ಇನ್ನೊಂದು ತಿಂಗಳಾದ ಬಳಿಕ ಏನು ಬಿಡುಗಡೆ ಮಾಡ್ತಾರೋ ನೋಡೋಣ; ಡಾ.ಕೆ.ಸುಧಾಕರ್

|

Updated on: Mar 26, 2021 | 3:01 PM

ಏಕಪತ್ನಿವ್ರತಸ್ಥ ಹೇಳಿಕೆ ವಿಚಾರವಾಗಿ ಪ್ರಶ್ನಿಸಿದಾಗ, ಸಚಿವ.ಡಾ.ಕೆ.ಸುಧಾಕರ್ ಉತ್ತರಿಸಲು ಹಿಂದೇಟು ಹಾಕಿದರು. ಅದು ನಿನ್ನೆಯೇ ಮುಗಿದುಹೋಗಿದೆ. ಆ ಮುಗಿದುಹೋದ ಅಧ್ಯಾಯದ ಕುರಿತು ಇನ್ನು ಮಾತನಾಡುವುದಿಲ್ಲ ಎಂದು ಅವರು ತಿಳಿಸಿದರು.

ಇನ್ನೊಂದು ತಿಂಗಳಾದ ಬಳಿಕ ಏನು ಬಿಡುಗಡೆ ಮಾಡ್ತಾರೋ ನೋಡೋಣ; ಡಾ.ಕೆ.ಸುಧಾಕರ್
ಕೆ. ಸುಧಾಕರ್​
Follow us on

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ‘ಇನ್ನೊಂದು ತಿಂಗಳಾದ ಬಳಿಕ ಏನು ಬಿಡುಗಡೆ ಮಾಡ್ತಾರೋ..ಏನೇನು ಬಿಡುಗಡೆ ಮಾಡುತ್ತಾರೋ ನೋಡೋಣ. SIT ತನಿಖೆಯಾಗ್ತಿದೆ, ಈಗ ನಾನು ಏನೂ ಹೇಳದಿರುವುದು ಉತ್ತಮ’ ಎಂದು ಬೆಂಗಳೂರಿನಲ್ಲಿ ಹೇಳಿದರು.

ಸುದ್ದಿಗಾರರು ಏಕಪತ್ನಿವ್ರತಸ್ಥ ಹೇಳಿಕೆ ವಿಚಾರವಾಗಿ ಪ್ರಶ್ನಿಸಿದಾಗ, ಸಚಿವ.ಡಾ.ಕೆ.ಸುಧಾಕರ್ ಉತ್ತರಿಸಲು ಹಿಂದೇಟು ಹಾಕಿದರು. ಅದು ನಿನ್ನೆಯೇ ಮುಗಿದುಹೋಗಿದೆ. ಆ ಮುಗಿದುಹೋದ ಅಧ್ಯಾಯದ ಕುರಿತು ಇನ್ನು ಮಾತನಾಡುವುದಿಲ್ಲ ಎಂದು ಅವರು ತಿಳಿಸಿದರು.

ಏನಿದು ಏಕಪತ್ನಿವೃತಸ್ಥ ಹೇಳಿಕೆ?

‘ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್‌ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ನಾನೂ ಸೇರಿದಂತೆ 224 ಶಾಸಕ ಮೇಲೆಯೂ ತನಿಖೆಯಾಗಲಿ. ಎಲ್ಲರನ್ನು ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತದೆ’ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಹಾಲಿ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಾ ಪಂಥಾಹ್ವಾನ ನೀಡಿದ್ದರು.

ಮುಖ್ಯಮಂತ್ರಿ ಆಗಿದ್ದಾಗ ಯಾರು ಯಾರು ಏನೇನು ಮಾಡಿದ್ದರು? ಎಂದು ಎಲ್ಲದರ ಬಗ್ಗೆಯೂ ತನಿಖೆಯಾಗಲಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್‌ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ಎಂದು ಡಾ.ಕೆ.ಸುಧಾಕರ್ ಪ್ರಶ್ನೆ ಎತ್ತಿದ್ದಾರೆ. ಹೀಗಾಗಿ 224 ಶಾಸಕರ ಬಗ್ಗೆ ಕೂಡ ತನಿಖೆಯಾಗಲಿ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆಗ್ರಹಿಸಿದ್ದರು.

ಎಲ್ಲಾ ಮಂತ್ರಿಗಳದ್ದು ಶಾಸಕರದ್ದು ವಿರೋಧ ಪಕ್ಷಗಳವರದ್ದು ಕೂಡ ತನಿಖೆಯಾಗಲಿ. ಯಾರಿಗೆ ಅನೈತಿಕ ಸಂಬಂಧವಿದೆ ಎಂಬುದು ತಿಳಿಯಲಿ ಬಿಡಿ. ಸಮಾಜಕ್ಕೆ ಇವರೆಲ್ಲರೂ ಕೂಡ ಮಾದರಿಯಾಗಿದ್ದಾರೆ. ಆದರೆ ಇವರೆಲ್ಲರೂ ಕೂಡ ಒಪ್ಪಿಕೊಳ್ಳಲಿ. 224 ಶಾಸಕರ ಬಗ್ಗೆಯೂ ಕೂಡ ತನಿಖೆಯಾಗಲಿ ಎಂದು ಸುಧಾಕರ್ ಆಗ್ರಹಿಸಿದ್ದರು.

ಇದನ್ನೂ ಓದಿ: ಏಕಪತ್ನಿ ವ್ರತಸ್ಥ ಪ್ರಶ್ನೆ: ಜೀವನದಲ್ಲಿ ಒಂದು ಸಾರಿ ತಪ್ಪು ಮಾಡಿದ್ದೇನೆ. ಅದನ್ನು ಸದನದಲ್ಲಿ ಒಪ್ಕೊಂಡಿದ್ದೇನೆ: ಹೆಚ್‌ಡಿ ಕುಮಾರಸ್ವಾಮಿ

ಏಕಪತ್ನಿ ವ್ರತಸ್ಥ ಪ್ರಶ್ನೆ: ಬಿದ್ದು ಬಿದ್ದು ನಕ್ಕ ಸೌಮ್ಯಾರೆಡ್ಡಿ; ನಾನು ನೂರಕ್ಕೆ ನೂರರಷ್ಟು ಏಕ ಪತ್ನಿವ್ರತಸ್ಥ ಎಂದ ಶಿವಲಿಂಗೇಗೌಡ