ಕಾರು-ಬೈಕ್ ನಡುವಿನ ಭೀಕರ ಅಪಘಾತ: ಬಾನೆಟ್ ಮೇಲೆ ಹಾರಿ ಬಿದ್ದ ಬೈಕ್ ಸವಾರ, ಭಯಾನಕ ದೃಶ್ಯ ವೈರಲ್

ತಾಲೂಕಿನ ಎಲೆಯೂರು ಸರ್ಕಲ್ ಬಳಿ ಇರುವ ಕಾಳೆಗೌಡ ಪೆಟ್ರೋಲ್ ಬಂಕ್ ಬಳಿ ಕಾರು ಹಾಗೂ ಬೈಕ್ ನಡುವೆ ಅಪಘಾತವಾಗಿದ್ದು, ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.

ಕಾರು-ಬೈಕ್ ನಡುವಿನ ಭೀಕರ ಅಪಘಾತ: ಬಾನೆಟ್ ಮೇಲೆ ಹಾರಿ ಬಿದ್ದ ಬೈಕ್ ಸವಾರ, ಭಯಾನಕ ದೃಶ್ಯ ವೈರಲ್
ರಸ್ತೆ ಅಪಘಾತದ ವಿಡಿಯೋ ವೈರಲ್​
ಕಿರಣ್ ಹನುಮಂತ್​ ಮಾದಾರ್

Updated on: Apr 10, 2023 | 10:01 AM

ಮಂಡ್ಯ: ತಾಲೂಕಿನ ಎಲೆಯೂರು ಸರ್ಕಲ್ ಬಳಿ ಇರುವ ಕಾಳೆಗೌಡ ಪೆಟ್ರೋಲ್ ಬಂಕ್ ಬಳಿ ಕಾರು ಹಾಗೂ ಬೈಕ್ ನಡುವೆ ಅಪಘಾತವಾಗಿದ್ದು, ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಹೌದು ಫೆಬ್ರವರಿಯಲ್ಲಿ ನಡೆದಿರುವ ಅಪಘಾತದ ವಿಡಿಯೋ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ರಸ್ತೆಯಲ್ಲಿ ಪ್ರಯಾಣಿಸುತ್ತೇವೆ ಎಂದರೆ ಎಷ್ಟೇ ಜೋಪಾನವಾಗಿದ್ದರೂ ಕಮ್ಮಿಯೇ ಎನ್ನುವುದಕ್ಕೆ ಈ ದೃಶ್ಯ ನಮಗೆ ಸಾಕ್ಷಿಯಾಗಿದೆ. ಇಲ್ಲೊಬ್ಬ ವ್ಯಕ್ತಿ ಸರ್ವಿಸ್​ ರಸ್ತೆಯಲ್ಲಿ ಬರುವಾಗ, ಮುಖ್ಯ ರಸ್ತೆಯಿಂದ ಸರ್ವಿಸ್​ ರಸ್ತೆಗೆ ಬಂದಿಳಿದ ಕಾರಿಗೆ ಬೈಕ್​ ಸವಾರ ಡಿಕ್ಕಿ ಹೊಡೆದಿದ್ದಾನೆ.

ಬೆಂಗಳೂರಿನಿಂದ ಮೈಸೂರು ಕಡೆ ತೆರಳುತ್ತಿದ್ದ ಇನೋವಾ ಕಾರು, ಮುಖ್ಯ ರಸ್ತೆಯಿಂದ ಸರ್ವಿಸ್ ರಸ್ತೆಗೆ ತಿರುಗಿಸಿದಾಗ, ಸರ್ವಿಸ್ ರಸ್ತೆಯಲ್ಲಿ ಬಂದ ಬೈಕ್ ಸವಾರನು ಡಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಸವಾರ ಕಾರಿನ ಬಾನೆಟ್ ಮೇಲೆ ಹಾರಿ ಬಿದ್ದಿದ್ದು, ಅಪಘಾತದ ದೃಶ್ಯ ಪೆಟ್ರೋಲ್ ಬಂಕ್ ಕ್ಯಾಮರದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಬೈಕ್ ಸವಾರನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮಂಡ್ಯ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇನ್ನಷ್ಟು ಅಪಘಾತ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಕಿರಣ್ ಹನುಮಂತ್​ ಮಾದಾರ್

ಹುಟ್ಟೂರು- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಿನಕಟ್ಟ, ಶಿರಸಿಯಲ್ಲಿ ಬಿ.ಎ ಪತ್ರಿಕೋಧ್ಯಮ ಮುಗಿಸಿ, ವಾರ್ತಾ ಇಲಾಖೆಯಲ್ಲಿ ಒಂದು ವರ್ಷದ ತರಭೇತಿ ಪಡೆದು, ಟಿವಿ9 ಡಿಜಿಟಲ್​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ.

Loading...
Unable to load recommendations.
Follow Us