಮಹಾಯುದ್ಧವೋ, ದೇಶ-ರಾಜ್ಯಗಳೊಳಗೆ ಅಂತರ್ಯುದ್ಧವೋ ಅಗುವುದಿದ್ದರೆ ಅದು ನೀರಿಗಾಗಿಯೇ ಎಂಬ ಮಾತುಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ನಮ್ಮನ್ನಾಳುವ ಸರ್ಕಾರಗಳ ಪಾಲಿಗೆ ಕರ್ನಾಟಕದ ಮಲೆನಾಡು-ಕರಾವಳಿ ಎಂಬುದು ಎಂದೂ ಬತ್ತದ ನೀರಿನ ಖಜಾನೆಯಂತೆ ಕಾಣಿಸುತ್ತಿದೆ. ಅಲ್ಲಿಂದ ಬಯಲುಸೀಮೆಗೆ ನೀರು ಹರಿಸುವ ಯೋಜನೆಗಳನ್ನು ಕಾಲಕ್ಕೊಬ್ಬರು, ಕಾಲಕ್ಕೊಂದು ರೀತಿಯಲ್ಲಿ ಜನರ ಮುಂದಿಟ್ಟು ಮರೀಚಿಕೆಯನ್ನು ನಿಜವೆಂದು ನಂಬಿಸಲು ಹಾತೊರೆಯುತ್ತಾರೆ. ಇಂಥ ದೊಡ್ಡದೊಡ್ಡ ಯೋಜನೆಗಳಲ್ಲಿ ನಿಜಕ್ಕೂ ಯಾರಿಗೆ ಲಾಭವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ನಮ್ಮ ನಮ್ಮ ಊರುಗಳ ನೀರ ನೆಮ್ಮದಿಗೆ ನಮ್ಮ ಮಿತಿಯಲ್ಲಿಯೇ ನಾವು ಎಷ್ಟೆಲ್ಲಾ ಮಾಡಬಹುದು ಗೊತ್ತೆ? ಹತ್ತಾರು ವರ್ಷಗಳಿಂದ ನಾಡಿನಲ್ಲಿ ನೀರೆಚ್ಚರ ಮೂಡಿಸಲು ಶ್ರಮಿಸುತ್ತಿರುವ ಹಿರಿಯ ಅಭ್ಯುದಯ ಪತ್ರಕರ್ತ ಶ್ರೀಪಡ್ರೆ ಇಂಥ ಹಲವು ಸರಳ ಉಪಾಯಗಳನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇಂಗುಬಾವಿಗಳನ್ನು ತೋಡುವಲ್ಲಿ ಮಣ್ಣು ಒಡ್ಡರು ಪ್ರಮುಖ ಪಾತ್ರ ವಹಿಸುತ್ತಾರೆ. ನಗರದಲ್ಲಿ 100ಕ್ಕೂ ಹೆಚ್ಚು ಮಣ್ಣು ಒಡ್ಡರ ಕುಟುಂಬಗಳು ಇದೆ. ಅವರ ಕುಲಕಸುಬೇ ಇಂಗುಬಾವಿಗಳನ್ನು ತೋಡುವುದು. ಇವರು ಅದ್ಭುತವಾಗಿ ಇಂಗುಬಾವಿಯನ್ನು ತೋಡುತ್ತಾರೆ. ಇವರಿಗೆ ಇಂಗುಬಾವಿಗಳ ಕುರಿತಾದ ಸಾಂಪ್ರದಾಯಿಕ ಜ್ಞಾನ ಇದೆ ಎನ್ನುವುದು ವಿಶೇಷ. ಸಾಮಾನ್ಯವಾಗಿ ಮೇಲ್ಸ್ತರದ ನೀರಿನ ಪದರ ಅಂದರೆ ಕೆರೆ ಮತ್ತು ಬಾವಿಗಳಲ್ಲಿ ಸಿಗುವ ನೀರು ಹಾಗೂ ಡೀಪ್​ವೆಲ್ ನೀರು ಅಂದರೆ ಬೋರ್​ವೆಲ್ ತೆಗೆಯುವುದು- ಹೀಗೆ ಎರಡು ಮಾದರಿಯಲ್ಲಿ ನೀರು ದಿನ ಬಳಕೆಗೆ ಲಭ್ಯವಾಗುತ್ತದೆ. ಮೆಲ್ಸ್ತರದ ನೀರನ್ನು ರೀಚಾರ್ಜ್ ಮಾಡುವುದು ಸುಲಭ, ಏಕೆಂದರೆ ಇದು ಕಣ್ಣಿಗೆ ಕಾಣುತ್ತದೆ. ಇನ್ನು ಬೆಂಗಳೂರಿನಲ್ಲಿ ನೀರಿಗಾಗಿ ಬಾವಿಗಳಿವೆ ಎನ್ನುವುದು ಸ್ವಲ್ಪಮಟ್ಟಿಗೆ ಸಮಾಧಾನಕರ ಸಂಗತಿ.

ಇಂಗುಬಾವಿಗಳು (ರೀಚಾರ್ಜ್ ವೆಲ್ಸ್) ಎಂಬುದು ನಮ್ಮಲ್ಲಿಗೆ ತೀರಾ ಹೊಸತು.  ಇಂಗುಬಾವಿಗಳನ್ನು ನಿರ್ಮಿಸುವ ಪ್ರಕ್ರಿಯೆ ಚೆನ್ನೈನಲ್ಲಿ 1990ರ ದಶಕದಲ್ಲಿ ಶುರುವಾಯಿತು . ಎಲಾಕ್ರೀಟಿ ಫೌಂಡೇಷನ್ ಎಂಬ ಕಟ್ಟಡ ನಿರ್ಮಾಣ ಸಂಸ್ಥೆ ಇಂಗುಬಾವಿಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಸಂಸ್ಥೆಯಲ್ಲಿ ನೀರಿನ ಬಗ್ಗೆ ಕಾಳಜಿ ಇರುವ ಓರ್ವ ಹಿರಿಯರಿದ್ದಾರೆ. ಅವರೇ  ಕಾಂತ್ ರಾಗಡೆ.  ಅವರ ಎಲಾಕ್ರೀಟಿ ಫೌಂಡೇಷನ್ ನಿರ್ಮಿಸಿದ ಮನೆಗಳಲ್ಲಿ ನೀರಿನ ಜಾಗೃತಿಯನ್ನು ಮೂಡಿಸಿದ್ದಾರೆ. ಆ ಕಾಲಕ್ಕೆ ಇಂಗುಬಾವಿಗಳನ್ನು ಮಾಡಲು ಕಾಂತ್ ರಾಗಡೆ ಅವರೇ ಪ್ರಾರಂಭಿಸಿದರು.

ಇಂಗುಬಾವಿ ಪರಿಕಲ್ಪನೆ ಆರಂಭ ಚೆನ್ನೈನಲ್ಲಿ ರೈನ್ ಸೆಂಟರ್ ಮೂಲಕ ಇಂಗುಬಾವಿಯನ್ನು ಈಗಲೂ ನಿರ್ಮಾಣ ಮಾಡಲಾಗುತ್ತಿದೆ. ನೀರನ್ನು ಇಂಗಿಸಲು ನಿರ್ಮಿಸು ಅತೀ ಕಡಿಮೆ ವ್ಯಾಪ್ತಿಯ ಬಾವಿ ಇದಾಗಿದೆ. ಚೆನ್ನೈನಲ್ಲಿ ಹೆಚ್ಚಿ ಚಾಲ್ತಿಯಲ್ಲಿದ್ದ ಈ ಇಂಗುಬಾವಿಗಳನ್ನು ಮೊದಲು ಬೆಂಗಳೂರಿಗೆ ತಂದಿದ್ದು, ರೈನ್ ವಾಟರ್ ಕ್ಲಬ್‌ನ ವಿಶ್ವನಾಥ್. ಸುಮಾರು 1995-2000ದ ದಶಕದಲ್ಲಿ ಇಂಗುಬಾವಿ ಎಂಬ ಅನನ್ಯ ವಿಧಾನವನ್ನು ಬೆಂಗಳೂರಿಗೆ ತಂದರು. ಇವರ ಇಂಗುಬಾವಿಗಳ ಕಡೆಗಿನ ನಡೆ ಎಷ್ಟು ಯಶಸ್ವಿಯಾಗಿದೆ ಎಂದರೆ ಇಂದು ಬೆಂಗಳೂರಿನಲ್ಲಿನ ಇಂಗುಬಾವಿಗಳು ಚೆನ್ನೈಯನ್ನೇ ಹಿಂದೆಹಾಕಿವೆ.

ಬೆಂಗಳೂರಿನಲ್ಲಿ 1 ದಶಲಕ್ಷದಷ್ಟು ಇಂಗುಬಾವಿಗಳನ್ನು ನಿರ್ಮಾಣ ಮಾಡಿದರೆ ಈ ಬಾವಿಗಳಿಂದ ದೊರೆಯುವ  ನೀರು ಇಡೀ ಬೆಂಗಳೂರಿನ ಜನರ ಅವಶ್ಯಕತೆಗೆ ಸಾಕು ಎನ್ನುವುದು ತಜ್ಞರ ಮಾತು. ಇತ್ತೀಚೆಗೆ ಇಂಗುಬಾವಿಗಳತ್ತ ಹೆಚ್ಚೆಚ್ಚು ಜನರು ಒಲವು ತಾಳುತ್ತಿದ್ದಾರೆ. ಅಲ್ಲದೇ, ಈಗ ಬೆಂಗಳೂರಿನ ಅಪಾರ್ಟ್​ಮೆಂಟ್​ಗಳಲ್ಲಿ ಈ ಬಗ್ಗೆ ಪ್ರಚಾರ ಮಾಡುವ ಜಲ ಕಾರ್ಯಕರ್ತರು, ಸ್ವಯಂಸೇವಕರು ಇದ್ದಾರೆ. ರೈನ್​ ಬೋ ಡ್ರೈವ್​ ಸರ್ಜಾಪುರ ರೋಡ್‌ನಲ್ಲಿ 250ಕ್ಕೂ ಹೆಚ್ಚು ಇಂಗು ಬಾವಿಗಳಿವೆ. ಅಲ್ಲಿನ ಮನೆಯವರೇ ಇದಕ್ಕೆ ಹಣ ಕೊಟ್ಟು ನಿರ್ಮಾಣ ಮಾಡಿರುವುದು ಅಥವಾ ಅವರೇ ತೋಡಿಸಿರುವುದು ಇದರ ವಿಶೇಷ.

Recharge wells

ಇಂಗುಬಾವಿಯನ್ನು ಮುಚ್ಚಳದಿಂದ ಮುಚ್ಚುತ್ತಿರುವ ಚಿತ್ರಣ

ರೈನೋ ಬೋ ಡ್ರೈವ್​ ರೈನೋ ಬೋ ಡ್ರೈವ್​ ಹೆಸರಿನ ಹೌಸಿಂಗ್ ಕಾಲೊನಿ  35 ಎಕರೆ ಜಾಗದಲ್ಲಿ ಇದೆ. ಇಲ್ಲಿನ ಮನೆಗಳಲ್ಲಿನ ಬಿದ್ದ ನೀರನ್ನು ಹೊರಗಡೆ ಹರಿಯದೆ ಭೂಮಿಯ ಒಳಗೆ ಇಂಗುವಂತೆ ನೋಡಿಕೊಳ್ಳುತ್ತಾರೆ. 100 ಮಳೆ ದಿನಗಳಲ್ಲಿ ಎಂಟರಿಂದ ಹತ್ತು ದಿನಗಳಲ್ಲಿ ಸುರಿಯುವ ನೀರು ಹೊರಹೋಗಬಹುದು. ಆದರೆ ಹೆಚ್ಚು ಇಂಗುಬಾವಿಗಳ ನಿರ್ಮಾಣದಿಂದ ಭೂಮಿಯೇ ನೀರನ್ನು ಕುಡಿದುಬಿಡುತ್ತದೆ.  ಕಾಂಪೌಂಡ್ ದಾಟಿ ಹೊರಹೋಗುವ ನೀರನ್ನು ಕಲ್ಯಾಣ ಮಂಟಪ, ಶಾಲೆ, ಮಸೀದಿ, ಚರ್ಚಿನಂಥ ದೊಡ್ಡ ಕಟ್ಟಡಗಳ ಪಕ್ಕದಲ್ಲಿ ಇಂಗುಬಾವಿಗಳನ್ನು ನಿರ್ಮಿಸುವ ಮೂಲಕ ಬಳಕೆಗೆ ತರಬಹುದು.

ಬೆಂಗಳೂರಿನಲ್ಲಿ ಇಂತಹ ಹಲವು ಕಾರ್ಪೊರೇಟ್ ಕಟ್ಟಡಗಳಲ್ಲಿ ಒಂದಕ್ಕಿಂತ ಹೆಚ್ಚು ಇಂಗುಬಾವಿಗಳನ್ನು ನಿರ್ಮಿಸಬಹುದು ಮತ್ತು ಇಂತಹ ಇಂಗುಬಾವಿಗಳನ್ನು ನಿರ್ಮಾಣ ಮಾಡಿದ ಸಾಕಷ್ಟು ನಿದರ್ಶನಗಳಿವೆ. ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚು ನೀರನ್ನು ಭೂಮಿಯ ಒಡಲಿಗೆ ತುಂಬಿಸುವ ಕಾರ್ಯವನ್ನು ಮಾಡುವ ಕ್ಷಮತೆ ಇಂಗುಬಾವಿಗೆ ಇದೆ. ಉಳಿದ ಎಲ್ಲಾ ನೀರು ಇಂಗಿಸುವ ರಚನೆಗೆ ಹೋಲಿಸಿದರೆ ಇಂಗುಬಾವಿಯ ನೀರು ಕುಡಿಯುವ ಶಕ್ತಿ ಅದ್ಭುತ.

ಸಾಮಾನ್ಯವಾಗಿ ನಗರದ ರಸ್ತೆಗಳಲ್ಲಿ ನೆರೆ ಬಹಳ ಸುಲಭವಾಗಿ ಸೃಷ್ಟಿಯಾಗುತ್ತದೆ. ಕಾರಣ, ಎರಡೂ ಕಡೆಗಳಲ್ಲಿ ಕಟ್ಟಡಗಳು ಇರುತ್ತದೆ. ನೀರು ಹರಿವಿಗೆ ಪ್ರತ್ಯೇಕ ಜಾಗ ಇರುವುದಿಲ್ಲ. ಹಾಗಾಗಿ ನೆರೆ ಬರುತ್ತದೆ. ಅಲ್ಲಿ ಬಿದ್ದ ನೀರನ್ನು ಅಲ್ಲೇ ಇಂಗುವಂತೆ ಮಾಡುವುದು ಅನಿವಾರ್ಯ. ಹೈದರಾಬಾದ್ ನಗರದಲ್ಲಿ ಕೂಡ ಬಿದ್ದ ನೀರನ್ನು ಅಲ್ಲೇ ಇಂಗಿಸುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ದೊಡ್ಡದೊಡ್ಡ ಹೊಂಡಗಳನ್ನು ತೋಡಿ  ನೀರು ಇಂಗಿಸುತ್ತಾರೆ. ಬೆಂಗಳೂರಿನಲ್ಲಿ ಮಣ್ಣು ಒಡ್ಡರು ಪಾರಂಪರಿಕ ಜ್ಞಾನ ಇಟ್ಟುಕೊಂಡು ಇಲ್ಲಿ ಕೆಲಸ ಮಾಡುತ್ತಾರೆ ಮತ್ತು ಸಾವಿರಾರು ಇಂಗುಬಾವಿಗಳನ್ನು ತೋಡಿದ್ದಾರೆ ಎನ್ನವುದು ವಿಶೇಷ.

ಪ್ರಿಯ ಓದುಗರೇ, ‘ನೀರೆಚ್ಚರದ ಬದುಕು’ ಸರಣಿಯಲ್ಲಿ ನಿಮ್ಮ ಪಾಲೂ ಇರಲಿ. ನೀವು ಓದಿದ ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ  ಮತ್ತು ನೀವು ಕಂಡುಕೊಂಡ ನೀರು ಉಳಿಸುವ ಉಪಾಯಗಳನ್ನು ನಮ್ಮೊಂದಿಗೂ ಹಂಚಿಕೊಳ್ಳಿ. ನಿಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯೊಂದಿಗೆ ಸೂಕ್ತ ಚಿತ್ರಗಳೂ ಬರಹದ ಜೊತೆಗಿರಲಿ. ನಮ್ಮ ಇಮೇಲ್ ವಿಳಾಸ tv9kannadadigital@gmail.com

ಪರಿಕಲ್ಪನೆ ಮತ್ತು ನಿರೂಪಣೆ: ಪ್ರೀತಿ ಶೆಟ್ಟಿಗಾರ್

ಇದನ್ನೂ ಓದಿ: ನೀರು ಪೋಲು ಮಾಡುವುದೂ ಸಮಾಜದ್ರೋಹ ಅಂತಾರೆ ಶ್ರೀಪಡ್ರೆ

ಇದನ್ನೂ ಓದಿ: ಶ್ರೀಪಡ್ರೆ ಹಂಚಿಕೊಂಡ ಈ ಜಲಜಾಗೃತಿ ಕಥನಗಳಲ್ಲಿ ಬದುಕಿನ ಪಾಠಗಳಿವೆ

Published On - 6:07 pm, Fri, 26 March 21

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ