Rohini Sindhuri ವಿವಾದಗಳ ಬಳಿಕ ಬಸಪ್ಪನ ಮೊರೆ ಹೋದ ರೋಹಿಣಿ ಸಿಂಧೂರಿ: 10 ನಿಮಿಷ ಕಳೆದರೂ ಪಾದ ನೀಡದ ಇಷ್ಟಾರ್ಥ ಸಿದ್ದಿ ಬಸವ

|

Updated on: Apr 08, 2023 | 12:37 PM

ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿವಾದಗಳ ಬಳಿಕ ಬಸಪ್ಪನ ಮೊರೆ ಹೋಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಚಿಕ್ಕರಸಿನ ಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿಯ ಬಸಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ.

ಮಂಡ್ಯ: ಕಳೆದ ಕೆಲ ತಿಂಗಳ ಹಿಂದೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಮತ್ತು ಐಪಿಎಸ್​ ಅಧಿಕಾರಿ ರೂಪಾ ಮೌದ್ಗಿಲ್ (Rupa Maudgil)​  ಅವರ ನಡುವೆ ಗುದ್ದಾಟ ನಡೆದಿತ್ತು. ಇವರಿಬ್ಬರ ನಡುವಿನ ಜಗಳ ಸಾಮಾಜಿಕ ಜಾಲತಾಣದಿಂದ ಆರಂಭವಾಗಿ ಬೀದಿಗೆ ಬಂತು. ಇವರಿಬ್ಬರ ನಡುವಿನ ಕಲಹ ರಾಷ್ಟ್ರ ಮಟ್ಟದಲ್ಲೂ ಸುದ್ದಿಯಾಗಿ, ಉನ್ನತ ಸ್ಥಾನದಲ್ಲಿ ಇರುವ ಅಧಿಕಾರಿಗಳು ಆಡಿಕೊಳ್ಳುವರ ಬಾಯಿಗೆ ಆಹಾರವಾದರು. ಜಗಳದ ಪ್ರತಿಫಲವಾಗಿ ಇಬ್ಬರು ಅಧಿಕಾರಿಗಳು ತಮ್ಮ ಹುದ್ದೆಯನ್ನು ಕಳೆದುಕೊಂಡರು. ಸದ್ಯ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿವಾದಗಳ ಬಳಿಕ ಬಸಪ್ಪನ ಮೊರೆ ಹೋಗಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಚಿಕ್ಕರಸಿನ ಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿಯ ಬಸಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ರೋಹಿಣಿ ಸಿಂಧೂರಿ ದೇವಾಲಯಕ್ಕೆ ಭೇಟಿ ನೀಡಿ ಬಸಪ್ಪನ ಆರ್ಶೀವಾದ ಪಡೆದಿದ್ದಾರೆ. ಈ ದೇವಸ್ಥಾನದ ವಾಡಿಕೆಯಂತೆ ಕಾಲಭೈರವೇಶ್ವರಿನಿಗೆ ಪೂಜೆ ಸಲ್ಲಿಕೆ ನಂತ್ರ ಬಸಪ್ಪನ ಪಾದ ಕೇಳೋದಕ್ಕೆ ರೋಹಿಣಿ ಸಿಂಧೂರಿ ಮುಂದಾಗಿದ್ದಾರೆ. ನಂಬಿಕೆ ಪ್ರಕಾರ ಬಸಪ್ಪ ಪಾದ ನೀಡಿದರೇ ಇಷ್ಟಾರ್ಥ ನೆರವೇರಲಿದೆ ಅನ್ನೋದು ಪ್ರತೀತಿ.

ಹೀಗಾಗಿ ಪೂಜೆ ಸಲ್ಲಿಸಿ ಪಾದ ಕೇಳಲು ಬಸಪ್ಪನ ಮುಂದೆ ಹತ್ತು ನಿಮಿಷಗಳ ಕಾಲ ಕುಳಿತರೂ ಕುಳಿತರೂ ರೋಹಿಣಿ ಸಿಂಧೂರಿ ಅವರಿಗೆ ಬಸಪ್ಪ ಪಾದ ನೀಡಲಿಲ್ಲ. ನಂತರ ಅರ್ಚಕ ಮೇಡಮ್ ಮನಸ್ಸಲ್ಲಿ ಏನಾದರು ಭಿನ್ನಹ ಮಾಡಿಕೊಂಡು ಪಾದ ಕೇಳಿ ಎಂದು ಸಲಹೆ ನೀಡಿದ್ದಾರೆ. ನಂತರ ರೋಹಿಣಿ ಸಿಂಧೂರಿ ಮನಸ್ಸಲ್ಲಿ ಬೇಡಿಕೊಂಡು ಪಾದ ಕೇಳಿದ್ದಾರೆ. ಈ ವೇಳೆ ಬಸಪ್ಪ ಪಾದ ನೀಡಿ ಆಶೀರ್ವಾದ ಮಾಡಿದ್ದಾನೆ. ಬಸಪ್ಪನ‌ ಆಶೀರ್ವಾದದ ನಂತರ ದೇವಾಲಯಕ್ಕೆ ಬಂದು ತಮ್ಮ ಕೈಲಾದ‌ ಸೇವೆ ಮಾಡುವುದಾಗಿ ರೋಹಿಣಿ ಸಿಂಧೂರಿ‌ ಹೇಳಿ ಹೊರಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:35 pm, Sat, 8 April 23