ಮಂಡ್ಯ ಜಿಲ್ಲೆ ಮದ್ದೂರಿನಲ್ಲಿರೋ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನ, ಭಕ್ತರ ಪಾಲಿನ ನೆಚ್ಚಿನ ಕೇಂದ್ರ. ಸುಮಾರು 550 ವರ್ಷಗಳ ಇತಿಹಾಸ ಇರುವ ಆಂಜನೇಯಸ್ವಾಮಿ ದೇವಸ್ಥಾನ, ಶಿಂಷಾ ನದಿಯ ದಡದ ಮೇಲೆ ನೆಲೆಸಿದ್ದು, ಹೊಳೆ ಆಂಜನೇಯಸ್ವಾಮಿ ದೇವಸ್ಥಾನ ಎಂತಲೇ ರಾಜ್ಯದಲ್ಲಿ ಖ್ಯಾತಿ ಪಡೆದಿದೆ.
ಶ್ರೀಪಾದರಾಜರು ಹಾಗೂ ವ್ಯಾಸರಾಯರು ಇಬ್ಬರು, ಗುರು ಶಿಷ್ಯರು ಸೇರಿ ಈ ದೇವರನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. 732 ಕಡೆ ವ್ಯಾಸರು ಆಂಜನೇಯ ವಿಗ್ರಹಗಳನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಅದೇ ರೀತಿ ಮದ್ದೂರಿನ ಹೊಳೆಯ ದಡದ ಮೇಲೆ ಕೂಡ ಆಂಜನೇಯ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದ್ದಾರೆ. ಆಂಜನೇಯ ದೇವರು, ಹನುಮ, ಭೀಮ, ಮಧ್ವಾ ಎಂದು ಮೂರು ಅವತಾರದಲ್ಲಿ ಇದ್ದಾರೆ. ಬಲಗೈಯ ಎರಡು ಬೆರಳುಗಳು ಉದ್ದ ಇರುವುದು ಮಧ್ವಾ ಅವತಾರ. ಎಡಗೈಯಲ್ಲಿ ಸೌಗಂಧಿಕ ಪುಷ್ಪ ಇರುವುದು ಭೀಮ ಅವತಾರ. ದೇವರಿಗೆ ಜುಟ್ಟು ಸಹಾ ಇದೆ. ಇಲ್ಲಿನ ವಿಶೇಷ ಎಂದರೇ ದೇವಸ್ಥಾನದಲ್ಲಿ ನಾಲ್ಕಾಣೆ ದುಡ್ಡು ಕೊಡುತ್ತಾರೆ. ಅದನ್ನ ನೋಟಿನ ಜೊತೆ ಇಟ್ಟುಕೊಂಡು ತಮಗೆ ಏನು ಆಗಬೇಕು ಎಂದು ಪ್ರಾರ್ಥನೆ ಮಾಡಿ ಅದನ್ನ ದೇವರ ಪಾದದ ಬಳಿ ಹಾಕಿದ್ರೆ ನಾವು ಅಂದುಕೊಂಡ ಕೆಲಸ ಆಗುತ್ತದೆ ಎಂಬ ನಂಬಿಕೆ ಇದೆ.
ಇನ್ನು ಇಲ್ಲಿಗೆ ಮಧ್ವತೀರ್ಥರು ಕೂಡ ಬಂದು ಪೂಜೆ ಮಾಡಿದ್ದಾರೆ. ಬ್ರಹ್ಣಯ್ಯ ತೀರ್ಥರು ಕೂಡ ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿದ್ದಾರೆ. ಕದಂಬ ಖುಷಿಗಳು ಕೂಡ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದಾರೆ. ಈ ಹಿಂದೆ ಶಿಂಷಾ ನದಿ ಕದಂಬ ನದಿಯಾಗಿತ್ತು. ಕದಂಬ ಖುಷಿಗಳು ತಪ್ಪಸ್ಸು ಮಾಡಿದ್ದರು ಎಂಬ ನಂಬಿಕೆ.
Also Read: ಗದಗದ ಲಕ್ಕುಂಡಿ ಅನೇಕ ಐತಿಹಾಸಿಕ ದೇಗುಲಗಳು, ಮೆಟ್ಟಿಲು ಬಾವಿಗಳ ತೊಟ್ಟಿಲು… ವಿಡಿಯೋ ನೋಡಿ
ಆನಂತರ ಅದು ಶಿಂಷಾ ನದಿಯಾಗಿದೆ. ಇನ್ನು ಹನುಮಜಯಂತಿ, ರಾಮನವಮಿ, ಶ್ರಾವಣ ಮಾಸ, ಕಾರ್ತಿಕ ಮಾಸದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಮಹಾರಥೋತ್ಸಹ ಕೂಡ ನಡೆಯುತ್ತದೆ. ಇನ್ನು ಇಲ್ಲಿ ಅಭಿಷೇಕ ಮಾಡಿಸಿದ್ರೆ ಒಳ್ಳೆಯದು ಆಗುತ್ತದೆ ಎಂಬುದು ನಂಬಿಕೆ. ಹೀಗಾಗಿಯೇ ಚಲನಚಿತ್ರ ನಟರು ಸೇರಿದಂತೆ ಅನೇಕ ಗಣ್ಯರು ಕೂಡ ದೇವರ ದರ್ಶನ ಪಡೆಯುತ್ತಾರೆ. ಸದ್ಯ ಮುಜರಾಯಿ ಇಲಾಖೆ ಅಡಿಯಲ್ಲಿ ದೇವಸ್ಥಾನವಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ