ಅಪ್ಪ-ಮಗನ ವಿರುದ್ಧ ಬಿತ್ತು ಕೇಸು, ಶ್ರೀಕಂಠೇಗೌಡ A1

|

Updated on: Apr 25, 2020 | 3:26 PM

ಮಂಡ್ಯ: ನಗರದ ಅಂಬೇಡ್ಕರ್​ ಭವನದಲ್ಲಿ ಇಂದು ಪತ್ರಕರ್ತರಿಗಾಗಿ ಕೊವಿಡ್ ಪರೀಕ್ಷೆ ವೇಳೆ ಗೂಂಡಾಗಿರಿ ನಡೆಸಿದ ಆರೋಪದ ಮೇಲೆ ಒಟ್ಟು ಐದು ಮಂದಿ ಮೇಲೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಪ್ರಕರಣದ A1 ಜೆಡಿಎಸ್ ವಿಧಾನ ಪರಿಷತ್​ ಸದಸ್ಯ ಶ್ರೀಕಂಠೇಗೌಡ ಮತ್ತು A2 ಕೃಷ್ಣೇಗೌಡ, A3 ಚಂದ್ರಕಲಾ, A4 ಜಗದೀಶ್ ಮತ್ತು A5 ರಾಜು ಆರೋಪಿಗಳು. ಸೆಕ್ಷನ್ 143, 147, 341, 323, 501, 114, 269, 270, 149, 51ಅಡಿ ಮಂಡ್ಯ ಪಶ್ಚಿಮ ಪೊಲೀಸ್ […]

ಅಪ್ಪ-ಮಗನ ವಿರುದ್ಧ ಬಿತ್ತು ಕೇಸು, ಶ್ರೀಕಂಠೇಗೌಡ A1
Follow us on

ಮಂಡ್ಯ: ನಗರದ ಅಂಬೇಡ್ಕರ್​ ಭವನದಲ್ಲಿ ಇಂದು ಪತ್ರಕರ್ತರಿಗಾಗಿ ಕೊವಿಡ್ ಪರೀಕ್ಷೆ ವೇಳೆ ಗೂಂಡಾಗಿರಿ ನಡೆಸಿದ ಆರೋಪದ ಮೇಲೆ ಒಟ್ಟು ಐದು ಮಂದಿ ಮೇಲೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಪ್ರಕರಣದ A1 ಜೆಡಿಎಸ್ ವಿಧಾನ ಪರಿಷತ್​ ಸದಸ್ಯ ಶ್ರೀಕಂಠೇಗೌಡ ಮತ್ತು A2 ಕೃಷ್ಣೇಗೌಡ, A3 ಚಂದ್ರಕಲಾ, A4 ಜಗದೀಶ್ ಮತ್ತು A5 ರಾಜು ಆರೋಪಿಗಳು.
ಸೆಕ್ಷನ್ 143, 147, 341, 323, 501, 114, 269, 270, 149, 51ಅಡಿ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಇದರ ಜೊತೆಗೆ 51 Disaster Management Act ಪ್ರಕಾರವೂ FIR ದಾಖಲಾಗಿದೆ.

IPC Section 143 ಅಕ್ರಮವಾಗಿ ಗುಂಪು ಗೂಡುವುದು, 147 ದೊಂಬಿ, 341 ಅಕ್ರಮವಾಗಿ ತಡೆಹಿಡಿಯುವುದು, 323 ಹಲ್ಲೆ, 501 ಮಾನಹಾನಿಕರ ಬರಹ, 269 ನಿರ್ಲಕ್ಷ್ಯದಿಂದ ರೋಗ ಹರಡುವುದು, 270 ವೈರತ್ವದಿಂದ ರೋಗ ಹರಡಿಸುವುದು, 114 ಪ್ರಚೋದನೆ, 149 ಸಮಾನ ಉದ್ದೇಶದ ಅಕ್ರಮ ಕೂಟ ಪ್ರಕರಣಗಳಾಗಿವೆ.