ಉತ್ತರ ಭಾರತದಲ್ಲಿ ಏರಿದ ತಾಪಮಾನ: ಮಂಡ್ಯ, ಮದ್ದೂರು ಎಳನೀರಿಗೆ ಹಾಟ್ ಡಿಮ್ಯಾಂಡ್!
Tender Coconut Water: ದೇಶದ ರಾಜಧಾನಿ ದೆಹಲಿಯಲ್ಲಿ 42 ರಿಂದ 43 ಡಿಗ್ರಿ ಉಷ್ಣಾಂಶವಿದೆ. ದಿನನಿತ್ಯ 2 ಎಳನೀರನ್ನ ಕುಡಿಯಲು ವೈದ್ಯರು ಸಲಹೆ ನೀಡಿದ್ದಾರೆ. ಅದೂ ಅಲ್ಲದೆ ಮದ್ದೂರಿನ ಎಳನೀರು ಅಂದ್ರೆ ದೆಹಲಿಯಲ್ಲಿ ಸಿಕ್ಕಾಪಟ್ಟೆ ಫೇಮಸ್.
1 / 6
ಮದ್ದೂರಿನ ಎಳನೀರಿಗೆ ಎಲ್ಲಿಲ್ಲಿದ ಡಿಮ್ಯಾಂಡ್ ಸೃಷ್ಟಿಯಾಗಿದೆ. ಮಂಡ್ಯದ ಎಳನೀರು ಈಗ ದೆಹಲಿ, ರಾಜಸ್ಥಾನ ಹಾಗೂ ಯುಪಿಯಲ್ಲಿಯೂ ಜನರ ಗಂಟಲಲ್ಲಿ ಇಳಿಯುತ್ತಿದೆ. ಈ ಕುರಿತಾದ ಸ್ಟೋರಿ ನಿಮ್ಮ ಮುಂದೆ.
2 / 6
ಮಂಡ್ಯ, ಮದ್ದೂರು ಎಳನೀರಿಗೆ ಹಾಟ್ ಡಿಮ್ಯಾಂಡ್!
3 / 6
ಬೃಹತ್ ಲಾರಿ ಮೂಲಕ ರಫ್ತಾಗುತ್ತಿರುವ ಎಳನೀರು. ಲೋಡ್ ಗಟ್ಟಲೆ ಬಂದು ಬೀಳುತ್ತಿರುವ ಮಾಲು. ತಮಿಳುನಾಡು, ಯುಪಿ, ರಾಜಸ್ತಾನ ಹಾಗೂ ದೆಹಲಿಗೆ ರವಾನೆಯಾಗುತ್ತಿರುವ ಮಾಲು. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ. ಮದ್ದೂರಿನ ಎಳನೀರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ.
4 / 6
ಈ ಹಿನ್ನೆಲೆಯಲ್ಲಿ 17 ರೂ ಇದ್ದ ಎಳನೀರು ಈಗ 35 ರೂ ಗೆ ಹೆಚ್ಚಾಗಿದೆ. ಇದು ರೈತರ ಮೊಗದಲ್ಲಿ ಮಂದಾಹಾಸ ಮೂಡಿಸಿದೆ. ಎಳನೀರು ಒಳ್ಳೆ ಆದಾಯ ತಂದು ಕೊಡುತ್ತಿದೆ. ಹಾಗಾಗಿ ಮದ್ದೂರಿನ ಎಳನೀರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಈಗ.
5 / 6
ಅದೇನೆ ಹೇಳಿ ಮದ್ದೂರು ಮಂಡ್ಯದ ಎಳನೀರು ಉತ್ರತ ಭಾರತದಲ್ಲಿಯೂ ಸದ್ದು ಮಾಡುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿರುವುದು ಸುಳ್ಳಲ್ಲ.
6 / 6
ಅಸಲಿಗೆ ದೇಶದ ರಾಜಧಾನಿ ದೆಹಲಿಯಲ್ಲಿ 42 ರಿಂದ 43 ಡಿಗ್ರಿ ಉಷ್ಣಾಂಶವಿದೆ. ದಿನನಿತ್ಯ 2 ಎಳನೀರನ್ನ ಕುಡಿಯಲು ವೈದ್ಯರು ಸಲಹೆ ನೀಡಿದ್ದಾರೆ. ಅದೂ ಅಲ್ಲದೆ ಮದ್ದೂರಿನ ಎಳನೀರು ಅಂದ್ರೆ ದೆಹಲಿಯಲ್ಲಿ ಸಿಕ್ಕಾಪಟ್ಟೆ ಫೇಮಸ್.