ಬೆಂಗಳೂರು: ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಆದರೆ ಈ ಬಾರಿ ಮಾರ್ಚ್ ತಿಂಗಳಿನಲ್ಲಿ ಬಂದಿದೆ. ಈ ಸಮಯದಲ್ಲಿ ವಿಪರೀತ ಚಳಿಯ ಕಾಲ. ಚಳಿ ಉಚ್ಛ್ರಾಯದಲ್ಲಿದ್ದು, ಅಂದು ಕೃಷ್ಣ ಪಕ್ಷದ ಕೊನೆಯ ದಿನವಾಗಿರುತ್ತದೆ. ಆಗ ಶಿವ ಶಿವಾ! ಅಂದರೆ ಚಳಿ ಹೊರಟುಹೋಗುತ್ತದೆ ಎಂಬುದು ಪ್ರತೀತಿ. ಗಮನಾರ್ಹವೆಂದರೆ ಈ ಬಾರಿಯ ಮಹಾ ಶಿವರಾತ್ರಿ ಇದೇ ತಿಂಗಳ ಮಾರ್ಚ್ 11ನೇ ತಾರೀಕಿನಂದು ಬಂದಿದೆ. ಅಂದರೆ ನಾಳೆ ಅಲ್ಲ; ನಾಳಿದ್ದೇ ಶಿವರಾತ್ರಿ. ಆದರೆ, ಶಿವರಾತ್ರಿಗೆ ಇನ್ನೂ ಒಂದು ವಾರ ಬಾಕಿ ಇದ್ದಾಗಲೇ ರಾಜ್ಯದಲ್ಲಿ ಬಿಸಿಲ ಆರ್ಭಟ ಹೆಚ್ಚಾಗಿದೆ. ಶಿವ ಶಿವಾ! ರಸ್ತೆ ಮೇಲೆ ಕಾಲಿಡಲಾಗದಷ್ಟು ವಿಪರೀತವೆನಿಸುವ ಬಿಸಿಲು ಅದಾಗಲೇ ಕಾಲಿಟ್ಟಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಜನರು ರಸ್ತೆಗೆ ಕಾಲಿಡುತ್ತಿದ್ದಂತೆಯೇ ನೆತ್ತಿ ಸುಡುವಷ್ಟರ ಮಟ್ಟಿಗೆ ಬಿಸಿಲಿನ ಜಳ ಆವರಿಸಿದೆ. ಕಲಬುರಗಿಯಲ್ಲಿ ಗರಿಷ್ಠ 37.6 ಸೇ.ಮಿ ತಾಪಮಾನ, ಕೊಪ್ಪಳದಲ್ಲಿ 36.5 ಸೆಂ.ಮೀ, ರಾಯಚೂರಿನಲ್ಲಿ 36.4 ಸೆಂ.ಮೀ, ವಿಜಯಪುರದಲ್ಲಿ 36 ಸೆಂ.ಮೀ, ಬೀದರ್ನಲ್ಲಿ 35 ಸೆಂ.ಮೀ, ಬೆಂಗಳೂರು 33.5 ಸೆಂ.ಮೀ, ಶಿವಮೊಗ್ಗ 35 ಸೆಂ.ಮೀ, ಗದಗ 36 ಸೆಂ.ಮೀ ತಾಪಮಾನವಿದೆ. ಬೆಂಗಳೂರಿನಲ್ಲಿ ಇನ್ನು ಎರಡು ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಲಿದ್ದು, ಗರಿಷ್ಠ 34 ಸೆಂ.ಮೀ ತಾಪಮಾನಕ್ಕೆ ತಲುಪಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಹೇಳಿದ್ದಾರೆ.
ಪ್ರತಿ ಸಂವತ್ಸರದ ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷ ಚತುರ್ಥಿಯಂದು ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಮಹಾ ಶಿವರಾತ್ರಿಯಂದು ಶಿವನ ಭಕ್ತರು, ಉಪವಾಸ ಕೈಗೊಳ್ಳುತ್ತಾರೆ. ಶಿವನ ಧ್ಯಾನ ಮಾಡುತ್ತಾರೆ. ಕೆಲವೆಡೆ ನದಿಯ ಅಂಚಿನ ಕಲ್ಲು ಬಂಡೆಯ ಮೇಲೆ ಕೂತು ಶಿವನ ನಾಮ ಸ್ಮರಣೆ ಮಾಡುವುದೂ ಉಂಟು. ಕಲ್ಲು ಬಂಡೆಯ ಮೇಲೆ ಕೂತು ಶಿವನ ಸ್ಮರಣೆ ಮಾಡುವ ಭಕ್ತರಿಗೆ ಈ ಉರಿ ಬಿಸಿಲು ಧ್ಯಾನಕ್ಕೆ ಭಂಗ ತರಬಹುದೇ ಎಂಬೆಲ್ಲಾ ಯೋಚನೆಗಳು ಭಕ್ತರಲ್ಲಿ ಮನೆ ಮಾಡಿದೆ.
ಇದನ್ನೂ ಓದಿ: Maha Shivaratri 2021: ಮಹಾಶಿವರಾತ್ರಿ ಆಚರಣೆಯ ಹುಟ್ಟು ಹೇಗಾಯ್ತು?: ಇಲ್ಲಿದೆ ಸಂಪೂರ್ಣ ಮಾಹಿತಿ
ಇದನ್ನೂ ಓದಿ: Maha Shivaratri 2021: ಶಿವರಾತ್ರಿ ಹಬ್ಬ ಹುಟ್ಟಿದ್ದೇಗೆ? ಏನನ್ನು ಅರ್ಪಿಸಿದರೆ ಪರಶಿವ ಒಲಿಯುತ್ತಾನೆ?