ಆನಂದಯ್ಯರ ಔಷಧವನ್ನು ಕೊವಿಡ್ ಔಷಧಿ ಎಂದು ಹೇಳಲಾಗದು: ಆಂಧ್ರಪ್ರದೇಶ ಆಯುಷ್ ಇಲಾಖೆ

Anandayya Medicine: ಆನಂದಯ್ಯ ಅವರ ಔಷಧಿ ಮೇಲೆ ರಾಜ್ಯ ಮಟ್ಟದ ಆಯುಷ್ಯ ಪರಿಶೀಲನೆ ಪೂರ್ಣಗೊಂಡಿದೆ. ಔಷಧ ಬಳಸಿದ ವ್ಯಕ್ತಿಗಳನ್ನು ಭೇಟಿಯಾಗಿ ಸಹ ಪರಿಶೀಲನೆ ಮಾಡಿದ್ದೇವೆ. ನಮ್ಮ ಪರಿಶೀಲನೆಯ ವರದಿಯನ್ನು ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರಿಗೆ ಸಲ್ಲಿಸಲಾಗಿದೆ

ಆನಂದಯ್ಯರ ಔಷಧವನ್ನು ಕೊವಿಡ್ ಔಷಧಿ ಎಂದು ಹೇಳಲಾಗದು: ಆಂಧ್ರಪ್ರದೇಶ ಆಯುಷ್ ಇಲಾಖೆ
ಸಾಂಕೇತಿಕ ಚಿತ್ರ
Follow us
guruganesh bhat
|

Updated on:May 24, 2021 | 8:21 PM

ಹೈದರಾಬಾದ್: ಏಕಾಏಕಿ ಪ್ರಚಾರಕ್ಕೆ ಬಂದಿರುವ ಆಂಧ್ರಪ್ರದೇಶದ ಆನಂದಯ್ಯ ಅವರ ಔಷಧಿಯಲ್ಲಿ 18 ಮೂಲಿಕೆಗಳನ್ನು ಬಳಸಲಾಗಿದ್ದು, ಅವುಗಳಲ್ಲಿ ಆರೋಗ್ಯಕ್ಕೆ ಹಾನಿಕರವಾಗುವಂತೆ ಯಾವುದೇ ಅಂಶಗಳು ಪತ್ತೆಯಾಗಿಲ್ಲ. ಇನ್ನೂ 3ನೇ ವರದಿ ಬರಬೇಕಿದ್ದು, ಅದು ಬಂದ ನಂತರ ಔಷಧದ ಕುರಿತು ಅಂತಿಮ ನಿರ್ಣಯಕ್ಕೆ ಬರಲಾಗುವುದು. ಆನಂದಯ್ಯ ಅವರ ಕಣ್ಣಿಗೆ ಹಾಕುವ ಔಷಧಿ ಬಗ್ಗೆ ಸ್ವಲ್ಪ ಅನುಮಾನಗಳಿವೆ. ಎಲ್ಲ ಅನುಮಾನಗಳು ಸಂಪೂರ್ಣ ಪರಿಹಾರಗೊಂಡ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಆಂಧ್ರಪ್ರದೇಶದ ಆಯುಷ್ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ. 

ಆನಂದಯ್ಯರ ಔಷಧಿ ಮೇಲೆ ರಾಜ್ಯ ಮಟ್ಟದ ಆಯುಷ್ಯ ಪರಿಶೀಲನೆ ಪೂರ್ಣಗೊಂಡಿದೆ. ಔಷಧ ಬಳಸಿದ ವ್ಯಕ್ತಿಗಳನ್ನು ಭೇಟಿಯಾಗಿ ಸಹ ಪರಿಶೀಲನೆ ಮಾಡಿದ್ದೇವೆ. ನಮ್ಮ ಪರಿಶೀಲನೆಯ ವರದಿಯನ್ನು ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರಿಗೆ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.

ಆನಂದಯ್ಯ ಅವರ ಕಣ್ಣಿಗೆ ಹಾಕುವ ಔಷಧಿಯಲ್ಲಿ 3 ಪದಾರ್ಥಗಳನ್ನು ಹಾಕಲಾಗುತ್ತಿದೆ. ಆ 3 ಪದಾರ್ಥಗಳಿಂದ ಯಾವುದೇ ನಷ್ಟವಿಲ್ಲ ಎಂದು ಆಯುರ್ವೇದದಲ್ಲಿದೆ. ಜತೆಗೆ ಕೃಷ್ಣಪಟ್ನಂ ಭಾಗದಲ್ಲಿ ವಿಚಾರಿಸಲಾಗಿ ಆ ಭಾಗದಲ್ಲಿ ಕೊರೊನಾ ಸೋಂಕಿತರ ಬಹಳ ಕಡಿಮೆ ಇವೆ ಎಂಬ ಅಂಶ ತಿಳಿದುಬಂದಿದೆ.

ಆಯುರ್ವೇದ ಔಷಧಿ ಎನ್ನಲು ಕ್ಲೀನಿಕಲ್ ಟ್ರಯಲ್ಸ್ ಆಗಬೇಕಿದೆ. ನಾಟಿ ಔಷಧ ಅಂತ ಸಹ ಅನುಮಾನಿಸಬೇಕಿಲ್ಲ. ಆದರೆ,ಈ ಔಷಧಿ ಪರಿಣಾಮಕಾರಿಯಾಗಿದೆ. ಇದರಲ್ಲಿ ಬಳಸಲಾದ ಪದಾರ್ಥಗಳು ಆಯುರ್ವೇದದಲ್ಲಿ ಇರುವಂತಹವೇ ಆಗಿದೆ. ಆದರೆ, ಈ ಔಷಧಿಗೆ ಕೊವಿಡ್ ಔಷಧಿ ಎನ್ನಲು ಸಾಧ್ಯವಿಲ್ಲ, ಅದು ತಪ್ಪಾಗುತ್ತದೆ. ಈ ಎಲ್ಲ ವಿಷಯವನ್ನು ಸಿಎಂ ಜಗನ್ಮೋಹನ್ ರೆಡ್ಡಿಯವರ ಗಮನಕ್ಕೆ ತರಲಾಗಿದೆ. ಇನ್ನಷ್ಟು ಮಾಹಿತಿಯ ನಂತರ 4ರಿಂದ5 ದಿನಗಳಲ್ಲಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ಆಂಧ್ರಪ್ರದೇಶದ ಆಯುಷ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.

ಆನಂದಯ್ಯ ಅವರ ಔಷಧಿ ದೇಶದಾದ್ಯಂತ ಪ್ರಚಾರ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಆನಂದಯ್ಯರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಓರ್ವ ಎಸ್​ಐ, 4 ಕಾನ್​ಸ್ಟೇಬಲ್​ಗಳನ್ನು ಭದ್ರತೆಗೆ ನೀಡಲಾಗಿದೆ. ಅಲ್ಲದೇ ಭದ್ರತೆಯ ಕಾರಣದಿಂದ ಆನಂದಯ್ಯ ಅವರು ರಹಸ್ಯ ಸ್ಥಳದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಏನಿದು ಆನಂದಯ್ಯರ ಔಷಧ? ಆನಂದಯ್ಯ ಎಂಬ ಆಯುರ್ವೇದ ವೈದ್ಯರೊಬ್ಬರು ಕೊರೊನಾ ಸೋಂಕಿತರಿಗೆ ಔಷಧಿ, ಚಿಕಿತ್ಸೆ ನೀಡುತ್ತಿದ್ದರು. ಕಳೆದ‌ ನಾಲ್ಕೈದು‌ ದಿನಗಳಿಂದ‌ ಜನರ ಬೇಡಿಕೆಯಂತೆ‌ ಚಿಕಿತ್ಸೆ ನೀಡುತ್ತಿದ್ದರು. 2-3ದಿನಗಳಲ್ಲಿ‌‌ ಕೊರೊನಾ ಪಾಸಿಟಿವ್​ನಿಂದ‌ ಕೊರೊನಾ‌ ನೆಗೆಟಿವ್​ಗೆ ವರದಿ ಬದಲಾಗಿತ್ತು. ತೀವ್ರ ಸ್ಥಾಯಿಯಲ್ಲಿರುವ ರೋಗಿಗಳು, ಉಸಿರಾಟದ ಸಮಸ್ಯೆ‌ ಅನುಭವಿಸುತ್ತಿದ್ದವರೆಲ್ಲ 2ದಿನಗಳಲ್ಲಿ ಸಮಸ್ಯೆಯ ತೀವ್ರತೆಯಿಂದ ಪಾರಾಗಿದ್ದರು. ಹೀಗಾಗಿ ಬಹಳಷ್ಟು ಜನ ಸ್ಥಳದಲ್ಲಿ ಜಮಾಯಿಸಿದ್ದಾರೆ.

ಆಕ್ಸಿಜನ್‌ ನೀಡದೇ ಹೋದರೆ ಸಾಯುತ್ತಾನೆಂದು‌ ಹೇಳಲಾದ ಓರ್ವ ಸೋಂಕಿತ ಆನಂದಯ್ಯರ ಆಯುರ್ವೇದ ಔಷಧಿಯಿಂದಾಗಿ, ಉಸಿರಾಟದ ತೊಂದರೆ, ಕೊರೊನಾದಿಂದ ಪಾರಾಗಿದ್ದರು. ಈ‌ ಬಗ್ಗೆ‌ ಕೊರೊನಾ‌ ಸೋಂಕಿತ ಸ್ವಯಂ‌ ಹೇಳಿಕೆ‌ ನೀಡಿದ್ದಾರೆ.

ಇದನ್ನೂ ಓದಿ:  ಕೊವಿಡ್ ವಾರ್​ರೂಂನಲ್ಲಿ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಗೆ ಸ್ವತಃ ಬೆಡ್ ವ್ಯವಸ್ಥೆ ಮಾಡಿದ ಸಿಎಂ ಯಡಿಯೂರಪ್ಪ

ಕೊವಿಡ್​ನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ಪರಿಹಾರ ಕೊಡುವ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿದ ಸುಪ್ರೀಂಕೋರ್ಟ್ (Anandyas medicine cannot be called Covid Drug says Andhra Pradesh Ayush Department)

Published On - 8:13 pm, Mon, 24 May 21

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು