AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maha Shivaratri 2021: ಶಿವ ಶಿವಾ.. ಶಿವರಾತ್ರಿಗೆ ಇನ್ನೂ ಒಂದು ವಾರ ಇರುವಾಗಲೇ ರಣಬಿಸಿಲಿನ ಆರ್ಭಟ ಶುರು!

Shivaratri Festival 2021: ಶಿವರಾತ್ರಿಗೆ ಇನ್ನೂ ಒಂದು ವಾರ ಬಾಕಿ ಇದ್ದಾಗಲೇ ರಾಜ್ಯದಲ್ಲಿ‌ ಬಿಸಿಲ ಆರ್ಭಟ ಹೆಚ್ಚಾಗಿದೆ. ಶಿವ ಶಿವಾ! ರಸ್ತೆ ಮೇಲೆ ಕಾಲಿಡಲಾಗದಷ್ಟು ವಿಪರೀತವೆನಿಸುವ ಬಿಸಿಲು ಅದಾಗಲೇ ಕಾಲಿಟ್ಟಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

Maha Shivaratri 2021: ಶಿವ ಶಿವಾ.. ಶಿವರಾತ್ರಿಗೆ ಇನ್ನೂ ಒಂದು ವಾರ ಇರುವಾಗಲೇ ರಣಬಿಸಿಲಿನ ಆರ್ಭಟ ಶುರು!
ಶಿವರಾತ್ರಿಗೂ ಮುಂಚೆ ಬಿಸಿಲಿನ ಆರ್ಭಟ
shruti hegde
| Edited By: |

Updated on: Mar 09, 2021 | 2:23 PM

Share

ಬೆಂಗಳೂರು: ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಆದರೆ ಈ ಬಾರಿ ಮಾರ್ಚ್​ ತಿಂಗಳಿನಲ್ಲಿ ಬಂದಿದೆ. ಈ ಸಮಯದಲ್ಲಿ ವಿಪರೀತ ಚಳಿಯ ಕಾಲ. ಚಳಿ ಉಚ್ಛ್ರಾಯದಲ್ಲಿದ್ದು, ಅಂದು ಕೃಷ್ಣ ಪಕ್ಷದ ಕೊನೆಯ ದಿನವಾಗಿರುತ್ತದೆ. ಆಗ ಶಿವ ಶಿವಾ! ಅಂದರೆ ಚಳಿ ಹೊರಟುಹೋಗುತ್ತದೆ ಎಂಬುದು ಪ್ರತೀತಿ. ಗಮನಾರ್ಹವೆಂದರೆ ಈ ಬಾರಿಯ ಮಹಾ ಶಿವರಾತ್ರಿ ಇದೇ ತಿಂಗಳ ಮಾರ್ಚ್​ 11ನೇ ತಾರೀಕಿನಂದು ಬಂದಿದೆ. ಅಂದರೆ ನಾಳೆ ಅಲ್ಲ; ನಾಳಿದ್ದೇ ಶಿವರಾತ್ರಿ. ಆದರೆ, ಶಿವರಾತ್ರಿಗೆ ಇನ್ನೂ ಒಂದು ವಾರ ಬಾಕಿ ಇದ್ದಾಗಲೇ ರಾಜ್ಯದಲ್ಲಿ‌ ಬಿಸಿಲ ಆರ್ಭಟ ಹೆಚ್ಚಾಗಿದೆ. ಶಿವ ಶಿವಾ! ರಸ್ತೆ ಮೇಲೆ ಕಾಲಿಡಲಾಗದಷ್ಟು ವಿಪರೀತವೆನಿಸುವ ಬಿಸಿಲು ಅದಾಗಲೇ ಕಾಲಿಟ್ಟಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಜನರು ರಸ್ತೆಗೆ ಕಾಲಿಡುತ್ತಿದ್ದಂತೆಯೇ ನೆತ್ತಿ ಸುಡುವಷ್ಟರ ಮಟ್ಟಿಗೆ ಬಿಸಿಲಿನ‌ ಜಳ ಆವರಿಸಿದೆ. ಕಲಬುರಗಿಯಲ್ಲಿ ಗರಿಷ್ಠ 37.6 ಸೇ.ಮಿ ತಾಪಮಾನ, ಕೊಪ್ಪಳದಲ್ಲಿ 36.5 ಸೆಂ.ಮೀ, ರಾಯಚೂರಿನಲ್ಲಿ 36.4 ಸೆಂ.ಮೀ, ವಿಜಯಪುರದಲ್ಲಿ 36 ಸೆಂ.ಮೀ, ಬೀದರ್​ನಲ್ಲಿ 35 ಸೆಂ.ಮೀ, ಬೆಂಗಳೂರು 33.5 ಸೆಂ.ಮೀ, ಶಿವಮೊಗ್ಗ 35 ಸೆಂ.ಮೀ, ಗದಗ 36 ಸೆಂ.ಮೀ ತಾಪಮಾನವಿದೆ. ಬೆಂಗಳೂರಿನಲ್ಲಿ ಇನ್ನು ಎರಡು ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಲಿದ್ದು, ಗರಿಷ್ಠ 34 ಸೆಂ.ಮೀ‌ ತಾಪಮಾನಕ್ಕೆ ತಲುಪಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್​ ಪಾಟೀಲ್ ಹೇಳಿದ್ದಾರೆ.

ಪ್ರತಿ ಸಂವತ್ಸರದ ಶಿಶಿರ ಋತುವಿನ ಮಾಘ ಮಾಸ ಕೃಷ್ಣ ಪಕ್ಷ ಚತುರ್ಥಿಯಂದು ಶಿವರಾತ್ರಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಮಹಾ ಶಿವರಾತ್ರಿಯಂದು ಶಿವನ ಭಕ್ತರು, ಉಪವಾಸ ಕೈಗೊಳ್ಳುತ್ತಾರೆ. ಶಿವನ ಧ್ಯಾನ ಮಾಡುತ್ತಾರೆ. ಕೆಲವೆಡೆ ನದಿಯ ಅಂಚಿನ ಕಲ್ಲು ಬಂಡೆಯ ಮೇಲೆ ಕೂತು ಶಿವನ ನಾಮ ಸ್ಮರಣೆ ಮಾಡುವುದೂ ಉಂಟು. ಕಲ್ಲು ಬಂಡೆಯ ಮೇಲೆ ಕೂತು ಶಿವನ ಸ್ಮರಣೆ ಮಾಡುವ ಭಕ್ತರಿಗೆ ಈ ಉರಿ ಬಿಸಿಲು ಧ್ಯಾನಕ್ಕೆ ಭಂಗ ತರಬಹುದೇ ಎಂಬೆಲ್ಲಾ ಯೋಚನೆಗಳು ಭಕ್ತರಲ್ಲಿ ಮನೆ ಮಾಡಿದೆ.

ಇದನ್ನೂ ಓದಿ: Maha Shivaratri 2021: ಮಹಾಶಿವರಾತ್ರಿ ಆಚರಣೆಯ ಹುಟ್ಟು ಹೇಗಾಯ್ತು?: ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ: Maha Shivaratri 2021: ಶಿವರಾತ್ರಿ ಹಬ್ಬ ಹುಟ್ಟಿದ್ದೇಗೆ? ಏನನ್ನು ಅರ್ಪಿಸಿದರೆ ಪರಶಿವ ಒಲಿಯುತ್ತಾನೆ?

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ