Haveri News: ಕರೆಂಟ್ ಬಿಲ್ ಹೆಚ್ಚಳ; ಬಿಲ್ ಕಲೆಕ್ಟರ್​ಗೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು

ರಾಜ್ಯಾದ್ಯಂತ ದುಪ್ಪಟ್ಟು ಕರೆಂಟ್ ಬಿಲ್ ಹೆಚ್ಚಳದಿಂದ ಜನರು ಬೇಸತ್ತಿದ್ದು, ಈ ವಿಚಾರವಾಗಿ ಇದೀಗ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಹೊಸ ಶಿಡೇನೂರು ಗ್ರಾಮದ ಜನರು ಬಿಲ್ ಕಲೆಕ್ಟರ್​ಗೆ ಬಹಿಷ್ಕಾರ ಹಾಕಿದ್ದಾರೆ.

Haveri News: ಕರೆಂಟ್ ಬಿಲ್ ಹೆಚ್ಚಳ; ಬಿಲ್ ಕಲೆಕ್ಟರ್​ಗೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು
ಬಿಲ್ ಕಲೆಕ್ಟರ್​ಗೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 10, 2023 | 1:55 PM

ಹಾವೇರಿ: ರಾಜ್ಯದ ಎಲ್ಲಾ ವಿದ್ಯುತ್ ಪ್ರಸರಣ ಕಂಪನಿಗಳು ವಿದ್ಯುತ್ ದರವನ್ನ ಏರಿಕೆ(Electricity Price Hike) ಮಾಡುವ ಮೂಲಕ ಸಾರ್ವಜನಿಕರಿಗೆ ಶಾಕ್​ ನೀಡಿದೆ. ರಾಜ್ಯಾದ್ಯಂತ ದುಪ್ಪಟ್ಟು ಕರೆಂಟ್ ಬಿಲ್ ಹೆಚ್ಚಳದಿಂದ ಜನರು ಬೇಸತ್ತಿದ್ದು, ಈ ವಿಚಾರವಾಗಿ ಇದೀಗ ಹಾವೇರಿ (Haveri)ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಹೊಸ ಶಿಡೇನೂರು ಗ್ರಾಮದ ಜನರು ಒಟ್ಟುಗೂಡಿ, ಗಣೇಶನ ದೇವಸ್ಥಾನದಲ್ಲಿ ಸಭೆ ನಡೆಸಿ ಕರೆಂಟ್ ಬಿಲ್ ಕಟ್ಟಂಗಿಲ್ಲವೆಂದು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ಬಿಲ್ ಕಲೆಕ್ಟರ್ ಗೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು

ಕರೆಂಟ್ ಬಿಲ್‌ ಹೆಚ್ಚಳದಿಂದ ರೈತರಿಗೆ ಸಂಕಷ್ಟವಾಗುತ್ತಿದೆ. ಇದರಿಂದ ಇದೀಗ ಜನರು ಒಟ್ಟಾಗಿ ಸಭೆ ನಡೆಸಿ, ಬಿಲ್ ಕಲೆಕ್ಟರ್​ಗೆ ಬಹಿಷ್ಕಾರ ಹಾಕಿದ್ದಾರೆ. ನಮ್ಮೂರಿಗೆ ಬಿಲ್ ಕಲೆಕ್ಟರ್ ಬರುವಂಗಿಲ್ಲ, ಬಿಲ್ ಹಾಕುವಂಗಿಲ್ಲ. ಒಂದು ವೇಳೆ ಬಿಲ್ ಕಲೆಕ್ಟರ್ ಬಂದ್ರೆ, ಆತನನ್ನು ಹೊಡೆದು ಒಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ವಿದ್ಯುತ್ ಫ್ರೀ ನಡುವೆಯೇ ಜನರಿಗೆ ಕರೆಂಟ್​ ಶಾಕ್: 2023ರ ಏಪ್ರಿಲ್​ನಿಂದ ಡಿಸೆಂಬರ್ ವರೆಗೂ ವಿದ್ಯುತ್ ದರ ಹೆಚ್ಚಳ, ಎಷ್ಟೆಷ್ಟು? ಇಲ್ಲಿದೆ ವಿವರ

ಜನರಿಗೆ ಒಂದೇ ತಿಂಗಳಲ್ಲಿ ಬಂದಿದೆ ಒನ್ ಟು ಡಬಲ್ ಬಿಲ್

ಬೆಂಗಳೂರು: ಗೃಹ ಜ್ಯೋತಿಗಾಗಿ ಕಾಯುತ್ತಿರುವವರಿಗೆ ವಿದ್ಯುತ್ ಪ್ರಸರಣ ಕಂಪನಿಗಳು ಬರೆ ಎಳೆದಿದ್ದು, ಒಂದೇ ತಿಂಗಳಲ್ಲಿ ಒನ್ ಟು ಡಬಲ್ ವಿದ್ಯುತ್​​ ಬಿಲ್ ಬಂದಿದೆ. ರಾಜ್ಯದ ಎಲ್ಲಾ ವಿದ್ಯುತ್ ಪ್ರಸರಣ ಕಂಪನಿಗಳು ವಿದ್ಯುತ್ ದರವನ್ನ ಏರಿಕೆ ಮಾಡುವ ಮೂಲಕ ಸಾರ್ವಜನಿಕರಿಗೆ ಬರೆ ಎಳೆದಿದೆ. ಕಳೆದ ತಿಂಗಳ ಬಿಲ್​ಗೂ ಈ ಬಿಲ್​ಗೂ ಹೊಂದಾಣಿಕೆಯೇ ಇಲ್ಲದಂತಾಗಿದ್ದು, ಬರೊಬ್ಬರಿ ದುಪ್ಪಟ್ಟು ಏರಿಕೆಯಾಗಿದೆ. ಇನ್ನು ವಿದ್ಯುತ್ ಹೊಂದಾಣಿಕೆ ದರ, ಹಾಗೂ ಹೆಚ್ಚುವರಿ ಶುಲ್ಕದ ಹೆಸರಿನಲ್ಲಿ ಬಿಲ್ ಏರಿಕೆಯಾಗಿದ್ದು, ಬಿಲ್​ಗಳಲ್ಲಿ ಬಾಕಿ ಮೊತ್ತ ಎಂದು ನಮೂದಿಸಿ ಹೆಚ್ಚುವರಿ ಹಣ ವಸೂಲಿಗೆ ಇಳಿದಿದ್ದಾರೆ. ಇನ್ನು ಏಪ್ರಿಲ್ ತಿಂಗಳಿನಿಂದಲೇ ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ವಿದ್ಯುತ್ ದರ ಏರಿಕೆ ಮಾಡಿತ್ತು. ಇದಕ್ಕೆ ಚುನಾವಣೆ ಇರುವ ಹಿನ್ನಲೆ ಬಿಜೆಪಿ ಸರ್ಕಾರ ತಡೆ ಹಿಡಿದಿತ್ತು. ಈಗ ಹೊಸ ಸರ್ಕಾರ ಬರ್ತಿದ್ದಂತೆ ಏಪ್ರಿಲ್ ಮೇ ತಿಂಗಳ ಏರಿಕೆ ಮೊತ್ತವನ್ನ ಒಮ್ಮೆಗೆ ಬಿಲ್​ಗೆ ಸೇರಿಸಿದ್ದು, ಬಿಲ್​ನಲ್ಲಿ ಹಳೆ ಬಾಕಿ ಮೊತ್ತವೆಂದು ನಮೂದಿಸಲಾಗಿದೆ.

ಒಮ್ಮೆಗೆ ಡಬಲ್ ಬಿಲ್ ವಸೂಲಿಗೆ ಮುಂದಾದ ಪ್ರಸರಣ ಕಂಪನಿಗಳು

ಇದೊಂದು ಉದಾಹರಣೆಗೆ ನೋಡುವುದಾದರೆ ಮೀಟರ್ ಆರ್​ಆರ್ ನಂ. L56791 ಹೀಗಿದ್ದು, ಕಳೆದ ಬಾರಿ ಮೇ ತಿಂಗಳ ಬಿಲ್ ಮೊತ್ತ 881 ರೂಪಾಯಿ ಬಂದಿತ್ತು. ಇದೀಗ ಜೂನ್ ತಿಂಗಳ ವಿದ್ಯುತ್ ಬಿಲ್ ಬಂದಿದ್ದು, ಬರೊಬ್ಬರಿ 2067 ರೂ ಬಂದಿದೆ. ಅದರಂತೆ ಇನ್ನೊಂದು ಮೀಟರ್ ಕುರಿತು ‘ಆರ್ ಆರ್ ನಂಬರ್ W4LG 73189 ಇದ್ದು, ಕಳೆದ ಬಾರಿ ಮೇ ತಿಂಗಳ ಬಿಲ್ 3976 ರೂ ಬಂದಿತ್ತು. ಈ ಬಾರಿ ಜೂನ್ ತಿಂಗಳ ಬಿಲ್ 6052 ರೂ. ಬಂದಿದೆ. ಪ್ರತಿ ಬಿಲ್ ನಲ್ಲೂ ಬಾಕಿ ಮೊತ್ತ ಹಾಗೂ ನಿಗದಿತ ಶುಲ್ಕ ಎಂದು ಹೆಚ್ಚುವರಿ ವಸೂಲಿ ಮಾಡಲಾಗಿದೆ. ಇದೀಗ ಬಿಲ್ ಏರಿಕೆ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ