ಬೆಳಗಾವಿ: ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವ ಬೆಳಗಾವಿ ಬಿಜೆಪಿ ಶಾಸಕರಿಂದ ಹೋಮ ಹವನ ವಿಚಾರವಾಗಿ ಉಪ ಮುಖ್ಯಮಂತ್ರಿ, ಕೊವಿಡ್ ಟಾಸ್ಕ್ ಫೋರ್ಸ್ ಅಧ್ಯಕ್ಷ ಡಾ. ಅಶ್ವತ್ಥ ನಾರಾಯಣ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಶಾಸಕರು ಕಾನೂನು ಮೀರಿ ಹೀಗೆ ಮಾಡೋದು ಸರಿಯಲ್ಲ. ಇದ್ದಾಗ ಭಗವಂತನ ಮೊರೆ ಹೋಗೋದು ತಪ್ಪಲ್ಲ. ಆದರೆ, ಲೋಕ ಕಲ್ಯಾಣಕ್ಕೆ ಶಾಸಕರು ಒಬ್ಬರೇ ಮನೆಯಲ್ಲಿ ಹೋಮ-ಹವನ ಮಾಡಲಿ. ಆದರೆ ಜನರ ಬಳಿಯೂ ಮಾಡಿಸೋದು ಸರಿಯಲ್ಲ. ಕಾನೂನು ಪ್ರಕಾರವಾಗಿಯೇ ಶಾಸಕರು ನಡೆದುಕೊಳ್ಳಬೇಕು. ಲಾಕ್ಡೌನ್ ಉಲ್ಲಂಘಿಸಿ ಹೀಗೆ ಮಾಡಿದ್ದು ಸರಿಯಲ್ಲ ಎಂದು ಡಾ.ಅಶ್ವತ್ಥ ನಾರಾಯಣ ಹೇಳಿದರು.
ಓರ್ವ ಶಾಸಕ ಸ್ಥಾನದಲ್ಲಿದ್ದುಕೊಂಡು ಅಭಯ್ ಪಾಟೀಲ್ ಅವರು ಕಾನೂನು ಮೀರಿ ಹೀಗೆ ಮಾಡೋದು ಸರಿಯಲ್ಲ. ಲಾಕ್ ಡೌನ್ ಇದೆ, ನಾವೇ ಜನ ಹೊರಗೆ ಬರಬೇಡಿ ಅಂತ ಹೇಳಿದ್ದೇವೆ. ಹೀಗಿರುವಾಗ ಅವರು ಹೀಗೆ ಮಾಡೋದು ಒಳ್ಳೆಯ ಸಂದೇಶ ಕೊಡಲ್ಲ. ಕಾನೂನಿನ ಪ್ರಕಾರವಾಗಿಯೇ ಶಾಸಕರು ನಡೆದುಕೊಳ್ಳಬೇಕು. ಅವರು ಬೇಕಿದ್ರೆ ಮನೆಯಲ್ಲಿ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಎಲ್ಲರೂ ಮಾಡಿ ಅನ್ನೋದು ಸರಿಯಲ್ಲ ಎಂದು ಕೊವಿಡ್ ಟಾಸ್ಕ್ಫೋರ್ಸ್ನ ಅಧ್ಯಕ್ಷರೂ ಆಗಿರುವ ಡಾ. ಅಶ್ವತ್ಥ ನಾರಾಯಣ ಪ್ರತಿಕ್ರಿಯೆ ನೀಡಿದರು.
ಶಾಸಕ ಅಭಯ್ ಪಾಟೀಲ್ ಸಮರ್ಥನೆ
ವಾತಾವರಣ ಶುದ್ಧೀಕರಣಕ್ಕೆ ಹೋಮ ಮಾಡಿಸಿದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಅಭಯ್ ಪಾಟೀಲ್, ಮೌಢ್ಯ ಎಂದು ತಿಳಿದುಕೊಳ್ಳುವವರಿಗೆ ಹೋಮ ಹವನ ಮೌಢ್ಯವಾಗುತ್ತದೆ.ಈ ರೀತಿ ಮಾಡುವುದರಿಂದ ವಾತಾವರಣ ಶುದ್ಧವಾಗುತ್ತದೆ. ಪರಿಸರ ಇಲಾಖೆಯ ಕೆಲವರಿಗೂ ಇದರ ಬಗ್ಗೆ ಹೇಳಿದ್ದೇನೆ. ಹೋಮ ಹವನ ಮಾಡಲು ಜನರೇ ಮುಂದೆ ಬರ್ತಿದ್ದಾರೆ. ಕ್ಷೇತ್ರದಲ್ಲಿ ಹೋಮ ಹವನ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದರು.
ಜನರಿಗೆ ಉಪಯೋಗ ಆಗಲಿ ಅಂತಾ ಹೋಮ ಹವನ ಮಾಡುತ್ತಿದ್ದೇವೆ. ಮನೆಯಲ್ಲಿ ರೋಗಿಗಳಿದ್ದರೆ ಪರಿಣಾಮ ಏನಾಗುತ್ತದೆ ಅಂತ ಅವಲೋಕನ ಮಾಡಿ ಹೋಮ ಮಾಡಿದ್ದೇವೆ. ಕೊರೊನಾ ಸಂದರ್ಭದಲ್ಲಿ ವಾತಾವರಣ ಕಲುಷಿತ ಆಗಿದೆ ಅನ್ನುವ ಕಾರಣಕ್ಕೆ ವಾತಾವರಣ ತಿಳಿ ಆಗಲಿ ಅಂತ ಹೋಮ ಹವನ ಮಾಡಿದ್ದೇವೆ. ಹೋಮ ಹವನ ಕಾರ್ಯಕ್ರಮ ಮಾಡಲು ಜನರೇ ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Black Fungus ಕೊವಿಡ್ ರೋಗ ಇಲ್ಲದವರಿಗೂ ಬ್ಲಾಕ್ ಫಂಗಸ್ ರೋಗ ಬರುತ್ತದೆಯೇ; ತಜ್ಞರು ಏನಂತಾರೆ?
ಆನಂದಯ್ಯರ ಔಷಧವನ್ನು ಕೊವಿಡ್ ಔಷಧಿ ಎಂದು ಹೇಳಲಾಗದು: ಆಂಧ್ರಪ್ರದೇಶ ಆಯುಷ್ ಇಲಾಖೆ
(MLA Abhay Patil can make homa havan in his home only not in public says DCM Dr Ashwath Narayan )