ಆಟೋ ಚಾಲಕನಿಗೆ ಮನಬಂದಂತೆ ಥಳಿಸಿ ಅವಾಚ್ಯ ಶಬ್ಧಗಳಿಂದ ನಿಂದನೆ, ವಿಡಿಯೋ ವೈರಲ್: ಪೇದೆ ಸಸ್ಪೆಂಡ್

|

Updated on: Jun 01, 2023 | 10:32 AM

ಮಂಡ್ಯದಲ್ಲಿ ಪೊಲೀಸ್ ಪೇದೆಯೊಬ್ಬ ಆಟೋ ಚಾಲಕನ ಮೇಲೆ ಮನಬಂದಂತೆ ಹಲ್ಲೆ ಮಾಡಿ ಅವಾಚ್ಯ ಶಬ್ಧವಗಳಿಂದ ನಿಂದಿಸಿರುವ ವಿಡಿಯೋ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಕಾನ್ಸ್​ಟೇಬಲ್​ ವಿರುದ್ಧ ಕ್ರಮಕೈಗೊಂಡಿದ್ದಾರೆ.

ಮಂಡ್ಯ: ನಡುರಸ್ತೆಯಲ್ಲೇ ಆಟೋ ಚಾಲಕನೊಬ್ಬನ (Auto Driver) ಮೇಲೆ ಪೊಲೀಸ್‌ ಕಾನ್ಸ್‌ಟೇಬಲ್‌ (Police constable) ಹಲ್ಲೆ ಮಾಡಿರುವ ಘಟನೆ ಮಂಡ್ಯ (Mandya) ನಗರದಲ್ಲಿ ಮಂಗಳವಾರ ನಡೆದಿದ್ದು ತಡವಾಗಿದೆ ಬೆಳಕಿಗೆ ಬಂದಿದೆ. ಪೊಲೀಸಪ್ಪನ ದರ್ಪ ತೋರಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ. ಘಟನೆಯ ವೀಡಿಯೋ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಕೂಡಲೇ ಕೂಡಲೇ ಪೇದೆಯನ್ನು ಕೆಲಸದಿಂದ ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಇದನ್ನೂ ಓದಿ: ಮದ್ಯಸೇವಿಸಿ ಆಪರೇಷನ್ ಮಾಡಲು ಬಂದ ಡಾಕ್ಟರ್, ಶಸ್ತ್ರಚಿಕಿತ್ಸೆ ಸಿದ್ಧತೆ ,ಮಾಡಿಕೊಳ್ಳುವ ವೇಳೆ ಕುಸಿದು ಬಿದ್ದ

ಮಂಡ್ಯ ಜಿಲ್ಲಾಸ್ಪತ್ರೆಯ ಎದುರು ಆಟೋ ಚಾಲಕ ಮತ್ತು ಪೊಲೀಸರು ತೆರಳುತ್ತಿದ್ದ ಬೈಕ್‌ ನಡುವೆ ಅಪಘಾತವಾಗಿದೆ. ಪೊಲೀಸ್‌ ಪೇದೆ ರಸ್ತೆಗೆ ಬಿದ್ದು, ಕಾಲಿಗೆ ಸಣ್ಣ ಪೆಟ್ಟಾಗಿದೆ. ಸ್ಥಳೀಯರು ಪೇದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಟೋ ಚಾಲಕನಿಗೆ ಹೇಳಿದ್ದಾರೆ. ಅದರಂತೆ ಚಾಲಕ ಪೇದೆಯನ್ನು ಆಸ್ಪತ್ರೆಗೆ ಹೋಗೋಣ ಬನ್ನಿ ಎಂದು ಕರೆದಿದ್ದಾರೆ. ಆತ ಕರೆದಾಗ ಸಿಟ್ಟಿಗೆದ್ದ ಪೇದೆ, ಚಾಲಕನ ಕಪಾಳಕ್ಕೆ ಹೊಡೆದು, ಹೊಟ್ಟೆಗೆ ಗುದ್ದಿದ್ದಾರೆ.

ಮಂಡ್ಯ ಸಂಚಾರಿ ಪೊಲೀಸ್ ಕಾನ್ಸ್ ಟೇಬಲ್ ಮಹೇಂದ್ರ ಹಲ್ಲೆ ಎನ್ನುವರೇ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ. ತಪ್ಪಾಯ್ತು ಬಿಡಿ ಸಾರ್ ಎಂದರು ಜರಗದ ಪೊಲೀಸಪ್ಪ ಮನಸ್ಸು, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಆಟೋ ಚಾಲಕನಾಗಲಿ, ಪೊಲೀಸಾಗಲಿ ಯಾವುದೇ ದೂರು ದಾಖಲಿಸಿಲ್ಲ

ಮಾತ್ರವಲ್ಲದೆ, ಪೊಲೀಸ್‌ ಠಾಣೆಗೆ ಬರುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಚಾಲಕ ಆಟೋ ಹತ್ತಿದ ಬಳಿಕ ಮತ್ತೆ ಹಲ್ಲೆ ಮಾಡಿದ್ದಾರೆ. ಘಟನೆಯನ್ನು ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಕಷ್ಟ ಆಕ್ರೋಶಗಳು ವ್ಯಕ್ತವಾಗಿದ್ದು, ಪೊಲೀಸ್ ಕಾನ್ಸ್​ಟೇಬಲ್​ನ ದರ್ಪವನ್ನು ಖಂಡಿಸಿದ್ದಾರೆ. ಅಲ್ಲದೇ ಆತನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ