Mysore News: ಹೊಟ್ಟೆನೋವು ತಾಳಲಾರದೆ ಕೆರೆಗೆ ಹಾರಿ ಬಾಲಕಿ ಆತ್ಮಹತ್ಯೆ

|

Updated on: Jun 13, 2023 | 9:26 AM

ನಂಜನಗೂಡು ತಾಲೂಕಿನ ಹುರ ಗ್ರಾಮದಲ್ಲಿ ಹೊಟ್ಟೆನೋವು ತಾಳಲಾರದೆ ಕೆರೆಗೆ ಹಾರಿ ಬಾಲಕಿ ಗೀತಾ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಹುಲ್ಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Mysore News: ಹೊಟ್ಟೆನೋವು ತಾಳಲಾರದೆ ಕೆರೆಗೆ ಹಾರಿ ಬಾಲಕಿ ಆತ್ಮಹತ್ಯೆ
ಹೊಟ್ಟೆನೋವು ತಾಳಲಾರದೇ ಬಾಲಕಿ ಆತ್ಮಹತ್ಯೆ
Follow us on

ಮೈಸೂರು: ನಂಜನಗೂಡು(Nanjangud) ತಾಲೂಕಿನ ಹುರ ಗ್ರಾಮದಲ್ಲಿ ಹೊಟ್ಟೆನೋವು (Stomach ache)
ತಾಳಲಾರದೆ ಕೆರೆಗೆ ಹಾರಿ ಬಾಲಕಿ ಗೀತಾ ಎಂಬುವವರು ಆತ್ಮಹತ್ಯೆ(suicide)ಮಾಡಿಕೊಂಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ವಣಕನಪುರ ಗ್ರಾಮದವರಾದ ಬಾಲಕಿ ಗೀತಾ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು, ತೀವ್ರ ನೋವು ತಾಳಲಾರದೇ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳಕ್ಕೆ ಹುಲ್ಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನ ನದಿಯಲ್ಲಿ ಅಪರಿಚಿತ ಶವ ಪತ್ತೆ

ಮೈಸೂರು: ಹುಣಸೂರು ತಾಲ್ಲೂಕಿನ ಕರಿ ಮಾರಮ್ಮ ದೇವಾಲಯದ ಬಳಿಯ ಲಕ್ಷ್ಮಣತೀರ್ಥ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಶವದ ಎಡಗೈಯಲ್ಲಿ ಸಾಯಿಕುಮಾರ್ ಹಾಗೂ ಬಲಗೈಯಲ್ಲಿ ಎಸ್​ಜಿ ಗೀತಾ ಎಂದು ಹಚ್ಚೆ ಗುರುತು ಇದೆ. ನೀಲಿ ಬಣ್ಣದ ಪ್ಯಾಂಟ್ ಹಾಗೂ ಕಪ್ಪು ಬಣ್ಣದ ಬಿಳಿಗೆರೆಯುಳ್ಳ ಶರ್ಟ್ ಧರಿಸಿರುವ ವ್ಯಕ್ತಿಯ ಮೃತ ದೇಹದ ಗುರುತು ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹೆಂಡತಿಯನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾದ ಗಂಡ, ಇತ್ತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಮಗ ಅನಾಥನಾದ! ನಡೆದಿದ್ದೇನು?

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಎಮ್ಮೆ ಸಾವು

ಗದಗ‌: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಾಸರವಾಡ‌ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಎಮ್ಮೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಲ್ಲಯ್ಯ ಶಂಕ್ರಯ್ಯ ಮುದಗಲ್ಲಮಠ ಅನ್ನೋ ರೈತರಿಗೆ ಸೇರಿದ್ದ ಎಮ್ಮೆ ಇದಾಗಿದ್ದು,
ಸಾಸರವಾಡ ಗ್ರಾಮದ‌ ನದಿದಡದಲ್ಲಿ ಮೇಯಿಸಲು ಹೋದಾಗ ಈ ರ್ದುಘಟನೆ ನಡೆದಿದ್ದು, 50 ರಿಂದ 60 ಸಾವಿರ ರೂಪಾಯಿ ನಷ್ಟವನ್ನ ರೈತ ಅನುಭವಿಸಿದ್ದಾನೆ. ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:25 am, Tue, 13 June 23