ಬೆಂಗಳೂರು: ಸರ್ಕಾರಿ ನೌಕರರಿಗೆ ಚಿಟ್ ಫಂಡ್ ಮೋಸ, 8 ಕೋಟಿ ವಂಚನೆ; ಕಚೇರಿಗೆ ಮುತ್ತಿಗೆ

|

Updated on: Mar 09, 2021 | 3:11 PM

Chit fund fraud in Bangalore : ಬೆಂಗಳೂರು ಉತ್ತರ ತಾಲೂಕಿನ ಶಿವನಪುರದಲ್ಲಿ ಬಾಬು ಚಿಟ್ ಫಂಡ್ ಕಛೇರಿ ಇದ್ದು, ಬಾಬು ಚಿಟ್‌ ಫಂಡ್, ಜೋತೆಗೆ ಅಗರಬತ್ತಿ ಸಪ್ಲೈ ಸೇರಿದಂತೆ ವಿವಿಧ ಉದ್ಯಮಗಳು ಜನರನ್ನು ಮೊಸ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಬೆಂಗಳೂರು: ಸರ್ಕಾರಿ ನೌಕರರಿಗೆ ಚಿಟ್ ಫಂಡ್ ಮೋಸ, 8 ಕೋಟಿ ವಂಚನೆ; ಕಚೇರಿಗೆ ಮುತ್ತಿಗೆ
ವೆಂಕಟೇಶ್ ಬಾಬು
Follow us on

ಬೆಂಗಳೂರು: ಸರ್ಕಾರಿ ನೌಕರರನ್ನು ಮತ್ತು ಉದ್ಯಮಿಗಳನ್ನೇ ಗುರಿಯಾಗಿಸಿಕೊಂಡು ಚಿಟ್ ಫಂಡ್ ನೋಂದಣಿ ಪಡೆದ ಬಾಬು ಚಿಟ್ ಫಂಡ್ ನೂರಾರು ಜನರಿಗೆ ಕೋಟಿ ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಡೆಪಾಸೀಟರ್ ಎಕ್ಸೋರ್ಬಿಟೆಂಟ್ ಆಕ್ಟ್ ಅಡಿಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಶಿವನಪುರದಲ್ಲಿ ಬಾಬು ಚಿಟ್ ಫಂಡ್ ಕಚೇರಿ ಇದ್ದು, ಬಾಬು ಚಿಟ್‌ ಫಂಡ್, ಜೊತೆಗೆ ಅಗರಬತ್ತಿ ಸಪ್ಲೈ ಸೇರಿದಂತೆ ವಿವಿಧ ಉದ್ಯಮಗಳ ಮೂಲಕ ಜನರನ್ನು ಮೊಸ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ವೆಂಕಟೇಶ್ ಬಾಬು, ಲೋಕೇಶ್ ಬಾಬು, ನಟರಾಜು ಸೇರಿದಂತೆ 3 ಜನರ ಮಾಲಿಕತ್ವದಲ್ಲಿ 8 ಕೋಟಿಗೂ ಅಧಿಕ ವಂಚನೆ ನಡೆಸಿದ್ದು, ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಇವರು ರಾಜ್ಯ, ನೆರೆ ರಾಜ್ಯಗಳಲ್ಲೂ ನೂರಾರು ಜನರಿಂದ ಹೂಡಿಕೆ ಮಾಡಿಕೊಂಡಿರುವ ಮಾಹಿತಿ ಇದ್ದು, ಹಣ ಕಳೆದುಕೊಂಡ ಜನರು ಸದ್ಯ ವಂಚಿಸಿದವರ ಮನೆ ಹಾಗೂ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಮಂಡ್ಯದಲ್ಲಿ ಡೋಲುಗಳ್ಳನನ್ನು ಬಂಧಿಸಿದ ಪೊಲೀಸರು:
ಮಂಡ್ಯ ಜಿಲ್ಲೆ ಕೆ. ಆರ್ ಪೇಟೆ ತಾಲೂಕಿನ‌ ಕಿಕ್ಕೇರಿ ಸಮೀಪದ ಕಲ್ಯಾಣ ಮಂಟಪಗಳಲ್ಲಿ ಡೋಲುಗಳನ್ನ ಕದಿಯುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿ ಮೂಲದ ಭಾಸ್ಕರ್ ಎಂಬುವವನು ಬಂಧಿತ ಆರೋಪಿಯಾಗಿದ್ದು, ಕಲಾವಿದರು ಮಲಗಿದ್ದ ಸಮಯದಲ್ಲಿ ಮಂಗಳವಾದ್ಯಗಳ ಕಳವು ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಭಾಸ್ಕರ್

ಕಳ್ಳತನದ ದೃಶ್ಯ ಕಲ್ಯಾಣಮಂಟಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಂಧಿತನ ಕೃತ್ಯ ಬೆಳಕಿಗೆ ಬಂದಿದೆ. ಮಾರ್ಚ್ 5 ರಂದು ಕೆ. ಆರ್​ ಪೇಟೆಯ ಎಸ್​ಆರ್​ಟಿ ಕಲ್ಯಾಣ ಮಂಟಪದಲ್ಲಿ 80 ಸಾವಿರ ಮೌಲ್ಯದ ಮಂಗಳವಾದ್ಯ ಕಳವಾಗಿದ್ದು, ಡೋಲುಗಳು ಇಲ್ಲದೆ ಇರುವುದನ್ನು ಕಂಡು ಕಂಗಾಲಾಗಿದ್ದ ಕಲಾವಿದರು, ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಪೊಲೀಸರು ಭಾಸ್ಕರ್ ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಗಿರವಿ ಇಟ್ಟ ಚಿನ್ನಾಭರಣ ವಾಪಸ್ ನೀಡದೆ ವಂಚನೆ; ಫೈನಾನ್ಸ್​ ಮಾಲೀಕ ಅರೆಸ್ಟ್​

Published On - 2:47 pm, Tue, 9 March 21