Molakalmuru Assembly Election 2023 Winner, ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ (Karnataka Assembly Election Results 2023) ಬಹಿರಂಗಗೊಂಡಿದ್ದು, ಮೊಳಕಾಲ್ಮೂರು (Molakalmuru) ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ನ ಎನ್ವೈ ಗೋಪಾಲಕೃಷ್ಣ (NY Gopalakrishna) ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಎಸ್ ತಿಪ್ಪೇಸ್ವಾಮಿ (S Thippeswamy) ವಿರುರುದ್ಧ ಕಾಂಗ್ರೆಸ್ನ ಅಭ್ಯರ್ಥಿ ಗೋಪಾಲಕೃಷ್ಣ ಅವರು 22,149 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಇದೇ ಕ್ಷೇತ್ರದಿಂದ 2018ರಲ್ಲಿ ಬಿಜೆಪಿಯ ಶ್ರೀರಾಮುಲು ಅವರು 42,866 ಮತಗಳ ಅಂತದಿಂದ ಗೆಲುವು ಸಾಧಿಸಿದ್ದರು. ಸದ್ಯ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ನಾಯಕ, ದಲಿತ ಮತ್ತು ಗೊಲ್ಲ ಸಮುದಾಯದ ಮತಗಳು ನಿರ್ಣಾಯಕವಾಗಿರುವ ಈ ಕ್ಷೇತ್ರದಲ್ಲಿ 2013ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ತಿಪ್ಪೇಸ್ವಾಮಿ ಅವರು ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. ಆ ಚುನಾವಣೆಯಲ್ಲಿ ತಿಪ್ಪೇಸ್ವಾಮಿ ಅವರು ಬಿಎಸ್ಆರ್ ಪಕ್ಷದಿಂದ ಸ್ಪರ್ಧಿಸಿದ್ದರು.
ಪ್ರಸಕ್ತ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತದಾನದ ಪೈಕಿ ಶೇ 53.8 ರಷ್ಟು ಮತಗಳು ಗೋಪಾಲಕೃಷ್ಣ ಅವರ ಪಾಲಾದರೆ, ತಿಪ್ಪೇಸ್ವಾಮಿ ಅವರಿಗೆ ಶೇ 42.9 ರಷ್ಟು ಮತ ಸಿಕ್ಕಿವೆ. ಜೆಡಿಎಸ್ ಅಭ್ಯರ್ಥಿಗೆ ಶೇ. 0.8ರಷ್ಟು ವೋಟ್ ಸಿಕ್ಕಿದೆ.
ಶ್ರೀರಾಮುಲು ನೇತೃತ್ವದ ಬಿಎಸ್ ಆರ್ ಪಕ್ಷದಿಂದ 2013ರಲ್ಲಿ ಗೆಲುವು ಸಾದಿಸಿದ್ದ ಎಸ್.ತಿಪ್ಪೇಸ್ವಾಮಿ ಬಳಿಕ ಶ್ರೀರಾಮುಲು ಹಿಂಬಾಲಿಸಿ ಬಿಜೆಪಿ ಸೇರಿದ್ದರು. ಆದರೆ, 2018ರಲ್ಲಿ ಹಾಲಿ ಶಾಸಕನಿಗೆ ಟಿಕೆಟ್ ತಪ್ಪಿಸಿ ತಾನೇ ಸ್ಪರ್ಧೆಗೆ ಬಂದಿದ್ದು ತಿಪ್ಪೇಸ್ವಾಮಿ ಅವರಿಗೆ ಕೆರಳಿಸಿತ್ತು. ಅದರಂತೆ ಶ್ರೀರಾಮುಲು ವಿರುದ್ಧ ಸಮರ ಸಾರಿದ್ದರು. ಪಕ್ಷೇತರ ಅಬ್ಯರ್ಥಿಯಾಗಿ ತೊಡೆತಟ್ಟಿದ್ದರೂ ಕೊನೆಗೆ ಶ್ರೀರಾಮುಲು ಗೆಲುವು ಸಾಧಿಸಿದ್ದರು.
ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ತಿಪ್ಪೇಸ್ವಾಮಿ ಕಳೆದ ಐದು ವರ್ಷದ ಉದ್ದಕ್ಕೂ ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ನಿರಂತರ ಸಮರ ಸಾರಿದ್ದರು. 2023ರಲ್ಲಿ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶ್ರೀರಾಮುಲು ಮಣಿಸುವ ಮಾತುಗಳನ್ನಾಡಿದ್ದರು. ಆದರೆ, ಕ್ಷಿಪ್ರ ಬೆಳವಣಿಗೆಯಲ್ಲಿ ತಿಪ್ಪೇಸ್ವಾಮಿ ಮರಳಿ ಬಿಜೆಪಿ ಸೇರಿದ್ದರು. ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ತಿಪ್ಪೇಸ್ವಾಮಿ ಅವರನ್ನು ಬಿಜೆಪಿಗೆ ಕರೆ ತರುವಲ್ಲಿ ಯಶಸ್ವಿ ಆಗಿದ್ದರು. ಖುದ್ದು ಶ್ರೀರಾಮುಲು ಮತ್ತು ತಿಪ್ಪಾರೆಡ್ಡಿ ಅವರು ತಿಪ್ಪೇಸ್ವಾಮಿ ಅವರನ್ನು ಬಿಜೆಪಿಗೆ ಬರಮಾಡಿಕೊಂಡಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Sat, 13 May 23