Electricity Price Hike: ಗೃಹಜ್ಯೋತಿ ಘೋಷಣೆ ಬೆನ್ನಲ್ಲೇ ರಾಜ್ಯದ ಜನತೆಗೆ ಕರೆಂಟ್ ಶಾಕ್: ಜೂನ್ 1ರಿಂದಲೇ ವಿದ್ಯುತ್ ದರ ಏರಿಕೆ
‘ಗೃಹಜ್ಯೋತಿ’ ಘೋಷಣೆ ಬೆನ್ನಲ್ಲೇ ಜನತೆಗೆ ರಾಜ್ಯ ಸರ್ಕಾರ ಕರೆಂಟ್ ಶಾಕ್ ನೀಡಿದ್ದು, ಜೂನ್ 1ರಿಂದಲೇ ವಿದ್ಯುತ್ ದರ ಹೆಚ್ಚಳ ಜಾರಿಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ‘ಗೃಹಜ್ಯೋತಿ’ ಘೋಷಣೆ ಬೆನ್ನಲ್ಲೇ ಜನತೆಗೆ ರಾಜ್ಯ ಸರ್ಕಾರ ಕರೆಂಟ್ ಶಾಕ್ ನೀಡಿದ್ದು, ಜೂನ್ 1ರಿಂದಲೇ ವಿದ್ಯುತ್ ದರ (Electricity Price Hike) ಹೆಚ್ಚಳ ಜಾರಿಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ (ಕೆಇಆರ್ಸಿ) ರಾಜ್ಯದಲ್ಲಿ ಪ್ರತಿ ಯೂನಿಟ್ ವಿದ್ಯುತ್ಗೆ 70 ಪೈಸೆ ಹೆಚ್ಚಳ ಮಾಡಿ ಮೇ 12ರಂದು ವಿದ್ಯುತ್ ದರ ಏರಿಕೆ ಮಾಡಿ ಆದೇಶ ಪ್ರಕಟಿಸಿತ್ತು. ವಿದ್ಯುತ್ ಸರಬರಾಜು ಕಂಪನಿಗಳಿಗೆ ನಷ್ಟದ ಕಾರಣ ನೀಡಿ ಹೆಚ್ಚಳಿಕೆ ಮಾಡಲಾಗಿತ್ತು. ಇದೀಗ ಹೊಸ ಪರಿಷ್ಕೃತ ವಿದ್ಯುತ್ ದರ ಜೂನ್ 1ರಿಂದಲೇ ಜಾರಿ ಆಗಲಿದೆ.
ಏಪ್ರಿಲ್ 1ರಿಂದ ಹೊಸ ದರ ಅನ್ವಯ ಎಂದು ಕೆಇಆರ್ಸಿ ಹೇಳಿತ್ತು. ಚುನಾವಣೆ ಘೋಷಣೆ ಹಿನ್ನೆಲೆ ದರ ಹೆಚ್ಚಳ ಆದೇಶಕ್ಕೆ ತಡೆಬಿದ್ದಿತ್ತು. ಹಾಗಾಗಿ ಜೂ. 1ರಿಂದ ಪರಿಷ್ಕೃತ ವಿದ್ಯುತ್ ದರವನ್ನು ಕೆಇಆರ್ಸಿ ಜಾರಿಮಾಡಿದೆ.