ಬೆಂಗಳೂರು: ರಾಜ್ಯದ ಕೆಲವು ಆಸ್ಪತ್ರೆಗಳಲ್ಲೂ ಆಮ್ಲಜನಕದ ಕೊರತೆ ಉಂಟಾಗಿದೆ. ಚಾಮರಾಜನಗರ ಜಿಲ್ಲೆಯ ಆಸ್ಪತ್ರೆಯಲ್ಲಿ ಸಹ ಆಕ್ಸಿಜನ್ ಇಲ್ಲದೆ 24 ಗಂಟೆಯಲ್ಲಿ 24 ರೋಗಿಗಳು ಮೃತಪಟ್ಟಿದ್ದಾರೆ. ಇದೀಗ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗುತ್ತಿದೆ. ಇನ್ನೆರಡು ಗಂಟೆಯಲ್ಲಿ ಆಕ್ಸಿಜನ್ ಖಾಲಿಯಾಗಲಿದೆ. ಕೂಡಲೇ ಪೂರೈಕೆ ಮಾಡಿ ಎಂದು ಆಸ್ಪತ್ರೆಯ ಆಡಳಿತ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
ಹಾಗೇ , ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಮೆಡಾಕ್ಸ್ ಆಸ್ಪತ್ರೆಯಲ್ಲೂ ಸಹ ಆಕ್ಸಿಜನ್ ಖಾಲಿ ಆಗುತ್ತಿದೆ. ಸಂಜೆ 4ಗಂಟೆಯವರೆಗೆ ಆಗುವಷ್ಟು ಮಾತ್ರ ಆಮ್ಲಜನಕ ಇದೆ ಎಂದು ಅಲ್ಲಿನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಆಸ್ಪತ್ರೆಯ ಐಸಿಯುನಲ್ಲಿ ನಾಲ್ವರು ರೋಗಿಗಳು ಇದ್ದಾರೆ. ಇಲ್ಲಿನ್ನೂ ಆಕ್ಸಿಜನ್ ಪೂರೈಕೆ ಆಗಿಲ್ಲ.
ಚಿತ್ರದುರ್ಗದಲ್ಲೂ ವೈದ್ಯಕೀಯ ಆಕ್ಸಿಜನ್ ಇಲ್ಲ
ಇನ್ನು ಚಿತ್ರದುರ್ಗ ನಗರದ ಆಕ್ಸಿಜನ್ ಘಟಕದಲ್ಲೂ ವೈದ್ಯಕೀಯ ಆಕ್ಸಿಜನ್ ಕೊರತೆ ಉಂಟಾಗಿದೆ. ಆಮ್ಲಜನಕ ಖಾಲಿಯಾಗಿರುವ ಪರಿಣಾಮ ಸೋಂಕಿತರಿಗೆ ಹೈ ಫ್ಲೋ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ರೋಗಿಗಳು, ಸಂಬಂಧಿಕರು ತೀವ್ರ ಆತಂಕದಲ್ಲಿ ಇದ್ದಾರೆ.
ಆದರೆ ಆಕ್ಸಿಜನ್ ವ್ಯತ್ಯಯವಾಗಿಲ್ಲ. ಇನ್ನೇನು ಕೆಲವೇ ಹೊತ್ತಲ್ಲಿ ಆಮ್ಲಜನಕ ಪೂರೈಕೆಯಾಗಲಿದೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: K Sudhakar Press Meet: ಆಕ್ಸಿಜನ್ ಕೊರತೆಯಿಂದ ಮೂವರು ಮಾತ್ರ ಸಾವನ್ನಪ್ಪಿದ್ದಾರೆ; ಸಚಿವ ಸುಧಾಕರ್ ಸ್ಪಷ್ಟನೆ
ಕೋವಿಡ್-19 ಕಾರ್ಯಪಡೆ ಪುನಾರಚನೆ: ಡಿಸಿಎಂ ಡಾ.ಅಶ್ವತ್ಥನಾರಾಯಣ ನೇತೃತ್ವ, ಆರೋಗ್ಯ ಸಚಿವ ಡಾ ಸುಧಾಕರ್ಗೆ ಹಿನ್ನಡೆ
Published On - 4:15 pm, Mon, 3 May 21