ಧಾರವಾಡ ಸಿದ್ದೇಶ್ವರ ಬಡಾವಣೆಯ 62 ಜನರಿಗೆ ಕೊರೊನಾ; ಕೊವಿಡ್ ಕೇರ್ ಸೆಂಟರ್ಗೆ ಹೋಗಲು ಸೋಂಕಿತರ ಹಿಂದೇಟು
ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ 15 ದಿನದಲ್ಲಿ 60 ಜನ ಸಾವನ್ನಪ್ಪಿದ್ದಾರೆ. ಕೊವಿಡ್ ಸೋಂಕಿನಿಂದ 6 ಜನರು ಮೃತಪಟ್ಟಿದ್ದಾರೆ. ಉಳಿದವರು ಮನೆಯಲ್ಲೇ ಮೃತಪಟ್ಟಿದ್ದರಿಂದ ಆತಂಕ ಎದುರಾಗಿದೆ. ಗ್ರಾಮದಲ್ಲಿ ಪ್ರತಿದಿನ 2ರಿಂದ 4 ಜನ ಸಾಯುತ್ತಿದ್ದಾರೆ.
ಧಾರವಾಡ: ಸಿದ್ದೇಶ್ವರ ಬಡಾವಣೆಯ 62 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. 62 ಸೋಂಕಿತರ ಪೈಕಿ 20 ಸೋಂಕಿತರು ಕೊವಿಡ್ ಕೇರ್ ಸೆಂಟರ್ಗೆ ದಾಖಲಾಗಿದ್ದಾರೆ. ಆದರೆ ಉಳಿದ 42 ಸೋಂಕಿತರು ಕೊವಿಡ್ ಕೇರ್ ಸೆಂಟರ್ಗೆ ಹೋಗಲು ಹಿಂದೇಟು ಹಾಕಿದ್ದಾರೆ. ಅಲ್ಲದೇ ಸಿದ್ದೇಶ್ವರ ಬಡಾವಣೆಯಲ್ಲಿ ಮಾಸ್ಕ್ ಧರಿಸದೆ ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಿದ್ದೇಶ್ವರ ಬಡಾವಣೆ ಕೊರೊನಾ ಹಾಟ್ ಸ್ಪಾಟ್ ಆಗಿದ್ದರೂ ಸ್ಥಳೀಯರು ಮಾತ್ರ ಎಚ್ಚೆತ್ತುಕೊಂಡಿಲ್ಲ.
15 ದಿನದಲ್ಲಿ 60 ಜನರ ಸಾವು ಬೆಳಗಾವಿ: ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ 15 ದಿನದಲ್ಲಿ 60 ಜನ ಸಾವನ್ನಪ್ಪಿದ್ದಾರೆ. ಕೊವಿಡ್ ಸೋಂಕಿನಿಂದ 6 ಜನರು ಮೃತಪಟ್ಟಿದ್ದಾರೆ. ಉಳಿದವರು ಮನೆಯಲ್ಲೇ ಮೃತಪಟ್ಟಿದ್ದರಿಂದ ಆತಂಕ ಎದುರಾಗಿದೆ. ಗ್ರಾಮದಲ್ಲಿ ಪ್ರತಿದಿನ 2ರಿಂದ 4 ಜನ ಸಾಯುತ್ತಿದ್ದಾರೆ. ತುಕ್ಕಾನಟ್ಟಿ ಗ್ರಾಮದ ಬಹುತೇಕರಿಗೆ ಜ್ವರ, ನೆಗಡಿ, ಕೆಮ್ಮಿದೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ ವೈದ್ಯರಿಲ್ಲ. ನಮ್ಮ ಪಾಲಿಗೆ ಸರ್ಕಾರ ಸತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು ಆರೋಗ್ಯ ಇಲಾಖೆ, ಜಿಲ್ಲಾಡಳಿತದ ವಿರುದ್ಧವೂ ಕಿಡಿ ಕಾರಿದ್ದಾರೆ.
ಗ್ರಾಮದಲ್ಲಿ ಜನ ಸಾಯುತ್ತಿದ್ದರು ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿಲ್ಲ. ಕೇವಲ ಸಭೆ ಮಾಡಿದ್ದಾರೆ ಹೊರತು ಅಧಿಕಾರಿಗಳು ಕೊರೊನಾ ತಡೆಗೆ ಯಾವುದೇ ಪ್ಲ್ಯಾನ್ ಮಾಡಿಲ್ಲ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಆದರೆ ವೈದ್ಯರಿಲ್ಲ. ಗ್ರಾಮದಲ್ಲಿ ಜನ ಸಾಯುತ್ತಿದ್ದರು ಯಾರು ಕೂಡ ಬಂದು ನಮ್ಮ ಗೋಳು ಕೇಳುತ್ತಿಲ್ಲ. ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮದ ಮುಖಂಡರು ಮಾತ್ರ ಗ್ರಾಮದಲ್ಲಿ ಜಾಗೃತಿ ಮಾಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ
40 ಮೃತ ಸೋಂಕಿತರ ಅಂತ್ಯಸಂಸ್ಕಾರ ಮಾಡಿದ ಬಾಗಲಕೋಟೆ ಪಿಎಫ್ಐ ತಂಡ; ಸಮಾಜಮುಖಿ ಕಾರ್ಯಕ್ಕೆ ಜನರಿಂದ ಮೆಚ್ಚುಗೆ
(Coronavirus infection is confirmed in 62 people in Siddheshwar at Dharwad)