ಸ್ಥಳೀಯರು, ರೈತರಿಗೆ ಮಾತ್ರ ಮರಳು ಸಾಗಾಟಕ್ಕೆ ಅವಕಾಶ, ಮರಳು ಮಾಫಿಯಾ ತಡೆಯಲು ಶೀಘ್ರದಲ್ಲಿಯೇ ಕ್ರಮ; ಸಚಿವ ಮುರುಗೇಶ್ ನಿರಾಣಿ

|

Updated on: May 23, 2021 | 2:05 PM

ಕೊರೊನಾ ಸೋಂಕಿನ ಬಗ್ಗೆ ಮಾತನಾಡಿದ ಸಚಿವರು, ಕೊವಿಡ್ಗಾಗಿ ಶೇ.30ರಷ್ಟು ಅನುದಾನ ಬಳಸಿಕೊಳ್ಳಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. 2017 ರಿಂದ 2021ರ ಅವಧಿಯಲ್ಲಿ ಇಲಾಖೆ 35 ಸಾವಿರ ಕೋಟಿ ರೂ. ಆದಾಯ ಗಳಿಸಿದೆ.

ಸ್ಥಳೀಯರು, ರೈತರಿಗೆ ಮಾತ್ರ ಮರಳು ಸಾಗಾಟಕ್ಕೆ ಅವಕಾಶ, ಮರಳು ಮಾಫಿಯಾ ತಡೆಯಲು ಶೀಘ್ರದಲ್ಲಿಯೇ ಕ್ರಮ; ಸಚಿವ ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ
Follow us on

ಮೈಸೂರು: ರಾಜ್ಯದಲ್ಲಿ ಮರಳು ಮಾಫಿಯಾ ಜೋರಾಗಿ ನಡೆಯುತ್ತಿದೆ. ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಬೇಕಿದೆ. ಲೋಡ್ಗಟ್ಟಲೇ ಮರಳನ್ನು ಸಾಗಿಸಿ ಹಣ ಸಂಪಾದಿಸುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಮರಳು ಸಿಗುತ್ತಿಲ್ಲ. ಹೀಗಾಗಿ ಕಠಿಣ ಕ್ರಮಗಳು ಜಾರಿಯಾಗಬೇಕಿದೆ. ಇನ್ನು ಈ ಬಗ್ಗೆ ಗಣಿ ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯಿಸಿ, ಬೈಕ್, ಎತ್ತಿನ ಗಾಡಿಯಲ್ಲಿ ಮರಳು ಸಾಗಿಸಿಕೊಳ್ಳಬಹುದು. ಸ್ಥಳೀಯರು, ರೈತರಿಗೆ ಮಾತ್ರ ಮರಳು ಸಾಗಾಟಕ್ಕೆ ಅವಕಾಶವಿದೆ. ತಮ್ಮ ಅಗತ್ಯಕ್ಕೆ ಮರಳು ಸಾಗಿಸಿಕೊಂಡರೆ ಕೇಸ್ ಹಾಕಲ್ಲ. ಮರಳು ಮಾಫಿಯ ತಡೆಯಲು ಶೀಘ್ರದಲ್ಲೇ ಕಠಿಣವಾದ ಮರಳು ನೀತಿ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕೊರೊನಾ ಸೋಂಕಿನ ಬಗ್ಗೆ ಮಾತನಾಡಿದ ಸಚಿವರು, ಕೊವಿಡ್ಗಾಗಿ ಶೇ.30ರಷ್ಟು ಅನುದಾನ ಬಳಸಿಕೊಳ್ಳಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. 2017 ರಿಂದ 2021ರ ಅವಧಿಯಲ್ಲಿ ಇಲಾಖೆ 35 ಸಾವಿರ ಕೋಟಿ ರೂ. ಆದಾಯ ಗಳಿಸಿದೆ. ಈ ಪೈಕಿ 16,000 ಕೋಟಿ ರೂ. ಈಗ ಉಳಿತಾಯವಾಗಿದೆ. ಇದರಲ್ಲಿ ಶೇಕಡಾ 30ರಷ್ಟು ಹಣ ಕೊವಿಡ್ ಕೆಲಸಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ
ಎಂದು ತಿಳಿಸಿದರು.

ಶೇಕಡಾ 30ರಷ್ಟು ಹಣ ಕೊವಿಡ್ ಕೆಲಸಕ್ಕೆ ಬಳಸಿಕೊಳ್ಳಲು ಇಲಾಖೆ ಅಧಿಕಾರಿಗಳಿಗೂ ಸೂಚನೆ ನೀಡಿದ್ದೇನೆ. ಶೇ.30ರಷ್ಟು ಹಣ ಬಳಸಿಕೊಳ್ಳಲು ಇಲಾಖೆಯ ಕಾಯ್ದೆಗಳಲ್ಲಿ ಅವಕಾಶ ಇದೆ. ಅದಕ್ಕಿಂತಲೂ ಹೆಚ್ಚಿನ ಹಣ ಅಗತ್ಯವಿದ್ದರೆ ಮುಖ್ಯಮಂತ್ರಿ ಗಮನಕ್ಕೆ ತಂದು ಅನುಮತಿ ಪಡೆದುಕೊಳ್ಳುತ್ತೇವೆ. ಅನುಮತಿ ಪಡೆದು ಹಣ ನೀಡುವುದಕ್ಕೆ ನಿರ್ಧಾರ ಮಾಡುತ್ತೇವೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಇದನ್ನೂ ಓದಿ

ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ; 24 ಕುಟುಂಬಗಳಿಗೆ ಪರಿಹಾರ, ರಾಜ್ಯ ಸರ್ಕಾರದ ಈ ಕ್ರಮ ಸರಿಯಲ್ಲ ಎಂದು ಆರ್.ಧ್ರುವನಾರಾಯಣ

40 ಮೃತ ಸೋಂಕಿತರ ಅಂತ್ಯಸಂಸ್ಕಾರ ಮಾಡಿದ ಬಾಗಲಕೋಟೆ ಪಿಎಫ್​ಐ ತಂಡ; ಸಮಾಜಮುಖಿ ಕಾರ್ಯಕ್ಕೆ ಜನರಿಂದ ಮೆಚ್ಚುಗೆ

(Murugesh Nirani says We will soon implement a sand policy to prevent the sand mafia)