ಬೆಂಗಳೂರು: ಹುಳಿಮಾವು ಕೆರೆ ಕೋಡಿ ಒಡೆದು ಹಾನಿಯಾಗಿರುವ ಸ್ಥಳಕ್ಕೆ ಇಂದು ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಘಟನೆ ಸಂಬಂಧಿಸಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಲೋಕಾಯುಕ್ತರಿಗೆ ಬಿಬಿಎಂಪಿ ಅಧಿಕಾರಿಗಳು ಡಿಸಿಪಿ ಇಶಾಪಂಥ್ ಸಾಥ್ ನೀಡಿದ್ದಾರೆ. ಕೆರೆಕೋಡಿ ಒಡೆಯಲು ಏನು ಕಾರಣ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಪರಿಶೀಲನೆ ವೇಳೆ ಬಿಬಿಎಂಪಿ ಅಧಿಕಾರಿಗಳನ್ನ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ತರಾಟೆಗೆ ತಗೆದುಕೊಂಡಿದ್ದಾರೆ. ಸಮಸ್ಯೆಗಳ ಬಗ್ಗೆ ಕಾರಣ ಕೇಳಿ ವಿಷಯ ಸಂಗ್ರಹಿಸುತ್ತಿರುವಾಗ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಅಧಿಕಾರಿ ಮೋಹನ್ ಕೃಷ್ಣಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಲ್ಲಿ ಯಾರ ತಪ್ಪು ಅಂತ ನಾನು ಹೇಳಲು ಹೋಗುವುದಿಲ್ಲ. ಆದರೆ ಅಪರಾಧಿಗಳಿಗೆ ಶಿಕ್ಷೆ ಆಗಲೇಬೇಕು. ನಾನು ಈಗಾಗಲೇ ಬಿಬಿಎಂಪಿ ಬಳಿಯಿಂದ ವರದಿ ಕೇಳಿದ್ದೇನೆ. ಯಾರ ತಪ್ಪು ಅಂತ ಹೇಳುವುದಕ್ಕೂ ಮೊದಲು ಪರಿಹಾರ ಕಾರ್ಯಕ್ರಮ ಹೇಗೆ ಸಾಗಿದೆ ಅನ್ನೋದು ಮುಖ್ಯ. ಅಧಿಕಾರಿಗಳು ತಮ್ಮ ಕೆಲಸ ಮಾಡಬೇಕು, ಇಲ್ಲದಿದ್ದರೆ ನಾನು ನನ್ನ ಕೆಲಸ ಹೇಗೆ ಮಾಡುಬೇಕೆಂದು ನನಗೆ ಗೊತ್ತು ಎಂದು ಮಾತಿನ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.