AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನೆ ಒಂದು ಮಾತಾಡ್ತಾರೆ, ಇಂದು ಒಂದು ಹೇಳ್ತಾರೆ, ನಾಳೆ ಮತ್ತೊಂದು ಹೇಳ್ತಾರೆ, ಎಲ್ಲದಕ್ಕೂ ಉತ್ತರಿಸೋಕಾಗಲ್ಲ -ರಮೇಶ್​ ಸವಾಲ್​ಗೆ ಡಿಕೆಶಿ ರಿಯಾಕ್ಷನ್​

ನಿನ್ನೆ ಒಂದು ಮಾತಾಡುತ್ತಾರೆ, ಇಂದು ಒಂದು ಹೇಳುತ್ತಾರೆ, ನಾಳೆ ಮತ್ತೊಂದು ಹೇಳುತ್ತಾರೆ, ಎಲ್ಲದಕ್ಕೂ ಉತ್ತರಿಸಲಾಗಲ್ಲ. ನಾನು ನನ್ನ ಡ್ಯೂಟಿ ಮಾಡುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ನಿನ್ನೆ ಒಂದು ಮಾತಾಡ್ತಾರೆ, ಇಂದು ಒಂದು ಹೇಳ್ತಾರೆ, ನಾಳೆ ಮತ್ತೊಂದು ಹೇಳ್ತಾರೆ, ಎಲ್ಲದಕ್ಕೂ ಉತ್ತರಿಸೋಕಾಗಲ್ಲ -ರಮೇಶ್​ ಸವಾಲ್​ಗೆ ಡಿಕೆಶಿ ರಿಯಾಕ್ಷನ್​
ಡಿ.ಕೆ.ಶಿವಕುಮಾರ್
Follow us
KUSHAL V
|

Updated on:Mar 27, 2021 | 7:11 PM

ಚೆನ್ನೈ: ಪಾಪ.. ಅವರು ಒತ್ತಡದಲ್ಲಿದ್ದಾರೆ, ಮಾತನಾಡಿದ್ದಾರೆ ಎಂದು ರಮೇಶ್​ ಜಾರಕಿಹೊಳಿ ನಡೆಸಿದ ಸುದ್ದಿಗೋಷ್ಠಿ ಬಗ್ಗೆ ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಆರೋಪಗಳಿಗೆ ಉತ್ತರಿಸುತ್ತ ಕೂರಲು ಆಗುವುದಿಲ್ಲ. ನನ್ನ ಬಳಿ ಯಾವುದೇ ಯುವತಿ ಬಂದಿಲ್ಲ, ಮಾಹಿತಿ ಇಲ್ಲ. ಕಾನೂನು ಇದೆ, ಅಧಿಕಾರಿಗಳು ಇದ್ದಾರೆ, ತನಿಖೆ ಮಾಡ್ತಾರೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಶಿವಕುಮಾರ್​ ಮಾತನಾಡಿದ್ದಾರೆ.

ಅವರದ್ದೇ ಸರ್ಕಾರವಿದೆ, ಯಾವುದೇ ಕ್ರಮಕೈಗೊಳ್ಳಬಹುದು. ಯಾವುದೇ ತನಿಖೆ ನಡೆಸಿ ಕ್ರಮಕೈಗೊಳ್ಳಬಹುದು. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಏನೋ ಸಮಸ್ಯೆ ಇರಬೇಕು, ಅವರ ವೈಯಕ್ತಿಕ ವಿಚಾರ. ಅದು ಅವರ ವೈಯಕ್ತಿಕ, ನನಗೂ ಅದಕ್ಕೂ ಸಂಬಂಧವಿಲ್ಲ. ನಿನ್ನೆ ಒಂದು ಮಾತಾಡುತ್ತಾರೆ, ಇಂದು ಒಂದು ಹೇಳುತ್ತಾರೆ, ನಾಳೆ ಮತ್ತೊಂದು ಹೇಳುತ್ತಾರೆ, ಎಲ್ಲದಕ್ಕೂ ಉತ್ತರಿಸಲಾಗಲ್ಲ. ನಾನು ನನ್ನ ಡ್ಯೂಟಿ ಮಾಡುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

ಇತ್ತ, ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು ಮುನ್ನೆಲೆಗೆ ಬಂದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ನಾಯಕರು ಪೇಚಿಗೆ ಸಿಲುಕಿರುವುದು ತಿಳಿದುಬಂದಿದೆ. ಡಿಕೆಶಿ ವಿಚಾರಕ್ಕೆ ಮುಜುಗರ ಆಗುತ್ತಿದೆ ಎಂದು ‘ಕೈ’ ನಾಯಕರು ನಿಲುವು ತಾಳಿದ್ದಾರೆ. ಹಾಗಾಗಿ, ಡಿಕೆಶಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡದಿರಲು ನಿರ್ಧಾರ ಕೈಗೊಂಡಿದ್ದಾರೆ. ಪ್ರತಿಕ್ರಿಯೆ ನೀಡದಿರಲು ಕೆಲ ಕಾರ್ಯಾಧ್ಯಕ್ಷರು ನಿರ್ಧಾರ ಮಾಡಿದ್ದಾರೆ.

‘ಡಿಕೆಶಿ ಒತ್ತಡಕ್ಕೆ ಮಣಿದು ಪ್ರಸ್ತಾಪ ಮಾಡಬಾರದಿತ್ತು’ ಡಿಕೆಶಿ ಒತ್ತಡಕ್ಕೆ ಮಣಿದು ಪ್ರಸ್ತಾಪ ಮಾಡಬಾರದಿತ್ತು. ಸದನದಲ್ಲಿ ಸಿಡಿ ವಿಚಾರವನ್ನ ಪ್ರಸ್ತಾಪ‌ ಮಾಡಬಾರದಿತ್ತು. ಸದನದಲ್ಲಿ ಮೌನವಾಗಿದ್ದರೆ ಸಮರ್ಥಿಸಿಕೊಳ್ಳಬಹುದಿತ್ತು. ಈಗ ಹೇಗಾದರೂ ಸಮರ್ಥನೆ ಮಾಡಿಕೊಳ್ಳಬಹುದಿತ್ತು. ಆದರೆ ಡಿಕೆಶಿ ಸ್ವಹಿತಾಸಕ್ತಿಯಿಂದ ಇಷ್ಟೆಲ್ಲ ಬೆಳವಣಿಗೆ ಆಗಿದೆ. ಸ್ವಹಿತಾಸಕ್ತಿಯಿಂದ ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾಗಿದೆ. ಸಿಡಿ ಪ್ರಕರಣದಿಂದ ಕಾಂಗ್ರೆಸ್​ ಪಕ್ಷಕ್ಕೆ ಡ್ಯಾಮೇಜ್ ಆಗ್ತಿದೆ. ಹೀಗಾಗಿ, ಬಹಿರಂಗ ಹೇಳಿಕೆಗಳನ್ನು ನೀಡುವ ಮೊದಲು ಮತ್ತೊಮ್ಮೆ ಚಿಂತನೆ ನಡೆಸಲು ‘ಕೈ’ ನಾಯಕರ ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ: Ramesh Jarkiholi Press Meet | ನಾನು ಗಂಡಸು.. ಆ ಮಹಾನಾಯಕ ಗಾಂ.. ಅವನನ್ನು ಒದ್ದು ಒಳಗಾಕಿ -ರಮೇಶ್ ಜಾರಕಿಹೊಳಿ

Published On - 6:46 pm, Sat, 27 March 21

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ