ನನಗೆ ವಯಸ್ಸಾಗಿದೆ, ಸಿಡಿ ತಗೊಂಡು ನಾನೇನು ಮಾಡಲಿ? ಶಾಮನೂರು ಶಿವಶಂಕರಪ್ಪ ಪ್ರಶ್ನೆ

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಪ್ರತಿಕ್ರಿಯಿಸಲ್ಲ. ನನಗೆ ವಯಸ್ಸಾಗಿದೆ, ಸಿಡಿ ತಗೊಂಡು ನಾನು ಏನು ಮಾಡಲಿ? ಸಿಡಿ ಪ್ರಕರಣದಲ್ಲಿ ಅದೆಲ್ಲ ಏನೂ ಆಗುವುದಿಲ್ಲ ಎಂದು ದಾವಣಗೆರೆ ಮಹಾನಗರ ಪಾಲಿಕೆ ಬೈ ಎಲೆಕ್ಷನ್ ಪ್ರಚಾರದ ವೇಳೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ರು.

ನನಗೆ ವಯಸ್ಸಾಗಿದೆ, ಸಿಡಿ ತಗೊಂಡು ನಾನೇನು ಮಾಡಲಿ? ಶಾಮನೂರು ಶಿವಶಂಕರಪ್ಪ ಪ್ರಶ್ನೆ
ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ
Follow us
ಆಯೇಷಾ ಬಾನು
|

Updated on: Mar 26, 2021 | 2:07 PM

ದಾವಣಗೆರೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನದಿಂದ ದಿನಕ್ಕೆ ಭಾರಿ ಕುತೂಹಲವನ್ನು ಹೆಚ್ಚಿಸುತ್ತಿದೆ. ಈ ನಡುವೆ ಇಂದು ಸಿಡಿ ಲೇಡಿಯಿಂದ ಮತ್ತೊಂದು ವಿಡಿಯೋ ಬಿಡುಗಡೆಯಾಗಿದ್ದು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜೊತೆಗೆ ರಮೇಶ್ ಜಾರಕಿಹೊಳಿ CD ಸುದ್ದಿ ಸ್ಫೋಟ ಪ್ರಕರಣ ಸಂಬಂಧ ಮಾತನಾಡಿದ ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ನನಗೆ ವಯಸ್ಸಾಗಿದೆ, ಸಿಡಿ ತಗೊಂಡು ನಾನು ಏನು ಮಾಡಲಿ ಎಂದು ಪ್ರಶ್ನಿಸಿದ್ದಾರೆ.

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಪ್ರತಿಕ್ರಿಯಿಸಲ್ಲ. ನನಗೆ ವಯಸ್ಸಾಗಿದೆ, ಸಿಡಿ ತಗೊಂಡು ನಾನು ಏನು ಮಾಡಲಿ? ಸಿಡಿ ಪ್ರಕರಣದಲ್ಲಿ ಅದೆಲ್ಲ ಏನೂ ಆಗುವುದಿಲ್ಲ ಎಂದು ದಾವಣಗೆರೆ ಮಹಾನಗರ ಪಾಲಿಕೆ ಬೈ ಎಲೆಕ್ಷನ್ ಪ್ರಚಾರದ ವೇಳೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ರು.

ಇದನ್ನೂ ಓದಿ: ಅಜ್ಞಾತ ಸ್ಥಳದಲ್ಲಿದ್ದು ಬೆತ್ತಲೆ ಪ್ರದರ್ಶನಕ್ಕೆ ಸಿದ್ಧವಾಗಿರುವ ಯುವತಿ ಬಗ್ಗೆ ನಾನೇಕೆ ಹೆದರಬೇಕು? ಎದುರಿಸ್ತೇನೆ- ರಮೇಶ್ ಜಾರಕಿಹೊಳಿ