ಮಂಡ್ಯದ ಮೈಶುಗರ್ ಕಾರ್ಖಾನೆಗೆ ಆರಂಭದಲ್ಲೇ ವಿಘ್ನ, ನುರಿತ ತಜ್ಞರಿಲ್ಲದೇ ಪದೇ ಪದೇ ತಾಂತ್ರಿಕ ಸಮಸ್ಯೆ

| Updated By: ರಮೇಶ್ ಬಿ. ಜವಳಗೇರಾ

Updated on: Jul 17, 2023 | 12:45 PM

ಹಲವು ಏಳು ಬೀಳುಗಳ ನಡುವೆ ಇತ್ತೀಚೆಗಷ್ಟೇ ಆರಂಭವಾಗಿದ್ದ ಮಂಡ್ಯದ ಮೈಶುಗರ್ ಕಾರ್ಖಾನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ಮಂಡ್ಯದ ಮೈಶುಗರ್ ಕಾರ್ಖಾನೆಗೆ ಆರಂಭದಲ್ಲೇ ವಿಘ್ನ, ನುರಿತ ತಜ್ಞರಿಲ್ಲದೇ ಪದೇ ಪದೇ ತಾಂತ್ರಿಕ ಸಮಸ್ಯೆ
ಮೈಶುಗರ್​​ ಕಾರ್ಖಾನೆ
Follow us on

ಮಂಡ್ಯ, (ಜುಲೈ 17): ಹಲವು ಏಳು ಬೀಳುಗಳ ನಡುವೆ ಇತ್ತೀಚೆಗಷ್ಟೇ ಆರಂಭವಾಗಿದ್ದ ಮಂಡ್ಯದ ಮೈಶುಗರ್ ಕಾರ್ಖಾನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ರಾಜ್ಯದಲ್ಲಿರುವ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ ಎನಿಸಿಕೊಂಡಿರುವ ಮಂಡ್ಯದ ಮೈಶುಗರ್ ಕಾರ್ಖಾನೆ(Mandya Mysugar factory) ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಜು.6ರಂದು ಕಬ್ಬು ಅರೆಯುವಿಕೆ ಕಾರ್ಯ ಆರಂಭಿಸಿದ್ದ ಕಾರ್ಖಾನೆ 9 ದಿನಗಳಲ್ಲೇ ತಾಂತ್ರಿಕ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ(ಜುಲೈ 16) ರಾತ್ರಿಯಿಂದ ಕಬ್ಬು ಅರೆಯುವಿಕೆ ಕಾರ್ಯ ಸ್ಥಗಿತಗೊಂಡಿದೆ. ಹೀಗಾಗಿ ನೂರಾರು ಕಬ್ಬಿನ ಲಾರಿಗಳು, ಎತ್ತಿನ ಗಾಡಿಗಳು ಫ್ಯಾಕ್ಟರಿ ಆವರಣದಲ್ಲಿ ನಿಂತುಕೊಂಡಿದ್ದು, 12 ಗಂಟೆ ನಂತರ ಮತ್ತೆ ಕಾರ್ಖಾನೆ ಪುನರಾರಂಭವಾಗಿದೆ,

ನಿತ್ಯ 3 ಸಾವಿರ ಟನ್ ಕಬ್ಬು ಅರೆಯುವಿಕೆ ಗುರಿ ಹೊಂದಿರುವ ಕಾರ್ಖಾನೆಗೆ ನುರಿತ ತಜ್ಞರು ಇಲ್ಲದ ಕಾರಣ ಸ್ಥಗಿತಗೊಂಡಿತ್ತು ಎಂದು ರೈತರು ಆರೋಪಿಸುತ್ತಿದ್ದಾರೆ. ಈ ಹಿಂದೆ ಎಂಡಿ ಆಗಿದ್ದ ತಾಂತ್ರಿಕತೆಯಲ್ಲಿ ನಿಪುಣತೆ ಹೊಂದಿದ್ದ ಅಪ್ಪಸಾಹೇಬ್ ಪಾಟೀಲ್​ ಅವರನ್ನು ಸರ್ಕಾರ ಬೇರೆ ವಿಭಾಗಕ್ಕೆ ವರ್ಗಾಯಿಸಿದೆ. ಅಪ್ಪಸಾಹೇಬ್ ಹೋದ ಕೆಲ ಗಂಟೆಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ಕಾರ್ಖಾನೆ ಸ್ಥಗಿತವಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣ ಹೇಳಿದ್ದಾರೆ.

ಹಲವು ಏಳು ಬೀಳುಗಳ ನಡುವೆ ಜುಲೈ 6 ರಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆಗೆ ಚಾಲನೆ ನೀಡಿದ್ದರು. ಆದ್ರೆ, ಕಬ್ಬು ಅರೆಯುವಿಕೆ ಕಾರ್ಯ ಆರಂಭಿಸಿ 9 ದಿನಗಳಲ್ಲೇ ಕಬ್ಬು ಅರೆಯುವಿಕೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆವರಣದಲ್ಲಿ ಕಬ್ಬು ತುಂಬಿರುವ ನೂರಾರು ಲಾರಿಗಳು, ಎತ್ತಿನ ಗಾಡಿಗಳು ನಿಂತಿಕೊಂಡಿವೆ.