ಜೆಡಿಎಸ್ ನಾಯಕರುಗಳಿಗೆ ಏನಾಗಿದೆ? ಅವರ ನಿವಾಸಗಳ ಬಳಿ ಕೊರೊನಾ ಟೆಸ್ಟ್ ಮಾಡಿಸಬಾರದಂತೆ!

ಜೆಡಿಎಸ್ ನಾಯಕರುಗಳಿಗೆ ಏನಾಗಿದೆ? ಅವರ ನಿವಾಸಗಳ ಬಳಿ ಕೊರೊನಾ ಟೆಸ್ಟ್ ಮಾಡಿಸಬಾರದಂತೆ!

ಮಂಡ್ಯ: ಮಂಡ್ಯ-ಇಂಡ್ಯಾ ಸೇರಿದಂತೆ ಎಲ್ಲೆಡೆ ಕೊರೊನಾ ಸೋಂಕು ತನ್ನ ಇರುವನ್ನು ವಿಸ್ತರಿಸಿಕೊಂಡು ಸಾಗ್ತಾ ಇದೆ. ಹೇಗಾದರೂ ಮಾಡಿ ಇದನ್ನು ಕಟ್ಟಿ ಹಾಕಬೇಕು ಎಂದು ಇಡೀ ಜಗತ್ತು ಶತಪ್ರಯತ್ನ ಮಾಡುತ್ತಿದೆ. ಪ್ರತಿಯೊಬ್ಬರೂ ಈ ಪ್ರಯತ್ನದಲ್ಲಿ ತಮ್ಮ ಕೈ ಜೋಡಿಸುತ್ತಿದ್ದಾರೆ. ಆದ್ರೆ ಕೆಲವು ಶಾಸಕರು ತಮ್ಮ ರಾಜಕೀಯ ಅನುಕೂಲಸಿಂಧುಗಾಗಿ ಕೊರೊನಾ ನಿಯಂತ್ರಣದಲ್ಲಿ ಆಡಳಿತ ಯಂತ್ರದ ಜೊತೆ ಆಟವಾಡತೊಡಗಿದ್ದಾರೆ.

ಅತ್ತ ರಾಮನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಯಾರನ್ನು ಕೇಳಿ ಶಂಕಿತರನ್ನು ನಮ್ಮ ಜಿಲ್ಲಾ ಜೈಲಿಗೆ ಹಾಕಿದ್ದೀರಿ? ಎಂದು ವರಾತ ತೆಗೆದಿದ್ದರೆ ಇತ್ತ ಅವರದೇ ಪಕ್ಷದ ಮತ್ತೊಬ್ಬ ಶಾಸಕ, ಮೇಲ್ಮನೆಯ ಶ್ರೀಕಂಠೇಗೌಡರು ತಮ್ಮ ನಿವಾಸವಿರುವ ಸ್ಥಳದಲ್ಲಿ ಅಂದ್ರೆ ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಕೊವಿಡ್-19 ಟೆಸ್ಟ್ ಮಾಡುವುದಕ್ಕೆ ಅವಕಾಶ ನೀಡದೆ ಗಲಾಟೆ ಮಾಡಿಸಿದ್ದಾರೆ. ಶ್ರೀಕಂಠೇಗೌಡ ಪುತ್ರ ಪೊಲೀಸರ ವಶಕ್ಕೆ ನಗರದ ಅಂಬೇಡ್ಕರ್ ಭವನದ ಪಕ್ಕದಲ್ಲೇ MLC ಶ್ರೀಕಂಠೇಗೌಡ ನಿವಾಸವಿದೆ. ಈ ಹಿನ್ನೆಲೆಯಲ್ಲಿ ಕೊವಿಡ್-19 ಟೆಸ್ಟ್ ಮಾಡಬಾರದು ಎಂದು ಜನರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇಲ್ಲಿ ಸೋಂಕು ಹರಡುವುದಕ್ಕೆ ಬಂದಿದ್ದೀರಾ? ಎಂದು ಗಲಾಟೆ ಮಾಡಿ, ಕೊವಿಡ್-19 ಟೆಸ್ಟ್ ನಿಲ್ಲಿಸುವಂತೆ ಶ್ರೀಕಂಠೇಗೌಡ ಕಿರಿಕ್ ಮಾಡಿದ್ದಾರೆ. ಇದೇ ವೇಳೆ, ಶ್ರೀಕಂಠೇಗೌಡರ ಪುತ್ರ ಹಲ್ಲೆ ಮಾಡಿದ್ದು, ಹಲ್ಲೆ ಮಾಡಿದ ಶ್ರೀಕಂಠೇಗೌಡ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶ್ರೀಕಂಠೇಗೌಡ, ಪುತ್ರನ ವಿರುದ್ಧ FIR: ಕೊವಿಡ್-19 ಪರೀಕ್ಷೆಗೆ ಅಡ್ಡಿಪಡಿಸಿದ ಪ್ರಕರಣ ಸಂಬಂಧ ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪುತ್ರ ಸೇರಿ ಹಲವರ ವಿರುದ್ಧ FIR ದಾಖಲಿಸಿದ್ದೇವೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್​ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣ ಸಂಬಂಧ ಎಸ್​ಪಿ ನೇತೃತ್ವದಲ್ಲಿ ತನಿಖೆ ನಡೆಸುತ್ತೇವೆ. ಆರೋಗ್ಯ ಸಿಬ್ಬಂದಿ ಜತೆ ವಾಗ್ವಾದ ಮಾಡಿರುವ ಬಗ್ಗೆ ಮಾಹಿತಿಯಿದೆ. ಅಂಬೇಡ್ಕರ್ ಭವನದಲ್ಲಿ ಯಾರಿಗೂ ಚಿಕಿತ್ಸೆ ನೀಡುತ್ತಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.

https://www.facebook.com/Tv9Kannada/videos/589995221946382/

Click on your DTH Provider to Add TV9 Kannada