ಕನ್ನಡ ಭಾಷೆ ಮೇಲೆ ಮಹಾರಾಷ್ಟ್ರ ಸರ್ಕಾರ ಕೆಂಗಣ್ಣು: ಕನ್ನಡ ಮಾಧ್ಯಮ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 17, 2024 | 8:53 PM

ಗಡಿನಾಡ ಜನರನ್ನು ಮಹಾರಾಷ್ಟ್ರ ಸರ್ಕಾರ ಮಲತಾಯಿ ಧೊರಣೆಯಿಂದ ಕಂಡಿದೆ. ಯಾವುದೇ ಮೂಲಭೂತ ಸೌಕರ್ಯ ಇಲ್ಲಿ ನೀಡದೇ ಸತಾಯಿಸಿದೆ. ಇದೀಗಾ ಅಲ್ಲಿರೋ ಕನ್ನಡ ಮಾಧ್ಯಮ ಶಾಲೆಗಳನ್ನು ಮಟ್ಟ ಹಾಕಲು ನಿಂತಿದ್ದಾರೆ. ಕನ್ನಡ ಶಾಲೆಗಳಿಗೆ ಮರಾಠಿ ಮಾಧ್ಯಮದ ಶಿಕ್ಷಕರನ್ನು ನೇಮಕ ಮಾಡಿ ಆದೇಶ ಜಾರಿ ಮಾಡಿದೆ ಮಹಾರಾಷ್ಟ್ರ ಸರ್ಕಾರ. ಕನ್ನಡ ಮಾಧ್ಯಮ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಿಸಲಾಗಿದೆ.

ಕನ್ನಡ ಭಾಷೆ ಮೇಲೆ ಮಹಾರಾಷ್ಟ್ರ ಸರ್ಕಾರ ಕೆಂಗಣ್ಣು: ಕನ್ನಡ ಮಾಧ್ಯಮ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ
ಕನ್ನಡ ಭಾಷೆ ಮೇಲೆ ಮಹಾರಾಷ್ಟ್ರ ಸರ್ಕಾರದ ಕೆಂಗಣ್ಣು: ಕನ್ನಡ ಮಾಧ್ಯಮ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ
Follow us on

ವಿಜಯಪುರ, ಜೂನ್​ 17: ಕರ್ನಾಟಕದ ಗಡಿ ಭಾಗವನ್ನು ಹಂಚಿಕೊಂಡಿರುವ ರಾಜ್ಯ ಕರ್ನಾಟಕ (Karnataka). ನಮ್ಮ ಕರ್ನಾಟಕಕ್ಕೂ ನೆರೆಯ ಮಹಾರಾಷ್ಟ್ರಕ್ಕೂ (Maharashtra) ಎಣ್ಣೆ ಸೀಗೆಕಾಯಿ ಸಂಬಂಧ. ಸದಾ ಕಾಲ ನೆಲ, ಜಲ, ಭಾಷೆ ವಿಚಾರದಲ್ಲಿ ಜಗಳ ಇದ್ದೇ ಇದೆ. ಅದರಲ್ಲೂ ಮಹಾಜನ್ ವರದಿ ಅನುಷ್ಠಾನ ವಿಚಾರದಲ್ಲೂ ಸಮಸ್ಯೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಷ್ಟರ ಮಧ್ಯೆ ಗಡಿನಾಡ ಕನ್ನಡಿಗರನ್ನು ಮಹಾರಾಷ್ಟ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಲೇ ಬಂದಿದೆ. ಮಹಾರಾಷ್ಟ್ರದ ಸಾಂಗ್ಲಿ, ಸೋಲ್ಲಾಪುರ ಜಿಲ್ಲೆಗಳಲ್ಲಿ ಹೆಚ್ಚಾಗಿ ಕನ್ನಡ ಮಾತೃ ಭಾಷೆಯವರಿದ್ದಾರೆ. ಕನ್ನಡ ಮಾಧ್ಯಮದ ಶಾಲೆಗಳಲ್ಲೇ ವಿದ್ಯಾಭ್ಯಾಸ ಮಾಡುತ್ತಾರೆ. ಅವರಿಗೆ ಯಾವುದೇ ಸೌಲಭ್ಯವನ್ನು ಮಹಾರಾಷ್ಟ್ರ ಸರ್ಕಾರ ನೀಡಲ್ಲಾ. ಇದಾಗ್ಯೂ ಇದೀಗ ಶಾಶ್ವತವಾಗಿ ಕನ್ನಡ ಶಾಲೆಗಳನ್ನು ಮೂಲೆಗುಂಪು ಮಾಡಲು ಮುಂದಾಗಿದೆ.

ಕನ್ನಡ ಶಾಲೆಗಳಿಗೆ ಮರಾಠಿ ಮಾಧ್ಯಮದ ಶಿಕ್ಷಕರ ನೇಮಕ

ಮಹಾರಾಷ್ಟ್ರದ ಸಾಂಗ್ಲಿ, ಸೊಲ್ಲಾಪುರ ಜಿಲ್ಲೆಗಳಲ್ಲಿ ಇರೋ 250 ಕ್ಕೂ ಅಧಿಕ ಗ್ರಾಮಗಳಲ್ಲಿ ಜನರು ಮಾತೃ ಭಾಷೆ ಕನ್ನಡವೇ ಆಗಿದೆ. ಇವರೆಲ್ಲಾ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೇ ವಿದ್ಯಾಬ್ಯಾಸ ಮಾಡುತ್ತಿದ್ದಾರೆ. ಹಲವಾರು ಸಮಸ್ಯೆ ಕಷ್ಟ ಕೋಟಲೆಗಳು ಬಂದರೂ ಅಲ್ಲಿನ ಜನರು ಕನ್ನಡವನ್ನು ಬಿಟ್ಟಿಲ್ಲಾ.

ಇದನ್ನೂ ಓದಿ: ವಿಜಯಪುರ: ಸೋರುತ್ತಿರುವೆ ಸರ್ಕಾರಿ ಶಾಲೆಯ ಕ್ಲಾಸ್​​ಗಳು, ಕಾರಿಡಾರ್​ನಲ್ಲಿ ಮಕ್ಕಳಿಗೆ ಪಾಠ

ಈ ಗಡಿನಾಡ ಜನರನ್ನು ಮಹಾರಾಷ್ಟ್ರ ಸರ್ಕಾರ ಮಲತಾಯಿ ಧೊರಣೆಯಿಂದ ಕಂಡಿದೆ. ಯಾವುದೇ ಮೂಲಭೂತ ಸೌಕರ್ಯ ಇಲ್ಲಿ ನೀಡದೇ ಸತಾಯಿಸಿದೆ. ಇದೀಗಾ ಅಲ್ಲಿರೋ ಕನ್ನಡ ಮಾಧ್ಯಮ ಶಾಲೆಗಳನ್ನು ಮಟ್ಟ ಹಾಕಲು ನಿಂತಿದ್ದಾರೆ. ಕನ್ನಡ ಶಾಲೆಗಳಿಗೆ ಮರಾಠಿ ಮಾಧ್ಯಮದ ಶಿಕ್ಷಕರನ್ನು ನೇಮಕ ಮಾಡಿ ಆದೇಶ ಜಾರಿ ಮಾಡಿದೆ ಮಹಾರಾಷ್ಟ್ರ ಸರ್ಕಾರ. ಸಾಂಗ್ಲಿ ಜಿಲ್ಲೆ ಜತ್ ತಾಲೂಕಿನ 11 ಕನ್ನಡ ಮಾಧ್ಯಮ ಶಾಲೆಗಳಿಗೆ ಮರಾಠಿ ಮಾಧ್ಯಮದ ಶಿಕ್ಷಕರನ್ನು ಭಾಷಾ ಶಿಕ್ಷಕರೆಂದು ನೇಮಕ ಮಾಡಿ ಆದೇಶ ಜಾರಿ ಮಾಡಿದೆ. ಇದು ಕನ್ನಡ ಶಾಲೆಗಳ ನಿರ್ನಾಮಕ್ಕೆ ಮಾಡಿದ ಷಡ್ಯಂತ್ರವಾಗಿದೆ.

ಮಹಾರಾಷ್ಟ್ರದಲ್ಲಿನ ಗಡಿ ಭಾಗದಲ್ಲಿ ವಾಸ ಮಾಡುವ ಕನ್ನಡಿಗರಿಗಾಗಿ ಕನ್ನಡ ಮಾಧ್ಯಮ ಶಾಲೆಗಳಿವೆ. ಈ ಶಾಲೆಗಳನ್ನು ಉಪಾಯವಾಗಿ ಮುಚ್ಚಿಸಿದರೆ ಎಲ್ಲರೂ ಮರಾಠಿ ಮಾಧ್ಯಮದಲ್ಲೇ ಶಾಲಾ ಕಾಲೇಜು ಶಿಕ್ಷಣ ಮಾಡಬೇಕಾಗುತ್ತದೆ. ಈ ಕಾರಣದಿಂದ ಏಕನಾಥ ನೇತೃತ್ವದ ಮಹಾರಾಷ್ಟ್ರದ ಸರ್ಕಾರ ಜತ್ ತಾಲೂಕಿನ 11 ಕನ್ನಡ ಮಾಧ್ಯಮ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ ಮಾಡಿದ್ದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.

ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಅಂಕಿ-ಸಂಖ್ಯೆ

ಅಂಕಿ ಅಂಶಗಳ ಪ್ರಕಾರ ಮಹಾರಾಷ್ಟ್ರದ ಸಾಂಗ್ಲಿ, ದಕ್ಷಿಣ ಸೊಲ್ಲಾಪುರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಹೆಚ್ಚಿನ ಕನ್ನಡ ಶಾಲೆಗಳಿಗೆ. ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನಲ್ಲಿ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿಗೆ. ಜತ್ ತಾಲೂಕಿನಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು 132 ಇದ್ದು 8,000 ವಿದ್ಯಾರ್ಥಿಗಳಿದ್ದಾರೆ. ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು 37 ಇದ್ದು 5000 ವಿದ್ಯಾರ್ಥಿಗಳಿದ್ದಾರೆ. ಸಾಂಗ್ಲಿ ಜಿಲ್ಲೆ ಮಿರಜ ತಾಲೂಕಿನಲ್ಲಿ 3 ಸರ್ಕಾರಿ ಕನ್ನಡ ಮಾದ್ಯಮ ಶಾಲೆಗಳಿದ್ದು 1200 ವಿದ್ಯಾರ್ಥಿಗಳಿದ್ಧಾರೆ. 2 ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ 60 ವಿದ್ಯಾರ್ಥಿಗಳಿದ್ಧಾರೆ. ಇನ್ನು ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆ ತಾಲೂಕಿನಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆ 37 ಇದ್ದು 6800 ವಿದ್ಯಾರ್ಥಿಗಳಿದ್ದಾರೆ.

ಇನ್ನು ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು 30 ಇದ್ದು 4500 ವಿದ್ಯಾರ್ಥಿಗಳು ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದಕ್ಷಿಣ ಸೊಲ್ಲಾಪುರ ಜಿಲ್ಲೆಯ ದಕ್ಷಿಣ ಸೊಲ್ಲಾಪುರ ತಾಲೂಕಿನಲ್ಲಿ 11 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿದ್ದು 500 ವಿದ್ಯಾರ್ಥಿಗಳಿದ್ದಾರೆ. 6 ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿದ್ದು 1500 ವಿದ್ಯಾರ್ಥಿಗಳಿದ್ಧಾರೆ. ಸೊಲ್ಲಾಪುರ ನಗರದಲ್ಲಿ 3 ಸರ್ಕಾರಿ ಕನ್ನಡ ಮಾದ್ಯಮ ಶಾಲೆಗಳಲ್ಲಿ 200 ವಿದ್ಯಾರ್ಥಿಗಳಿದ್ದಾರೆ. 8 ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿದ್ದು ಅವುಗಳಲ್ಲಿ 1500 ವಿದ್ಯಾರ್ಥಿಗಳಿದ್ಧಾರೆ. 5 ಕನ್ನಡ ಮಾಧ್ಯಮ ಪ್ರೌಢ ಶಾಲೆಗಳಿದ್ದು 900 ವಿದ್ಯಾರ್ಥಿಗಳು ಇದ್ದಾರೆ. ಇಷ್ಟೆಲ್ಲಾ ಶಾಲೆಗಳನ್ನು ಮುಚ್ಚಲು ಮಹಾರಾಷ್ಟ್ರ ಸರ್ಕಾರ ಮುಂದಾಗಿರೋದಕ್ಕೆ ಅಲ್ಲಿನ ಕನ್ನಡ ಭಾಷಿಕರು ಆಕ್ರೋಶವನ್ನು ಹೊರ ಹಾಕಿದ್ಧಾರೆ.

ಕನ್ನಡ ಭಾಷೆ ತಿಳಿಯದ ಶಿಕ್ಷಕರು: ಜನರು ಆಕ್ರೋಶ

ಮಹಾರಾಷ್ಟ್ರದ ಸಾಂಗಲಿ ಹಾಗೂ ಸೊಲ್ಲಾಪುರ ಜಿಲ್ಲೆಯಲ್ಲಿ ಒಟ್ಟು 24 ಶಿಕ್ಷಕರ ನೇಮಕಾತಿ ಮಾಡಿ ಆದೇಶ ಹೊರಡಸಲಾಗಿದೆ. ಅದರಲ್ಲಿ ಕೇವಲ 7 ಜನರು ಮಾತ್ರ ಕನ್ನಡ ಕಲಿತವರು ಆಗಿದ್ದಾರೆ. ಉಳಿದೆಲ್ಲ ನೇಮಕ ಶಿಕ್ಷಕರು ಮರಾಠಿ ಹಾಗೂ ಉರ್ದು ಮಾಧ್ಯಮದಿಂದ ಬಂದವರಿದ್ದಾರೆ. ಈ ನೇಮಕ ಶಿಕ್ಷಕರಿಗೆ ಕನ್ನಡ ಭಾಷೆಯ ಗಂಧಗಾಳಿಯು ಗೊತ್ತಿಲ್ಲ. ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಅವರು ಕನ್ನಡವನ್ನು ಕಲಿಸೋದಾದರೂ ಹೇಗೆ ಎಂದು ಜನ್ರು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಶತಮಾನದ ಸಂಭ್ರಮ ಕಂಡಿರೋ ಸರ್ಕಾರಿ ಶಾಲೆಗಿಲ್ಲ ಕಾಯಕಲ್ಪ; ಮಳೆ ಬಂದರೆ ಮಕ್ಕಳ ಪಾಡು ಅಧೋಗತಿ

ಇದನ್ನು ವಿರೋಧಿಸಿ ಇಲ್ಲಿನ ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ವಿರೋಧ ಮಾಡುತ್ತಿದ್ದು, ಮಹಾ ಸರ್ಕಾರ ಮಾತ್ರ ಯಾವುದೇ ಸಹಕಾರ ನೀಡಿಲ್ಲ. ಈ ವಿಚಾರದಲ್ಲಿ ಕರ್ನಾಟಕ ಸರಕಾರ ತುರ್ತಾಗಿ ಇಲ್ಲಿನ ಕನ್ನಡಿಗರ ಪರವಾಗಿ ನಿಲ್ಲಬೇಕಿದೆ. ಮಹಾರಾಷ್ಟ್ರ ಸರ್ಕಾರದ ಜೊತೆಗೆ ಮಾತನಾಡಿ ಈ ಸಮಸ್ಯೆ ಬಗೆ ಹರಿಸಬೇಕು. ಇಲ್ಲವಾದಲ್ಲಿ ಈ ಭಾಗದಲ್ಲಿ ಕನ್ನಡ ಶಾಲೆಗಳು ಹಾಗೂ ಕನ್ನಡ ಭಾಷೆಯೇ ನಶಿಸಿ ಹೋಗುತ್ತವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:52 pm, Mon, 17 June 24