ಮದ್ದೂರು ತಾಲೂಕು ಕಚೇರಿ ಮೇಲಿಂದ ಜಿಗಿದಿದ್ದ ನೌಕರ ಚಿಕಿತ್ಸೆ ಫಲಿಸದೇ ಸಾವು

| Updated By: ಆಯೇಷಾ ಬಾನು

Updated on: Jan 17, 2022 | 9:40 AM

ಮಂಡ್ಯ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್, ಕಾರ್ಯ ನಿಮಿತ್ತ ನಿನ್ನೆ ಮದ್ದೂರಿನ ತಾಲೂಕು ಕಚೇರಿಗೆ ಹೋಗಿದ್ದರು. ಈ ವೇಳೆ ಕಚೇರಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಮದ್ದೂರು ತಾಲೂಕು ಕಚೇರಿ ಮೇಲಿಂದ ಜಿಗಿದಿದ್ದ ನೌಕರ ಚಿಕಿತ್ಸೆ ಫಲಿಸದೇ ಸಾವು
ಮದ್ದೂರು ತಾಲೂಕು ಕಚೇರಿ ಮೇಲಿಂದ ಜಿಗಿದಿದ್ದ ನೌಕರ ಚಿಕಿತ್ಸೆ ಫಲಿಸದೇ ಸಾವು
Follow us on

ಮಂಡ್ಯ: ಮದ್ದೂರು ತಾಲೂಕು ಕಚೇರಿ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ನೌಕರ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಂಡ್ಯದಲ್ಲಿ ನಡೆದಿದೆ. ವೆಂಕಟೇಶ್ ಮೃತ ನೌಕರ. ಚಿಕಿತ್ಸೆ ಫಲಿಸದೆ ಮದ್ದೂರು ಆಸ್ಪತ್ರೆಯಲ್ಲಿ ವೆಂಕಟೇಶ್ ಮೃತಪಟ್ಟಿದ್ದಾರೆ.

ಮಂಡ್ಯ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್, ಕಾರ್ಯ ನಿಮಿತ್ತ ನಿನ್ನೆ ಮದ್ದೂರಿನ ತಾಲೂಕು ಕಚೇರಿಗೆ ಹೋಗಿದ್ದರು. ಈ ವೇಳೆ ಕಚೇರಿ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ನೌಕರ ವೆಂಕಟೇಶ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ವೆಂಕಟೇಶ್ ಪ್ರಾಣ ಬಿಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಕಲಿ ಮಾರ್ಕ್ಸ್ ಕಾರ್ಡ್ ನೀಡಿ ಉದ್ಯೋಗ; 91 ಉದ್ಯೋಗಿಗಳ ಮೇಲೆ ಖಾಕಿ ಕಣ್ಣು, ತನಿಖೆಯಿಂದ ಬಯಲಾಗುತ್ತಿದೆ ಸ್ಫೋಟಕ ಮಾಹಿತಿ