ಕೊರೊನಾ ಕಠಿಣ‌ ನಿಯಮದ ಎಫೆಕ್ಟ್; ಊಟವನ್ನು ಹೊಳೆಗೆ ಸುರಿದ ವ್ಯಾಪಾರಿಗಳು

|

Updated on: Apr 24, 2021 | 8:08 AM

ಎಂಟು ಫಾಸ್ಟ್‌ಪುಡ್ ಅಂಗಡಿಗಳು ಹಾಗೂ ಬೇಕರಿಯ ಆಹಾರ ಪದಾರ್ಥಗಳನ್ನು ವ್ಯಾಪಾರಿಗಳು ಸುರಿದಿದ್ದಾರೆ. ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಕೊರೊನಾ ಕಠಿಣ‌ ನಿಯಮದ ಎಫೆಕ್ಟ್; ಊಟವನ್ನು ಹೊಳೆಗೆ ಸುರಿದ ವ್ಯಾಪಾರಿಗಳು
ಮೈಸೂರಿನಲ್ಲಿ ಊಟವನ್ನು ಹೊಳೆಗೆ ಸುರಿದ ಬೀದಿ ಬದಿಯ ವ್ಯಾಪಾರಿಗಳು
Follow us on

ಮೈಸೂರು: ಒಂದೆಡೆ ಕೊರೊನಾ ನಿಯಂತ್ರಣ ಮಾಡಬೇಕಾದ ಅನಿವಾರ್ಯತೆ, ಇನ್ನೊಂದೆಡೆ ಬದುಕು ಸಾಗಿಸಲೇಬೇಕಾದ ಅನಿವಾರ್ಯತೆ. ಈ ಎರಡರ ನಡುವೆ ಜನರು ಸಿಕ್ಕಿಕೊಂಡು ಒದ್ದಾಡುವಂತ ಪರಿಸ್ಥಿತಿ ಎಲ್ಲೆಲ್ಲೂ ನಿರ್ಮಾಣ ಆಗಿದೆ. ಪ್ರತಿ ನಿತ್ಯ ದುಡಿದರೆ ಮಾತ್ರ ಹೊಟ್ಟೆಪಾಡು ನಡೆಯುತ್ತದೆ ಎಂಬಂತಹ ಜನರ ಬದುಕಿಗೆ ಲಾಕ್​ಡೌನ್​ ನಿಯಮಗಳಿಂದ ಹೆಚ್ಚು ತೊಂದರೆ ಆಗಿದೆ. ಮೈಸೂರಿನಲ್ಲಿ ಬೀದಿ ಬದಿಯ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಮೈಸೂರಿನಲ್ಲಿ ಬೀದಿ ಬದಿಯ ವ್ಯಾಪಾರಿಗಳು ಚಿಂತೆಗೀಡಾಗಿದ್ದಾರೆ. ಕಠಿಣ ಲಾಕ್​ಡೌನ್​ ನಿಯಮಗಳಿಂದಾಗಿ ಅವರ ವ್ಯಾಪಾರಕ್ಕೆ ಹೊಡೆತಬಿದ್ದಿದೆ. ವ್ಯಾಪಾರಕ್ಕೆಂದು ಸಿದ್ಧ ಮಾಡಿಕೊಂಡು ತಂದಿದ್ದ ಅಡುಗೆಯನ್ನು ಹೊಳೆಗೆ ಸುರಿದಿರುವುದು ವರದಿ ಆಗಿದೆ. ಹುಣಸೂರು ಪಟ್ಟಣದ ಕಲ್ಕುಣಿಕೆಯಲ್ಲಿ ನಡೆದಿರುವ ಘಟ‌ನೆಯ ವಿಡಿಯೋ ಕೂಡ ವೈರಲ್​ ಆಗುತ್ತಿದೆ.

ನಗರದ ಬೀದಿ ಬದಿಯಲ್ಲಿ ಫಾಸ್ಟ್​ಫುಡ್​, ಬೇಕರಿ ಮುಂತಾದ ಅಂಗಡಿಗಳನ್ನು ಇಟ್ಟುಕೊಂಡು ಅನೇಕರು ಜೀವನ ಸಾಗಿಸುತ್ತಿದ್ದಾರೆ. ಲಾಕ್​ಡೌನ್​ ಆದೇಶದಿಂದಾಗಿ ಅವರೆಲ್ಲರ ವ್ಯಾಪಾರಕ್ಕೆ ತೊಂದರೆ ಆಗಿದೆ. ಈಗಾಗಲೇ ಸಿದ್ಧಪಡಿಸಿಕೊಂಡು ತಂದಿದ್ದ ಆಹಾರ ಪದಾರ್ಥಗಳನ್ನು ಹೊಳೆಗೆ ಸುರಿಯದೇ ಬೇರೆ ದಾರಿ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

‘ಊಟ ಹಳಸಿಹೋದರೆ ಅದರ ಕಥೆ ಮುಗಿಯಿತು. ಅದನ್ನು ತಿನ್ನುವುಂತಿಲ್ಲ. ಚಿಕನ್​ ಅಂಗಡಿಯವರಿಗೆ ನಾವು ದುಡ್ಡು ಎಲ್ಲಿಂದ ಕೊಡುವುದು? ನಾಳೆ ಸಂಘಕ್ಕೆ ದುಡ್ಡು ಕಟ್ಟಬೇಕು. ಬಡವರಿಗೆ ಹೀಗೆ ಮಾಡಿದರೆ ಕಷ್ಟ ಆಗುತ್ತದೆ. ತಿನ್ನುವ ಅನ್ನಕ್ಕೆ ಮಣ್ಣು ಹಾಕುತ್ತಿದ್ದಾರೆ’ ಎಂದು ಬೀದಿ ಬದಿಯ ಫಾಸ್ಟ್​ಫುಡ್​ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಎಂಟು ಫಾಸ್ಟ್‌ಪುಡ್ ಅಂಗಡಿಗಳು ಹಾಗೂ ಬೇಕರಿಯ ಆಹಾರ ಪದಾರ್ಥಗಳನ್ನು ವ್ಯಾಪಾರಿಗಳು ಸುರಿದಿದ್ದಾರೆ. ಸರ್ಕಾರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: Corona Positive Report : ಕಣ್ಣಲ್ಲೇ ಅಳೆದು ಕೊರೊನಾ ಪಾಸಿಟಿವ್‌ ರಿಪೋರ್ಟ್‌ ಕೊಡ್ತಾರೆ ಆನೆಕಲ್‌ನ ಆಕ್ಷಫರ್ಡ್‌ ಆಸ್ಪತ್ರೆಯಲ್ಲಿ