Karnataka Dam Water Level: ಜು.19ರ ಕರ್ನಾಟಕದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಇಲ್ಲಿದೆ
ಕರ್ನಾಟಕದ ಜಲಾಶಯಗಳ ಜುಲೈ19ರ ನೀರಿನ ಮಟ್ಟ: ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ವಿವರ.
ಈ ಬಾರಿ ಕರ್ನಾಟಕದಲ್ಲಿ ಮುಂಗಾರು ಮಳೆ (Karnataka Rain) ಪ್ರಮಾಣ ಕಡಿಮೆಯಾಗಿದ್ದು ವಾಡಿಕೆಯಷ್ಟು ಮಳೆಯಾಗುತ್ತಿಲ್ಲ. ಆದರೆ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಇನ್ನು ನೆರೆಯ ರಾಜ್ಯ ಮಹರಾಷ್ಟ್ರದಲ್ಲಿ ಅಧಿಕ ಮಳೆಯಾಗುತ್ತಿದ್ದು, ಇದರಿಂದ ಕೃಷ್ಣ ನದಿಗೆ ಒಳ ಹರಿವು ಹೆಚ್ಚಾಗಿದೆ. ಕೃಷ್ಣೆಯಲ್ಲಿ ನೀರಿನ ಪ್ರಮಾಣ ಏರಿಕೆಯಾದರೇ ಕರ್ನಾಟಕದ ಐದು ಜಿಲ್ಲೆಗಳಿಗೆ ನೀರು ಹೇರಳವಾಗಿ ದೊರೆಯುತ್ತದೆ. ರಾಜ್ಯದ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರೊಂದಿಗೆ ಇಂದಿನ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ (Karnataka Dam Water Level) ಎಷ್ಟಿದೆ ಎಂಬುವುದನ್ನು ನೋಡೋಣ.
ಜಲಾಶಯಗಳ ನೀರಿನ ಮಟ್ಟ | ||||||
ಕರ್ನಾಟಕದ ಪ್ರಮುಖ ಜಲಾಶಯಗಳು (Dam) | ಗರಿಷ್ಠ ನೀರಿನ ಮಟ್ಟ (ಮೀ) | ಒಟ್ಟು ಸಾಮರ್ಥ್ಯ (ಟಿಎಂಸಿ) | ಇಂದಿನ ನೀರಿನ ಮಟ್ಟ (ಟಿಎಂಸಿ) | ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
ಆಲಮಟ್ಟಿ ಜಲಾಶಯ (Almatti Dam) | 519.6 | 123.08 | 26.93 | 85.20 | 18270 | 561 |
ತುಂಗಭದ್ರಾ ಜಲಾಶಯ (Tungabhadra Dam) | 497.71 | 105.79 | 10.95 | 96.84 | 11425 | 323 |
ಮಲಪ್ರಭಾ ಜಲಾಶಯ (Malaprabha Dam) | 633.8 | 37.73 | 6.85 | 22.32 | 657 | 194 |
ಲಿಂಗನಮಕ್ಕಿ ಜಲಾಶಯ (Linganamakki Dam) | 554.44 | 151.75 | 24.94 | 85.43 | 12229.00 | 1549 |
ಕಬಿನಿ ಜಲಾಶಯ (Kabini Dam) | 696.13 | 19.52 | 11.95 | 18.59 | 1864 | 800 |
ಭದ್ರಾ ಜಲಾಶಯ (Bhadra Dam) | 657.73 | 71.54 | 27.87 | 66.94 | 835 | 164 |
ಘಟಪ್ರಭಾ ಜಲಾಶಯ (Ghataprabha Dam) | 662.91 | 51 | 8.10 | 29.95 | 8997 | 94 |
ಹೇಮಾವತಿ ಜಲಾಶಯ (Hemavathi Dam) | 890.58 | 37.1 | 16.30 | 35.27 | 1732 | 200 |
ವರಾಹಿ ಜಲಾಶಯ (Varahi Dam) | 594.36 | 31.1 | 5.02 | 13.12 | 2947 | 218.24 |
ಹಾರಂಗಿ ಜಲಾಶಯ (Harangi Dam) | 871.38 | 8.5 | 4.97 | 6.94 | 2811 | 50 |
ಸೂಫಾ (Supa Dam) | 564.33 | 145.33 | 35.62 | 61.92 | 12529 | 4614.92 |
ಮಳೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ಮಲಪ್ರಭಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಖಾನಾಪುರ ತಾಲೂಕಿನ ಹಬ್ಬಾನಟ್ಟಿ ಗ್ರಾಮದಲ್ಲಿರುವ ಮಾರುತಿ ಮತ್ತು ರಾಮ ಮಂದಿರ ಮುಳುಗಡೆಯಾಗಿದೆ. ದೇವಸ್ಥಾನ ನದಿ ನೀರಿನಲ್ಲಿ ಬಹುತೇಕ ಜಲಾವೃತವಾಗಿದ್ದು, ಕಳಸ ಮಾತ್ರ ಕಾಣಿಸುತ್ತಿದೆ. ಇಂದು ಒಂದು ದಿನ ಮಳೆ ಆದರೇ ಇಡೀ ದೇವಸ್ಥಾನವೇ ಸಂಪೂರ್ಣ ಜಲಾವೃತವಾಗುತ್ತದೆ. ಕಳೆದ ಎರಡು ದಿನದಿಂದ ಕಣಕುಂಬಿ ಭಾಗದಲ್ಲಿ ನಿರಂತರ ಮಳೆ ಹಿನ್ನೆಲೆ ಮಲಪ್ರಭಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:06 am, Wed, 19 July 23