ಚಿಕ್ಕಮಗಳೂರು, (ಡಿಸೆಂಬರ್ 19): ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ನೆಮ್ಮಾರು ಸಮೀಪ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ವೇಳೆ ಮಣ್ಣು ಕುಸಿದಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಮಣ್ಣಿನಡಿ ಸಿಲುಕಿ ಅಸ್ಸಾಂ ಮೂಲದ ಮಜಿಬುರ್(30) ಎನ್ನುವಾತ ಮೃತಪಟ್ಟಿದ್ದಾನೆ. ನೆಮ್ಮಾರು ಸಮೀಪದ ತನಿಕೋಡು ಚೆಕ್ ಪೋಸ್ಟ್ ಬಳಿ ರಸ್ತೆ ಅಗಲೀಕರಣ ವೇಳೆ ಜಿಸಿಬಿಯಿಂದ ಮಣ್ಣು ತೆಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮಣ್ಣಿನಲ್ಲಿ ಒಟ್ಟು ಮೂವರು ಕಾರ್ಮಿಕರು ಸಿಲುಕಿಕೊಂಡಿದ್ದು, ಈ ಪೈಕಿ ಓರ್ವ ಕಾರ್ಮಿಕ ಮೃತಪಟ್ಟರೆ ಇನ್ನುಳಿದ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.