ಕಿರಿಯ ಎಂಜಿನಿಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪವರ್ ಮನ್​

ಕೆಲಸ ವಿಚಾರಕ್ಕೆ ಸಂಬಂಧಿಸಿ ಕಿರಿಯ ಇಂಜಿನಿಯರ್ ಚಂದ್ರನಾಯಕ್ ಮತ್ತು ಲೈನ್ ಮ್ಯಾನ್ ಮಹದೇವಸ್ವಾಮಿ ನಡುವೆ ಬೆಳಿಗ್ಗೆ ಗಲಾಟೆಯಾಗಿದೆ.

ಕಿರಿಯ ಎಂಜಿನಿಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪವರ್ ಮನ್​
ಎಂಜಿನಿಯರ್ ಚಂದ್ರನಾಯಕ್ , ಲೈನ್ ಮ್ಯಾನ್ ಮಹದೇವಸ್ವಾಮಿ (ಮೇಲಿನ ಚಿತ್ರದಲ್ಲಿ 2ನೆಯ ವ್ಯಕ್ತಿ)
Edited By:

Updated on: Jan 27, 2021 | 3:25 PM

ಚಾಮರಾಜನಗರ: ಕಿರಿಯ ಎಂಜಿನಿಯರ್ ಮೇಲೆ ಪವರ್​ ಮ್ಯಾನ್​ನಿಂದ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ತಾಲೂಕಿನ ಬದನಗುಪ್ಪೆಯ ಚೆಸ್ಕಾಂ ಶಾಖಾ ಕಚೇರಿಯಲ್ಲಿ ನಡೆದಿದೆ.

ಕೆಲಸ ವಿಚಾರಕ್ಕೆ ಸಂಬಂಧಿಸಿ ಕಿರಿಯ ಇಂಜಿನಿಯರ್ ಚಂದ್ರನಾಯಕ್ ಮತ್ತು ಪವರ್ ಮ್ಯಾನ್ ಮಹದೇವಸ್ವಾಮಿ ನಡುವೆ ಬೆಳಿಗ್ಗೆ ಗಲಾಟೆಯಾಗಿದೆ. ಚಂದ್ರನಾಯಕ್ ಮೇಲೆ ಮಹದೇವಸ್ವಾಮಿ ಹಲ್ಲೆ ಮಾಡಿದ್ದಾರೆ. ಗಾಯಾಳು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಈ ಪ್ರಕರಣ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದು, ಮಹದೇವಸ್ವಾಮಿ ತಲೆಮರೆಸಿಕೊಂಡಿದ್ದಾರೆ.

ಸ್ಪೀಕರ್ ಕಡೆಯಿಂದ ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ.. ವಂಚನೆ ಮಾಡಿದ್ದ ಆಸಾಮಿ ಅಂದರ್​