ರಾಜ್ಯದಲ್ಲಿ ಹೊಸದಾಗಿ 15 ಮಂದಿಗೆ ಕೊರೊನಾ, ತಾಜಾ ಮಾಹಿತಿ​ ಇಲ್ಲಿದೆ

ರಾಜ್ಯದಲ್ಲಿ ಹೊಸದಾಗಿ 15 ಮಂದಿಗೆ ಕೊರೊನಾ, ತಾಜಾ ಮಾಹಿತಿ​ ಇಲ್ಲಿದೆ

ಬೆಂಗಳೂರು: ಕರ್ನಾಟಕದಲ್ಲಿ ಇಂದು ಹೊಸದಾಗಿ 15 ಜನರಿಗೆ ಮಹಾಮಾರಿ ಕೊರೊನಾ ವೈರಸ್​ ಸೋಂಕು ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 489ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 6, ಬೆಳಗಾವಿಯಲ್ಲಿ 6, ಮಂಡ್ಯ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ ಜಿಲ್ಲೆಯ ತಲಾ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಒಬ್ಬನಿಂದ 25 ಮಂದಿಗೆ ಸೋಂಕು! ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 126ಕ್ಕೆ ಏರಿಕೆಯಾಗಿದ್ದು, 419ನೇ ಬಿಹಾರಿ ಸೋಂಕಿತನಿಂದ ಕೇವಲ ಮೂರೇ ದಿನದಲ್ಲಿ ಒಟ್ಟು 25 ಮಂದಿಗೆ ವೈರಸ್ ವಕ್ಕರಿಸಿದೆ. 475ನೇ ಸೋಂಕಿತ ಬೆಂಗಳೂರಿನ 34 ವರ್ಷದ ಪುರುಷ ಬಿಬಿಎಂಪಿ ಕಂಟೇನ್‌ಮೆಂಟ್ ಜೋನ್‌ಗಳಿಗೆ ಭೇಟಿ ನೀಡಿದ್ದ. ಈ ಹಿನ್ನೆಲೆಯಲ್ಲಿ ವೈರಸ್ ಅಟ್ಯಾಕ್ ಆಗಿದೆ.

476ನೇ ಸೋಂಕಿತ ಬೆಂಗಳೂರಿನ 37 ವರ್ಷದ ಪುರುಷ, 477ನೇ ಸೋಂಕಿತ ಬೆಂಗಳೂರಿನ 21 ವರ್ಷದ ಯುವಕ, 478ನೇ ಸೋಂಕಿತ ಬೆಂಗಳೂರಿನ 17 ವರ್ಷದ ಬಾಲಕ, 479ನೇ ಸೋಂಕಿತೆ ಬೆಂಗಳೂರಿನ 19 ವರ್ಷದ ಯುವತಿ, 480ನೇ ಸೋಂಕಿತ ಬೆಂಗಳೂರಿನ 28 ವರ್ಷದ ಪುರುಷನಾಗಿದ್ದು ಈ ಐವರಿಗೂ 419ನೇ ಸೋಂಕಿತನಿಂದ ಕೊರೊನಾ ತಗುಲಿದೆ.

Published On - 12:18 pm, Sat, 25 April 20

Click on your DTH Provider to Add TV9 Kannada