ಬೆಂಗಳೂರು: ಮೆಗಾ ಲೋಕ ಅದಾಲತ್‌ನಲ್ಲಿ 3.32 ಲಕ್ಷ ಪ್ರಕರಣ ಇತ್ಯರ್ಥವಾಗಿದೆ. ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಕೇಸ್ ಇತ್ಯರ್ಥಗೊಂಡಿದೆ. ಜೊತೆಗೆ, ಪ್ರಕರಣಗಳಲ್ಲಿ 1,033 ಕೋಟಿ ರೂಪಾಯಿಯಷ್ಟು ಪರಿಹಾರವನ್ನು ಸಹ ಪಾವತಿಸಲಾಗಿದೆ ಎಂದು ಕಾನೂನು ಸೇವೆಗಳ ಪ್ರಾಧಿಕಾರದಿಂದ ಸುದ್ದಿಗೋಷ್ಠಿ ವೇಳೆ ಮಾಹಿತಿ ಬಿಡುಗಡೆಯಾಗಿದೆ. ಕಾರ್ಯ ನಿರ್ವಾಹಕ ಅಧ್ಯಕ್ಷ ನ್ಯಾ.ಅರವಿಂದ ಕುಮಾರ್ ಮಾಹಿತಿ ನೀಡಿದ್ದಾರೆ.
ಇದಲ್ಲದೆ, ಮೆಗಾ ಲೋಕ ಅದಾಲತ್‌ನಲ್ಲಿ 3,853 ಆಸ್ತಿ ವ್ಯಾಜ್ಯ ಇತ್ಯರ್ಥವಾಗಿದೆ. ಅಷ್ಟೇ ಅಲ್ಲ, ಚೆಕ್ ಬೌನ್ಸ್ ಪ್ರಕರಣ, ಮೋಟಾರು ವಾಹನ ಕಾಯ್ದೆ ಪ್ರಕರಣ ಮತ್ತು ವೈವಾಹಿಕ ಪ್ರಕರಣಗಳು ಸೇರಿದಂತೆ 3.32 ಲಕ್ಷ ಕೇಸ್ ಇತ್ಯರ್ಥಗೊಂಡಿದೆ. ಇದೀಗ, ಇದರಿಂದ ರಾಜ್ಯ ಸರ್ಕಾರಕ್ಕೆ 140 ಕೋಟಿ ರೂಪಾಯಿ ವೆಚ್ಚ ಉಳಿತಾಯವಾಗಿದೆ ಎಂಬ ಮಾಹಿತಿ ಸಹ ಲಭ್ಯವಾಗಿದೆ.
ಇದನ್ನೂ ಓದಿ: ಹಿಂದುಳಿದ, ದಲಿತ ನಾಯಕರನ್ನು ತುಳಿಯಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ -ಪ್ರಸನ್ನಾನಂದಪುರಿ ಸ್ವಾಮೀಜಿ ಆರೋಪ