
ಬೆಂಗಳೂರು: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಸರ್ಕಾರ ಲಾಕ್ಡೌನ್ ಅಸ್ತ್ರ ಉಪಯೋಗಿಸುತ್ತಿದೆ. ಆದರೆ ಈ ಅಸ್ತ್ರದಿಂದ ನಿಜಕ್ಕೂ ಕೊರೊನಾವನ್ನ ಕಟ್ಟಿ ಹಾಸಲು ಸಾಧ್ಯವಿದಿಯಾ? ಲಾಕ್ಡೌನ್ ಮಾಡುದ್ರೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಲಾಕ್ಡೌನ್ ಬೇಡ ಅಂತಾ ಸಿಎಂಗೆ ಸಲಹೆ ನೀಡಿದ್ದಾರೆ.
ಪದೇಪದೆ ಲಾಕ್‌ಡೌನ್‌ನಿಂದ ಕೊರೊನಾ ನಿಯಂತ್ರಣವಾಗಲ್ಲ. ರಾಜ್ಯದಲ್ಲಿ ಸದ್ಯಕ್ಕೆ ಱಪಿಡ್ ಕಿಟ್‌ಗಳ ಅವಶ್ಯಕತೆ ಇದೆ. ಸದ್ಯ 2ರಿಂದ 3 ಲಕ್ಷ ಱಪಿಡ್ ಕಿಟ್ ಒದಗಿಸಿದರೆ ಸಾಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಿಎಂ ಬಿಎಸ್ಯಡಿಯೂರಪ್ಪ ರವರಿಗೆ ಮನವಿ ಮಾಡಿಕೊಂಡಿದ್ದಾರೆ.
ಱಪಿಡ್ ಕಿಟ್‌ಗಳಿಂದ ಸೋಂಕಿತರನ್ನು ಪತ್ತೆ ಹಚ್ಚಬಹುದು. ಕೆಲವರಿಗೆ ಆ್ಯಂಟಿ ಬಾಡಿ ಟೆಸ್ಟ್ ಮಾಡಲು ಕಿಟ್ ಬೇಕು. ಹೀಗೆ ಮಾಡಿದರೆ ಸೋಂಕಿತರನ್ನು ಬೇಗ ಪತ್ತೆಹಚ್ಚಬಹುದು. ಆದ್ರೆ ಲಾಕ್‌ಡೌನ್‌ನಿಂದ ಕೊರೊನಾ ನಿಯಂತ್ರಣವಾಗಲ್ಲ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Published On - 10:37 am, Tue, 21 July 20