ಮಂಡ್ಯ ನಗರ ಸೇರಿದಂತೆ ಹಲವೆಡೆ ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದ ಜನ; ನಡುಗಿದ ಮನೆ, ಅಂಗಡಿಗಳು

Edited By:

Updated on: Feb 24, 2024 | 8:48 PM

ಮಂಡ್ಯ ನಗರದಲ್ಲಿ ನಿಗೂಢ ಶಬ್ದವೊಂದು ಕೇಳಿಸಿದ್ದು, ನಗರ ಸೇರಿದಂತೆ ಹಲವೆಡೆ ಮನೆಗಳು, ಅಂಗಡಿಗಳು ನಡುಗಿವೆ. ನಿಗೂಢ ಶಬ್ದ ಕೇಳಿದ ಜನರು ಬೆಚ್ಚಿಬಿದ್ದಿದ್ದಾರೆ. ಕೆಲಕಾಲ ಆತಂಕದ ವಾತಾವರಣವೂ ಸೃಷ್ಟಿಯಾಯಿತು. ಇದರ ವಿಡಿಯೋ ಇಲ್ಲಿದೆ ನೋಡಿ..

ಮಂಡ್ಯ, ಫೆ.24: ನಗರ (Mandya) ಸೇರಿದಂತೆ ಹಲವೆಡೆ ನಿಗೂಢ ಶಬ್ದ ಕೇಳಿಬಂದಿದೆ. ಮಧ್ಯಾಹ್ನ 1.20 ರಿಂದ 1.30ರ ವೇಳೆಯಲ್ಲಿ ಈ ನಿಗೂಢ ಶಬ್ದ ಕೇಳಿಸಿದ್ದು, ಕೆಲಕಾಲ ಭೂಮಿ ಕಂಪಿಸಿದ ಅನುಭವವೂ ಆಗಿದೆ. ನಿಗೂಢ ಶಬ್ದಕ್ಕೆ ಮನೆ, ಅಂಗಡಿ ಬಾಗಿಲು, ಕಿಟಕಿ ಅಲುಗಾಡಿದೆ. ಅಲ್ಲದೆ, ಶಬ್ದ ಕೇಳಿಸಿದ ಜನರು ಬೆಚ್ಚಿಬಿದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ