AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾದ ಗಂಡ, ಇತ್ತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಮಗ ಅನಾಥನಾದ! ನಡೆದಿದ್ದೇನು?

ಯೌವನಕ್ಕೆ ಬಂದ ಮಗನಿಗೆ ಮದುವೆ ಮಾಡಬೇಕೆಂಬ ಆಶಯ ಇಟ್ಟುಕೊಂಡಿದ್ದ ತಾಯಿ. ಸ್ವ ಸಹಾಯ ಸಂಘ ಹಾಗೂ ತನ್ನ ತಮ್ಮ ಮತ್ತು ಮಗನ ಕಡೆಯಿಂದ ಹಣ ಪಡೆದು ಒಳ್ಳೆಯ ಮನೆಯನ್ನು ಸಂಗಣುರಿನಲ್ಲಿ ಕಟ್ಟಿಸುತ್ತಿದ್ದಳು.

ಹೆಂಡತಿಯನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾದ ಗಂಡ, ಇತ್ತ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ ಮಗ ಅನಾಥನಾದ! ನಡೆದಿದ್ದೇನು?
ಹೆಂಡತಿಯನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾದ ಗಂಡ
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on: Jun 11, 2023 | 1:43 PM

Share

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅಂತ ಗಾದೆ ಮಾತಿದೆ. ಆದರೆ ಇಲ್ಲಿ ಆದದ್ದು ಪೂರ್ತಿ ಉಲ್ಟಾಪಲ್ಟಾ… ಇಲ್ಲಿ ಗಂಡ ಹೆಂಡತಿ ಜಗಳ ಹೆಣ ಬೀಳೊ ತನಕ ಅನ್ನೋ ತರ ಆಗಿದೆ. ಸಿಟ್ಟಿನ ಕೈಯಲ್ಲಿ ಬುದ್ದಿ ಕೊಟ್ಟ ಪತಿರಾಯನೊಬ್ಬ ಹೆಂಡತಿ (Husband, wife) ಜೀವ ತೆಗೆದಿದ್ದಾನೆ. ಜೊತೆಗೆ ತಾನೂ ನೇಣಿಗೆ ಶರಣಾಗಿದ್ದಾನೆ (suicide). ಅನುಮಾನ ಮತ್ತು ಮದ್ಯಪಾನ ಎಷ್ಟು ಕೆಟ್ಟದ್ದು ಎಂಬುವುದಕ್ಕೆ ಮೊನ್ನೆ ಶುಕ್ರವಾರ ಹಾವೇರಿಯಲ್ಲಿ ನಡೆದ ನೈಜ ಉದಾಹರಣೆ ಹೇಳ್ತೀವಿ ಕೇಳಿ. ಎಸ್.. ಆವರಿಬ್ಬರೂ 30 ವರ್ಷಗಳ ಹಿಂದೆಯೇ ಮದುವೆ ಆಗಿದ್ದರು. ಮದುವೆ ಆಗಿ ಒಬ್ಬ ಮಗ ಕೂಡ ಇದ್ದ. ಒಂದೆರಡು ವರ್ಷಗಳ ಕಾಲ ಚೆನ್ನಾಗಿಯೇ ಸಂಸಾರ ಮಾಡುತ್ತಿದ್ರು. ಹಾವೇರಿ (Haveri) ಜಿಲ್ಲೆ ಸಂಗನೂರು (Sanganur) ಗ್ರಾಮದ ಚಿಕ್ಕ ಮನೆಯಲ್ಲಿ ತಮ್ಮ ಜೀವನ ಸಾಗಿಸುತ್ತಿದ್ರು. ಆದ್ರೆ ಇಬ್ಬರ ನಡುವೆ ಆಗಾಗ ದೊಡ್ಡ ಜಗಳ ನಡೆಯುತ್ತಿತ್ತು. ಗಂಡ ಕುಡಿದು ಮೈ ತುಂಬಾ ಹೊಡೆಯುತ್ತಿದ್ದ. ಅಷ್ಟಕ್ಕೂ ಗಲಾಟೆ ಆಗೋಕೆ ಕಾರಣ ಅನುಮಾನ ಕಣ್ರಿ ಅನುಮಾನ..

ಪತ್ನಿಯ ಶೀಲ ಶಂಕಿಸಿ ಪ್ರತಿದಿನ ಹಗಲು ರಾತ್ರಿ ಎನ್ನದೆ ಕುಡಿಯುತ್ತಿದ್ದ ಪ್ರಭು ಎಂಬುವವನು, ರಾತ್ರಿ ಆಗುತ್ತಿದ್ದಂತೆ ಹಿಗ್ಗಾಮುಗ್ಗಾ ಬೈದು ಪತ್ನಿ ದ್ರಾಕ್ಷಾಯಣಿಯನ್ನು ಹೊಡೆಯುತಿದ್ದ.. ಗಂಡ ಹೆಂಡತಿ ನಡುವೆ ಇದ್ದಿದ್ದೆ ಜಗಳ ಅಂತಾ ಅಕ್ಕಪಕ್ಕದವರು ಸುಮ್ಮನೆ ಇರುತ್ತಿದ್ರು.. ಕೆಲವು ಬಾರಿ ದೊಡ್ಡ ಜಗಳ ಆದಾಗ ಯಾರಾದ್ರೂ ಸಮಾಧಾನ ಮಾಡೊಕೆ ಬಂದ್ರೆ ಅವರಿಗೆ ಬೈದು ಹೊಡಿಯೊಕೆ ಬರುತ್ತಿದ್ದ ಪತಿರಾಯ. ಹಾಗಾಗಿ ಅವರ ಮನೆಯಲ್ಲಿ ಯಾವುದೆ ಜಗಳ ಆದರೂ ಯಾರೂ ಕೂಡ ಅವರ ಮನೆ ಬಳಿ ಹೊಗೊಕೆ ಹೆದರುತ್ತಿದ್ರು..

ಅಪ್ಪ ಅಮ್ಮ ಪ್ರತಿ ದಿನದ ಜಗಳವಾಡುವುದನ್ನು ನೋಡಿ ಪುತ್ರನೂ ಬೇಸತ್ತಿದ್ದ. ಇಬ್ಬರನ್ನು ಬಿಟ್ಟು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತ ಬೆಂಗಳೂರಿನಲ್ಲೆ ನೆಲೆಸಿದ್ದ. ಆಗ ತನ್ನ ಜೊತೆ ಯಾರಾದ್ರೂ ಇರಲಿ ಅಂತಾ ದ್ರಾಕ್ಷಾಯಣಿ ತನ್ನ ತಂಗಿಯ ಮಗಳಾದ ಪುಷ್ಪಾಳನ್ನು ತನ್ನ ಮನೆಯಲ್ಲಿ ಕೆಲ ವರ್ಷಗಳ ಕಾಲ ಸಾಕುತ್ತಿದ್ದಳು. ಆದ್ರೆ ಒಂದು ದಿವಸ ಕುಡಿದ ಮತ್ತಿನಲ್ಲಿದ್ದ ಪ್ರಭು, ತನ್ನ ಪತ್ನಿ ದ್ರಾಕ್ಷಾಯಣಿಯ ಕತ್ತು ಹಿಚುಕಿ ಕೊಲ್ಲುವಚುದಕ್ಕೆ ಹೋಗಿದ್ದ. ಆಗ ತಡೆಯುವುದಕ್ಕೆ ಬಂದಿದ್ದ ಪುಷ್ಪಳನ್ನು ಆತ ಹಿಂದೆ ಮುಂದೆ ನೋಡದೆ ಹೊಡೆದಿದ್ದ. ಆಗ ದ್ರಾಕ್ಷಾಯಣಿಯ ತಂಗಿ ತನ್ನ ಮಗಳಾದ ಪುಷ್ಪಾಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ಲು.

ಕೆಲವು ದಿನಗಳ ಕಾಲ ಗಂಡನ ಹಿಂಸೆಯನ್ನ ತಡೆದುಕೊಳ್ಲುತ್ತಿದ್ದ ದ್ರಾಕ್ಷಾಯಣಿ.. ಎಂಟು ತಿಂಗಳ ಹಿಂದೆ ದೊಡ್ಡ ಜಗಳ ಆಗಿದ್ದಕ್ಕೆ ಗಂಡನನ್ನು ಹಾಗೂ ಸಂಗನೂರು ಗ್ರಾಮವನ್ನು ಬಿಟ್ಟು ಶಿರಸಿಯಲ್ಲಿ ಕೂಲಿ ಕೆಲಸ ಮಾಡುತ್ತಾ ಅಲ್ಲಿಯೇ ವಾಸಿಸುತ್ತಿದ್ದಳು. ಆದ್ರೆ ಯೌವನಕ್ಕೆ ಬಂದ ಮಗನಿಗೆ ಮದುವೆ ಮಾಡಬೇಕೆಂಬ ಆಶಯ ಇಟ್ಟುಕೊಂಡಿದ್ದ ತಾಯಿ. ಸ್ವ ಸಹಾಯ ಸಂಘ ಹಾಗೂ ತನ್ನ ತಮ್ಮ ಮತ್ತು ಮಗನ ಕಡೆಯಿಂದ ಹಣ ಪಡೆದು ಒಳ್ಳೆಯ ಮನೆಯನ್ನು ಸಂಗಣುರಿನಲ್ಲಿ ಕಟ್ಟಿಸುತ್ತಿದ್ಳು. ತಿಂಗಳಿಗೊಮ್ಮೆ ಊರಿಗೆ ಬಂದರೂ ಗಂಡನ ಭೇಟಿ ಮಾಡದೆ.. ಮನೆ ನಿರ್ಮಾಣ ಕಾರ್ಯದ ಬಗ್ಗೆ ಮಾಹಿತಿ ಪಡೆದು ಆಕೆ ಸಾಲ ಮಾಡಿದ್ದ ಸ್ವ ಸಹಾಯ ಸಂಘದ ಸಾಲವನ್ನು ಮರುಪಾವತಿ ಮಾಡುತ್ತಿದ್ದಳು.

ಜೂನ್ 6 ರಂದು ತನ್ನ ತಮ್ಮ ಹಾಗೂ ಗ್ರಾಮದ ಹಿರಿಯರ ಮಾತು ಕೇಳಿ ರಾಜಿ ಸಂಧಾನ ಮಾಡಿಕೊಳ್ಳುವುದಕ್ಕೆ ಅಂತಾ ಮೊನ್ನೆ ಹಾವೇರಿ ಗ್ರಾಮೀಣ ಠಾಣೆಗೆ ಬಂದಿದ್ದಾಳೆ. ಆಗ ಪೊಲೀಸರ ಸಮ್ಮುಖದಲ್ಲಿ ತಾನೂ ಪತ್ನಿಯ ಜೊತೆಗೆ ಚೆನ್ನಾಗಿ ಬಾಳುತ್ತೇನೆ ಎಂದು ಪ್ರಭು ಒಪ್ಪಿಕೊಂಡಿದ್ದಾನೆ. ತನ್ನ ತಂಗಿಯ ಸಂಸಾರಕ್ಕೆ ಒಳ್ಳೆಯದಾಗಲಿ ಎಂದು ತನಗೆ ಕೊಡಬೇಕಿರುವ ನಾಲ್ಕು ಲಕ್ಷ ಸಾಲ ಕೊಡುವುದೇ ಬೇಡ. ಮನೆಯನ್ನು ಪೂರ್ಣ ಕಟ್ಟಿಕೊಳ್ಳಿ ಅಂತಾ ತಮ್ಮ ಚೆನ್ನಬಸಪ್ಪ ಹೇಳಿದ್ದಾನೆ. ಆಗ ಖುಷಿಯಿಂದಲೆ ಪ್ರಭು ತನ್ನ ಪತ್ನಿಯನ್ನು ಮನೆಗೆ ಕರೆದಕೊಂಡು ಬಂದಿದ್ದಾನೆ.

ಆದರೂ ರಾತ್ರಿ 10 ಗಂಟೆ ಸುಮಾರಿಗೆ ಯಾವುದೋ ಮಾಯದಲ್ಲಿ ಎಣ್ಣೆ ಮತ್ತಿನಲ್ಲಿ ಮನೆಗೆ ಬಂದ ಪ್ರಭು ಎಂದಿನಂತೆ ಮತ್ತೆ ಹೆಂಡತಿಯ ಜೊತೆ ಜಗಳ ಮಾಡೊಕೆ ಮುಂದಾಗಿದ್ದಾನೆ. ಆಗ ಹೆಂಡತಿ ಕೆಲ ಸಮಯ ಕಾಲ ಮೌನವಾಗಿದ್ದು ಆತನನ್ನು ಸಮಾಧಾನ ಮಾಡುವುದಕ್ಕೆ ಪ್ರಯತ್ನಿಸಿದ್ದಾಳೆ. ಆದ್ರು ಕೂಡ ಈತನ ಮಾತು ಕಮ್ಮಿ ಆಗದಿದ್ದಾಗ ನಾನು ಇಲ್ಲಿಗೆ ಬಂದಿದ್ದೆ ತಪ್ಪಾಯ್ತು ನೀನು ಈ ಜೀವನದಲ್ಲಿ ಬದಲಾಗಲ್ಲ ಅಂತಾ ಜೋರಾಗಿ ಕೂಗಾಡಿದ್ದಾಳೆ. ಆಗ ಅಲ್ಲಿಂದ ಪರಾರಿ ಆಗೋಕೆ ಮುಂದಾಗಿದ್ದಾಳೆ.

ಅವಳು ಮನೆಯಿಂದ ಹೊರಗೆ ಹೊಗುತ್ತಿರುವುದನ್ನು ಕಂಡು ಮಚ್ಚಿನಿಂದ ಕುತ್ತಿಗೆ ಹಾಗೂ ತಲೆಗೆ ಹೊಡೆದು ಸಾಯಿಸಿದ್ದಾನೆ ಗಂಡ ಪ್ರಭು. ಹೆಂಡತಿಯನ್ನು ಸಾಯಿಸಿದ್ದಕ್ಕೆ ಹೆದರಿದ ಪ್ರಭು.. ತಾನೂ ಕೂಡ ಮನೆ ಮುಂದಿನ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ