ಮಂಡ್ಯದಲ್ಲಿ ಮುಂದುವರಿದ ಕಾವೇರಿ ಕಿಚ್ಚು; KRS ಜಲಾಶಯದ ಬಳಿ ನೀರಿಗಿಳಿದು ರೈತರ ಪ್ರತಿಭಟನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 02, 2023 | 5:52 PM

ತಮಿಳುನಾಡಿಗೆ ‌ನೀರು ಹರಿಸುತ್ತಿರುವುದನ್ನು ಖಂಡಿಸಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​​ಎಸ್ ಜಲಾಶಯದ ಬಳಿ ಕಾವೇರಿ ನದಿಗೆ ಇಳಿದು ರೈತರ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಹಲವು ನಾಯಕರು ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರದ ವಿರುದ್ದ ಗುಡುಗಿದ್ದಾರೆ. ಈ ಕುರಿತು ಇಲ್ಲಿದೆ ನೋಡಿ.

ಮಂಡ್ಯದಲ್ಲಿ ಮುಂದುವರಿದ ಕಾವೇರಿ ಕಿಚ್ಚು; KRS ಜಲಾಶಯದ ಬಳಿ ನೀರಿಗಿಳಿದು ರೈತರ ಪ್ರತಿಭಟನೆ
ಮಂಡ್ಯ ಕಾವೇರಿ ಕಿಚ್ಚು
Follow us on

ಮಂಡ್ಯ, ಸೆ.02: ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದೆ. ಅದರಂತೆ ಸರ್ಕಾರ ಹೆಚ್ಚುವರಿ ನೀರನ್ನು ಹರಿಸುತ್ತಿದ್ದು, ಈ ಹಿನ್ನಲೆ ರೈತರು ರಾಜ್ಯ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ರೈತಸಂಘದ ಕಾರ್ಯಕರ್ತರು ಸೇರಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್​ಎಸ್ ಜಲಾಶಯದ ಬಳಿ ಕಾವೇರಿ (Cauvery) ನದಿಗೆ ಇಳಿದು ತಮಿಳುನಾಡಿಗೆ ‌ನೀರು ಹರಿಸುತ್ತಿರುವುದನ್ನ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಇತ್ತ ಕಾವೇರಿಗಾಗಿ ಹೆಚ್​.ಡಿ.ದೇವೇಗೌಡರು ಪೂಜೆ ಮಾಡುತ್ತಿದ್ದಾರೆ ಎಂದು ಮಂಡ್ಯದಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ‘ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರನ್ನು ಉಳಿಸುವುದಿಲ್ಲ. ನೀನು ಹೋರಾಟಕ್ಕೆ ಹೋಗಿ ಎಂದು ನನ್ನನ್ನು ಕಳುಹಿಸಿದ್ದಾರೆ. ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡ್ತೀವಿ ಅಂತೀರಾ?. ನಿಮಗೆ ಹಾಗೇ ಹೇಳುವ ಅಧಿಕಾರ ಕೊಟ್ಟವರು ಯಾರು?, ಸಂಕಷ್ಟದ ಬಗ್ಗೆ ಮೊದಲೇ ಪ್ರಾಧಿಕಾರಕ್ಕೆ ಯಾಕೆ ಮನವಿ ಮಾಡಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಕಾವೇರಿ ನೀರು ಹಂಚಿಕೆ ವಿವಾದ; ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ತಮಿಳುನಾಡು ಹೇಳಿದ್ದೇನು?

ಕಾಂಗ್ರೆಸ್​​ನವರು 5 ಗ್ಯಾರಂಟಿ ಶಿವ ಅಂತೀರಾ, ಲಿಕ್ಕರ್​ಗೆ 30 ರೂಪಾಯಿ ಜಾಸ್ತಿ ಮಾಡಿದ್ದೀರಲ್ಲ ಶಿವ ಎಂದು ರಾಜ್ಯ ಸರ್ಕಾರವನ್ನು ಕುಟುಕಿದ್ದಾರೆ. ಈ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ನೀರು ನಿಲ್ಲಿಸೋಕೆ ನಿಮಗೆ ಧೈರ್ಯವಿಲ್ವಾ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ ಜಿಟಿಡಿ, ಜೈಲಿಗೆ ಹೋದ್ರು ಪರವಾಗಿಲ್ಲ ನೀರು ನಿಲ್ಲಿಸಿ, ರೈತರ ಪರ ನಿಲ್ಲಿ ಎಂದಿದ್ದಾರೆ.

ಇನ್ನು ಈ ಕುರಿತು ಡಾ.ಕೆ.ಅನ್ನದಾನಿ ಪ್ರತಿಕ್ರಿಯಿಸಿದ್ದು, ‘ಮಂಡ್ಯ ಬೆಂಕಿ ಚೆಂಡನ್ನು ವಿಧಾನಸೌಧಕ್ಕೆ ಎಸೆಯುತ್ತೇವೆ. ಮಂಡ್ಯ ಜಿಲ್ಲೆ ಬೆಂಕಿ ಚೆಂಡು ಇದ್ದಂತೆ. ಚಂಡು ಎಸೆದ್ರೆ ಎಲ್ಲರೂ ಉರಿದುಹೋಗ್ತೀರಿ. ಕದ್ದು ನೀರು ಬಿಟ್ಟರೆ ನಿಮ್ಮನ್ನು ಕಳ್ಳ ಸರ್ಕಾರ ಎನ್ನಬೇಕಾಗುತ್ತೆ. ರಾತ್ರಿ 9 ಗಂಟೆಯ ನಂತರ ಕದ್ದು ನೀರು ಬಿಡುತ್ತೀರಿ ಎಂದು ಮಂಡ್ಯದಲ್ಲಿ ಮಳವಳ್ಳಿ ಕ್ಷೇತ್ರದ ಮಾಜಿ ಶಾಸಕ ಅನ್ನದಾನಿ ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ