ಮಂಡ್ಯ: ಸಕ್ರಮ ಗಣಿಗಾರಿಕೆಗೆ ನನ್ನ ವಿರೋಧವಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ಆದರೆ ಆದರೆ ಕೆಆರ್ಎಸ್ ಡ್ಯಾಂ ಸುತ್ತಮುತ್ತ ಅಕ್ರಮ ಗಣಿಗಾರಿಕೆ ಹಸರಲ್ಲಿ ಹೆಸರಲ್ಲಿ ಗಣಿಗಾರಿಕೆ ಸಕ್ರಮ ಬೇಕೇ?ಎಂದು ಅವರು ಪ್ರಶ್ನಿಸಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ದೊಡ್ಡರಸಿನಕೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಕ್ರಮ ಗಣಿಗಾರಿಕೆ ಬಗ್ಗೆ ನಾನು ಚರ್ಚೆ ಮಾಡಲ್ಲ. ಗಣಿಗಾರಿಕೆ ಬಗ್ಗೆ ಮಾತನಾಡಿದರೆ ಕೆಲವರು ಮಾತನಾಡುತ್ತಾರೆ. ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದ್ದರಿಂದಲೇ ಗ್ರೌಟಿಂಗ್ ಮಾಡಿದ್ದಾರೆ. 67 ಕೋಟಿ ವೆಚ್ಚದಲ್ಲಿ ಗ್ರೌಟಿಂಗ್ ಮಾಡಿ ದುರಸ್ತಿ ಮಾಡಿದ್ದಾರೆ. ಗಣಿ ಇಲಾಖೆ ನೂತನ ಸಚಿವರನ್ನು ಭೇಟಿಯಾಗಿ ಚರ್ಚಿಸುವೆ. ಕೆಆರ್ಎಸ್ ಡ್ಯಾಂ 5 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಸಚಿವರಿಗೆ ಒತ್ತಾಯಿಸುವೆ ಎಂದು ಸುಮಲತಾ ಅಂಬರೀಶ್ ಹೇಳಿದರು.
ಎರಡು ವರ್ಷದಿಂದಲು ಕೂಡ ಈ ಬಗ್ಗೆ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಮೊನ್ನೆ ಅಧಿವೇಶನದಲ್ಲಿದ್ದಾಗಲೂಈ ಬಗ್ಗೆ ಚರ್ಚೆ ಮಾಡಿದ್ದೇನೆ. ಕೇಂದ್ರ ಸಚಿವರ ಗಮನಕ್ಕೆ ತಂದಿದ್ದೇನೆ. ಎಲ್ಲರೂ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹ ಸಚಿವ ಅಮಿತ್ ಶಾ ಅಧಿಕಾರಿಗಳಿಗೆ ಹೇಳಿದ್ದಾರೆ. ಅಕ್ರಮ ನಡೆಯುತ್ತಿದೆ ಎಂದು ಧ್ವನಿ ಎತ್ತಿದಾಗ ಹಲವು ಕಡೆಯಿಂದ ವಿರೋಧ ವ್ಯಕ್ತವಾಗಿದೆ. ಕೆಲವರು ವಿರೋಧ ಮಾಡಿದರು ಅಂತ ನಾನು ಭಯ ಪಟ್ಟು ಹಿಂದೆಸರಿಯಲ್ಲ. ನಾನು ಏನೋ ತಪ್ಪು ಮಾಡಿದ್ದೇನೆ ಎಂದು ಬಿಂಬಿಸಲು ಹೊರಟವರಿಗೆ ನನ್ನ ಹೋರಾಟದ ಮೂಲಕ ಉತ್ತರ ಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.
ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಬೇಕು ಎಂದು ಹೇಳುತ್ತಿರುವವರು ಮೊದಲು ಅಕ್ರಮ ನಡೆಯುತ್ತಿದೆ ಎಂದು ಒಪ್ಪಿಕೊಳ್ಳಬೇಕು. ಈಗ ಅಕ್ರಮ ಮಾಡಿದ್ದೇವೆ, ಸಕ್ರಮ ಮಾಡಿಕೊಡಿ ಎಂದು ಹೇಳಿದ್ರೆ ಅದಕ್ಕೆ ಒಂದು ಪ್ರಾಸೆಸ್ ಇರುತ್ತೆ. ಆದರೆ ಕೆ.ಆರ್.ಎಸ್ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ಮಾಡಿಕೊಡಿ ಅಂದ್ರೆ ಅದು ಆಗಲ್ಲ. ಕೆ.ಆರ್.ಎಸ್ ಡ್ಯಾಂ ಮತ್ತು ನಮ್ಮ ಪರಿಸರ ನಮಗೆ ಮುಖ್ಯ. ಪ್ರವಾಹ ಬಂತು ಅಂದ್ರೆ 5 ಸಾವಿರ ಕೋಟಿ ಕೊಡಿ, 10 ಸಾವಿರ ಕೋಟಿ ಕೊಡಿ ಅಂದ್ರೆ ಸರ್ಕಾರ ಕೊಡಬಹುದು. ಆದ್ರೆ ಮತ್ತೆ ಮತ್ತೆ ಪ್ರವಾಹ ಬಂದ್ರೆ ಏನ್ಮಾಡೋದು? ಮೊದಲು ಎಚ್ಚೆತ್ತುಕೊಳ್ಳೋದು ನಮ್ಮ ಜವಾಬ್ದಾರಿ. ನಾವು ಪರಿಸರವನ್ನ ನಾಶ ಮಾಡಿದ್ರೆ, ಪರಿಸರ ನಮ್ಮನ್ನ ನಾಶ ಮಾಡುತ್ತೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ:
ಗಣಿಗಾರಿಕೆ ಸ್ಥಗಿತದಿಂದ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ: ಶಾಸಕ ರವೀಂದ್ರ ಶ್ರೀಕಂಠಯ್ಯ ಅಸಮಾಧಾನ
ಲೋಕಸಭೆಯಲ್ಲಿ ಅಕ್ರಮ ಗಣಿಗಾರಿಕೆ ಪ್ರಸ್ತಾಪ; ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಂಸದೆ ಸುಮಲತಾ ಒತ್ತಾಯ
Published On - 5:35 pm, Wed, 11 August 21