ಗದಗದಲ್ಲಿ ಭೂಕುಸಿತ, ಸ್ಥಳೀಯರಿಂದ 8 ಅಡಿಯ ಗುಂಡಿಗೆ ಬಿದ್ದಿದ್ದ ವ್ಯಕ್ತಿ ರಕ್ಷಣೆ

|

Updated on: Oct 28, 2019 | 6:36 AM

ಗದಗ: ಜಿಲ್ಲೆಯಲ್ಲಿ ಭಾರಿ ಮಳೆಯ ಪರಿಣಾಮ ನರಗುಂದ ಪಟ್ಟಣದ ಕಸಬಾ ಓಣಿಯ ಕೆಲವು ಕಡೆ ಭೂಕುಸಿತ ಉಂಟಾಗಿದೆ. ಭೂಕುಸಿತದ ವೇಳೆ ರತ್ನಾಕರ ದೇಶಪಾಂಡೆ ಎಂಬ ವ್ಯಕ್ತಿ ಗುಂಡಿಯಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ರತ್ನಾಕರ ಅವರು ಹಿತ್ತಲಿನಲ್ಲಿ ಹೂ ಕೀಳಲು ಹೋಗಿದ್ದರು, ಈ ವೇಳೆ ದಿಢೀರ್ ಭೂ ಕುಸಿತವಾದ ಪರಿಣಾಮ ಸುಮಾರು 8 ಅಡಿ ಆಳದ ಗುಂಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಇದನ್ನು ಗಮನಿಸಿದ ಕೆಲ ಸ್ಥಳೀಯರು ರತ್ನಾಕರ ಅವರನ್ನ ಏಣಿ ಹಾಗೂ ಹಗ್ಗದ ಮೂಲಕ ರಕ್ಷಿಸಿದ್ದಾರೆ. ಕ್ಷಣಾರ್ಧದಲ್ಲಿ ರತ್ನಾಕರ ಪ್ರಾಣಾಪಾಯದಿಂದ‌ […]

ಗದಗದಲ್ಲಿ ಭೂಕುಸಿತ, ಸ್ಥಳೀಯರಿಂದ 8 ಅಡಿಯ ಗುಂಡಿಗೆ ಬಿದ್ದಿದ್ದ ವ್ಯಕ್ತಿ ರಕ್ಷಣೆ
Follow us on

ಗದಗ: ಜಿಲ್ಲೆಯಲ್ಲಿ ಭಾರಿ ಮಳೆಯ ಪರಿಣಾಮ ನರಗುಂದ ಪಟ್ಟಣದ ಕಸಬಾ ಓಣಿಯ ಕೆಲವು ಕಡೆ ಭೂಕುಸಿತ ಉಂಟಾಗಿದೆ. ಭೂಕುಸಿತದ ವೇಳೆ ರತ್ನಾಕರ ದೇಶಪಾಂಡೆ ಎಂಬ ವ್ಯಕ್ತಿ ಗುಂಡಿಯಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.

ರತ್ನಾಕರ ಅವರು ಹಿತ್ತಲಿನಲ್ಲಿ ಹೂ ಕೀಳಲು ಹೋಗಿದ್ದರು, ಈ ವೇಳೆ ದಿಢೀರ್ ಭೂ ಕುಸಿತವಾದ ಪರಿಣಾಮ ಸುಮಾರು 8 ಅಡಿ ಆಳದ ಗುಂಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಇದನ್ನು ಗಮನಿಸಿದ ಕೆಲ ಸ್ಥಳೀಯರು ರತ್ನಾಕರ ಅವರನ್ನ ಏಣಿ ಹಾಗೂ ಹಗ್ಗದ ಮೂಲಕ ರಕ್ಷಿಸಿದ್ದಾರೆ. ಕ್ಷಣಾರ್ಧದಲ್ಲಿ ರತ್ನಾಕರ ಪ್ರಾಣಾಪಾಯದಿಂದ‌ ಪಾರಾಗಿದ್ದಾರೆ.

ಕಳೆದ ಒಂದು ವಾರದಲ್ಲಿ ಸುಮಾರು 15 ಕಡೆ ಇದೇ ರೀತಿ ಭೂಕುಸಿತವಾಗಿದ್ದು, ನರಗುಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಸದ್ಯ ಸಚಿವ ಸಿ.ಸಿ.ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 4:53 pm, Sun, 27 October 19