ವಿಧಾನಸೌಧದಲ್ಲಿ ನಿಲ್ಲದ ‘ಬ್ಲೂ ಬಾಯ್ಸ್’ ಕ್ವಾಟ್ಲೆ: ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್​ ಸದಸ್ಯನಿಂದ ನೀಲಿ ಚಿತ್ರ ವೀಕ್ಷಣೆ

| Updated By: ಸಾಧು ಶ್ರೀನಾಥ್​

Updated on: Jan 29, 2021 | 5:09 PM

ಕಳೆದ ಕೆಲವು ವರ್ಷಗಳ ಹಿಂದೆ ಸದನದಲ್ಲಿ ಕೆಲ ಶಾಸಕರು ನೀಲಿ ಚಿತ್ರ ವೀಕ್ಷಿಸಿದ್ದ ಪ್ರಸಂಗ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ, ಅಂಥದ್ದೇ ಮತ್ತೊಂದು ಪ್ರಸಂಗ ಇಂದು ಬೆಳಕಿಗೆ ಬಂದಿದೆ.

ವಿಧಾನಸೌಧದಲ್ಲಿ ನಿಲ್ಲದ ‘ಬ್ಲೂ ಬಾಯ್ಸ್’ ಕ್ವಾಟ್ಲೆ: ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್​ ಸದಸ್ಯನಿಂದ ನೀಲಿ ಚಿತ್ರ ವೀಕ್ಷಣೆ
Follow us on

ಬೆಂಗಳೂರು: ಕೆಲವು ವರ್ಷಗಳ ಹಿಂದೆ ಸದನದಲ್ಲಿ ಕೆಲ ಶಾಸಕರು ನೀಲಿ ಚಿತ್ರ ವೀಕ್ಷಿಸಿದ್ದ ಪ್ರಸಂಗ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ, ಅಂಥದ್ದೇ ಮತ್ತೊಂದು ಪ್ರಸಂಗ ಇಂದು ಬೆಳಕಿಗೆ ಬಂದಿದೆ.

ಹೌದು, ಈ ಬಾರಿ ವಿಧಾನಪರಿಷತ್​ನಲ್ಲಿ ಕಲಾಪದ ವೇಳೆ ಕಾಂಗ್ರೆಸ್ ಪಕ್ಷದ MLC ಪ್ರಕಾಶ್​ ರಾಥೋಡ್​ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದನದ ಕಾರ್ಯಕಲಾಪದ ವೇಳೆ, ವಿಧಾನಪರಿಷತ್ ಸದಸ್ಯ ಪ್ರಕಾಶ್​ ರಾಥೋಡ್​ ತಮ್ಮ ಮೊಬೈಲ್​ನ ಗ್ಯಾಲರಿಯಲ್ಲಿದ್ದ ಕೆಲ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದರು ಎಂದು ಹೇಳಲಾಗಿದೆ.

ತಮ್ಮ ಗ್ಯಾಲರಿಯಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡ್ತಿದ್ದ ವೇಳೆ ಪ್ರಕಾಶ್ ರಾಥೋಡ್​ ಈ ಚಿತ್ರಗಳನ್ನು ವೀಕ್ಷಿಸಿದರು ಎಂದು ತಿಳಿದುಬಂದಿದೆ. ಇದೀಗ, ವಿಧಾನಪರಿಷತ್ ಸದಸ್ಯರ ನಡೆಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಮೊಬೈಲ್​ನಲ್ಲಿ ಫೋಟೋ ಡಿಲೀಟ್ ಮಾಡ್ತಿದ್ದೆ ಅಷ್ಟೇ.. ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ: MLC ಪ್ರಕಾಶ್​​ ರಾಥೋಡ್

Published On - 5:09 pm, Fri, 29 January 21