ಪಶ್ಚಿಮಘಟ್ಟದಲ್ಲಿ ಸಣ್ಣಸಣ್ಣ ಡ್ಯಾಂಗಳ ನಿರ್ಮಾಣಕ್ಕೆ 1,400 ಸ್ಥಳಗಳನ್ನು ಗುರುತಿಸಲಾಗಿದೆ: ಸಣ್ಣ ನೀರಾವರಿ‌ ಸಚಿವ ಮಾಧುಸ್ವಾಮಿ

| Updated By: guruganesh bhat

Updated on: Aug 10, 2021 | 3:18 PM

ಕೇಂದ್ರ ಜಲಶಕ್ತಿ‌ ಸಚಿವರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. 3.5 ಸಾವಿರ ಕೋಟಿ ಹಣ ಸಹಾಯಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ವಿವರಿಸಿದರು.

ಪಶ್ಚಿಮಘಟ್ಟದಲ್ಲಿ ಸಣ್ಣಸಣ್ಣ ಡ್ಯಾಂಗಳ ನಿರ್ಮಾಣಕ್ಕೆ 1,400 ಸ್ಥಳಗಳನ್ನು ಗುರುತಿಸಲಾಗಿದೆ: ಸಣ್ಣ ನೀರಾವರಿ‌ ಸಚಿವ ಮಾಧುಸ್ವಾಮಿ
ಸಚಿವ ಮಾಧುಸ್ವಾಮಿ
Follow us on

ದೆಹಲಿ: ಪಶ್ಚಿಮ ಘಟ್ಟದಲ್ಲಿ ಸಣ್ಣಸಣ್ಣ ಡ್ಯಾಂ ನಿರ್ಮಿಸುವ ಚಿಂತನೆಯಿದ್ದು, ಇದಕ್ಕಾಗಿ ಒಟ್ಟು 1,400 ಜಾಗಗಳನ್ನು ಗುರುತಿಸಿದ್ದೇವೆ‌. ನದಿಗಳು ಸಮುದ್ರ ಸೇರುವ ಸ್ಥಳಗಳಲ್ಲಿ ಸಿಹಿ ನೀರು ಸಂಗ್ರಹ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಕೇಳಿದ್ದೇವೆ ಎಂದು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ‌ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ನಂತರ ಸಣ್ಣ ನೀರಾವರಿ‌ ಸಚಿವ ಮಾಧುಸ್ವಾಮಿ ತಿಳಿಸಿದರು.

ಕೇಂದ್ರದಿಂದ ಜಲಜೀವನ್ ಮಿಷನ್ ಯೋಜನೆಗೆ ಅನುದಾನ ಕೇಳಿದ್ದೇವೆ. ಅಟಲ್ ಭುಜಬಲ್ ಯೋಜನೆಗೂ ಅನುದಾನ ಕೇಳಿದ್ದೇವೆ. ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುವ ವಿಶ್ವಾಸವಿದೆ. ಕೇಂದ್ರ ಜಲಶಕ್ತಿ‌ ಸಚಿವರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. 3.5 ಸಾವಿರ ಕೋಟಿ ಹಣ ಸಹಾಯಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ವಿವರಿಸಿದರು.

ದೇವೇಗೌಡರು ಸಿಎಂ ಬಸವರಾಜ ಬೊಮ್ಮಾಯಿ‌ಯವರ ತಂದೆಯ ಗೆಳೆಯರು. ಹಾಗಾಗಿ ದೇವೇಗೌಡರನ್ನು ಸಿಎಂ ಭೇಟಿ ಮಾಡಿದ್ದಾರೆ. ಭೇಟಿಗೆ ರಾಜಕೀಯ ಬಣ್ಣ ಬಳಿಯುವ ಅವಶ್ಯಕತೆ ಇಲ್ಲ. ಇಂತಹ ಭೇಟಿಯ ಬಗ್ಗೆ ತಪ್ಪು ತಿಳಿಯುವ ಅಗತ್ಯವಿಲ್ಲ. ನಮಗೆ ಸಂಖ್ಯೆ ಕೊರತೆ ಇಲ್ಲ. ಸಂಖ್ಯೆ ಕೊರತೆ ಇದೆ ಎಂದು ಕೇಳುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಸಹ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಇದನ್ನೂ ಓದಿ:  ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ: ಚೆಕ್​ ಬೌನ್ಸ್​ ಕೇಸ್​ಗೆ ಮರುಜೀವ

ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

(Minor Irrigation Minister Madhu Swamy says Over 1400 sites identified for small dams in the Western Ghats)

Published On - 2:55 pm, Tue, 10 August 21