ಗದಗ: ಬೈಕ್ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ಅಡವಿಸೋಮಾಪುರ ಸಮೀಪ ನಡೆದಿದೆ. ಅಡವಿಸೋಮಾಪುರದ ನಿವಾಸಿ ಪೀರ್ಸಾಬ್ ಕುಮನೂರ (55) ಮೃತ ದುರ್ದೈವಿ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಪೀರ್ಸಾಬ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಟಿಪ್ಪರ್ಗಳ ಹಾವಳಿಗೆ ಬೇಸತ್ತು ರಸ್ತೆ ತಡೆದು ಧರಣಿ ಮಾಡಿದರು. ಟಿಪ್ಪರ್ಗಳ ಮಾಲೀಕತ್ವ ಹೊಂದಿರುವ BSCPL ಕಂಪನಿ ವಿರುದ್ಧ ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದರು.
ಅಪಘಾತದ ಬಳಿಕ ಚಾಲಕ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ. ಹೀಗಾಗಿ, ಘಟನಾ ಸ್ಥಳಕ್ಕೆ ತಡವಾಗಿ ಬಂದ ಪೊಲೀಸರ ವಿರುದ್ಧ ಸಹ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು: ಕಲ್ಲಿನ ಕ್ವಾರಿಯಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ವಾಪಸ್ ಬರಲೇ ಇಲ್ಲ..