ಮಂಡ್ಯ, ಸೆ.03: ಚಾಲಾಕಿ ಕಳ್ಳರ ಕೈಚಳಕಕ್ಕೆ ಕೊಟ್ಟಿಗೆಯಲ್ಲಿ ಕಟ್ಟಿದ್ದ 5 ಮೇಕೆಗಳು ಕಳ್ಳತನವಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಪಿಡಿಜಿ ಕೊಪ್ಪಲು ಎಂಬ ಗ್ರಾಮವೊಂದರಲ್ಲಿ ತಡರಾತ್ರಿ ರೈತ ಲೋಕೇಶ್ ಎಂಬುವವರಿಗೆ ಸೇರಿದ 5 ಮೇಕೆಗಳು ಕಳ್ಳತನವಾಗಿವೆ. ಕಳ್ಳರು ಗ್ರಾಮಕ್ಕೆ ಆಗಮಿಸಿದ್ದ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯ ಕೊಟ್ಟಿಗೆಯಲ್ಲಿ ಕಟ್ಟು ಹಾಕಿದ್ದ ಮೇಕೆಗಳು ಕಳ್ಳತನವಾಗಿವೆ. ಖದೀಮರು ಮನೆಯ ಬೀಗ ಮುರಿದು 5 ಮೇಕೆಗಳನ್ನು ಕದ್ದಿದ್ದಾರೆ.
ಕಳ್ಳತನದ ವೇಳೆ ಮನೆಯವರು ಎಚ್ಚರಗೊಳ್ಳಬಹುದು ಎನ್ನುವ ಕಾರಣಕ್ಕೆ ಕೊಟ್ಟಿಗೆಯ ಸಮೀಪದ ಮೂರು ಮನೆಗಳ ಹೊರ ಭಾಗದಿಂದ ಬಾಗಿಲು ಹಾಕಿ ಕಳ್ಳತನ ಮಾಡಲಾಗಿದೆ. ಘಟನೆಯಿಂದ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ನಷ್ಟ ಎದುರಾಗಿದೆ. ಮಾರುತಿ 800 ವಾಹನದಲ್ಲಿ ಗ್ರಾಮಕ್ಕೆ ಬಂದಿದ್ದ ಖದೀಮರು ಮೇಕೆ ಕದ್ದಿದ್ದಾರೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೆ.ಆರ್. ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕರ್ನಾಟಕದ ಮುಜರಾಯಿ ಇಲಾಖೆ ಅರ್ಚಕರಿಗೆ ಗುಡ್ ನ್ಯೂಸ್, ತಸ್ತಿಕ್ ಹಣ ರಿಲೀಸ್
ತೆಲಂಗಾಣದ ಮಂದಮರ್ರಿಯಲ್ಲಿ ಮೇಕೆ ಕದ್ದ ಶಂಕೆಯಲ್ಲಿ ದಲಿತ ವ್ಯಕ್ತಿ ಹಾಗೂ ಯುವಕನಿಗೆ ಚಿತ್ರಹಿಂಸೆ ನೀಡಿದ್ದ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ಹಿಂಡಿನಲ್ಲಿ ಮೇಕೆ ಕದ್ದಿದ್ದಾರೆ ಎಂಬ ಶಂಕೆಯಿಂದ ಮಂದಮರ್ರಿಯಲ್ಲಿ ದಲಿತ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ತಲೆಕೆಳಗಾಗಿ ಕಟ್ಟಿ ಹಾಕಿ ಹೊಗೆ ಹಾಕಿ, ಪ್ರಾಣಿಗಳಂತೆ ಥಳಿಸಿದ್ದಾರೆ ಎಂದು ಬೆಳ್ಳಂಪಳ್ಳಿ ಪೊಲೀಸರು ತಿಳಿಸಿದ್ದಾರೆ. ಮಂದಮರ್ರಿಯ ಅಂಗಡಿ ಬಜಾರ್‌ನ ಸ್ವರೂಪ್ ಮತ್ತು ಅವರ ಪುತ್ರ ಶ್ರೀನಿವಾಸ್ ಅವರು ಪಟ್ಟಣದ ಹೊರವಲಯದ ಗಂಗನೀಲಪಂಪುಳದಲ್ಲಿ ಕುರಿ ಸಾಕುತ್ತಿದ್ದರು. ಇಪ್ಪತ್ತು ದಿನಗಳ ಹಿಂದೆ ಒಂದು ಮೇಕೆ ನಾಪತ್ತೆಯಾಗಿದೆ. ಕುರುಬ ಬಾಲಕ ತೇಜ (19) ಮತ್ತು ಕಿರಣ್ (30) ಅವರ ಕೈವಾಡವಿದೆ ಆರೋಪಿಸಿ, ಥಳಿಸಿರುವ ಘಟನೆ ನಡೆದಿದೆ. ಸದ್ಯ ಈಗ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ