Odisha Train Accident: ಒಡಿಶಾ ರೈಲು ದುರಂತದಲ್ಲಿ ಬೆಂಗಳೂರಿನ ಹೊಟೇಲ್ ಕಾರ್ಮಿಕ ಸಾವು

ಒಡಿಶಾದಲ್ಲಿ ನಡೆದ ರೈಲು ದುರಂತದಲ್ಲಿ ಬೆಂಗಳೂರಿನ ಹೊಟೇಲ್​ವೊಂದರ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಹೌರಾ ಎಕ್ಸ್‌ಪ್ರೆಸ್‌ನಲ್ಲಿದ್ದ ಕನಿಷ್ಠ 36 ಪ್ರಯಾಣಿಕರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.

Odisha Train Accident: ಒಡಿಶಾ ರೈಲು ದುರಂತದಲ್ಲಿ ಬೆಂಗಳೂರಿನ ಹೊಟೇಲ್ ಕಾರ್ಮಿಕ ಸಾವು
ಒಡಿಶಾ ರೈಲು ದುರಂತದಲ್ಲಿ ಬೆಂಗಳೂರಿನ ಹೊಟೇಲ್ ಕಾರ್ಮಿಕ ಸಾವುImage Credit source: ANI
Follow us
Rakesh Nayak Manchi
|

Updated on: Jun 04, 2023 | 7:06 AM

ಬೆಂಗಳೂರು: ಒಡಿಶಾದಲ್ಲಿ ನಡೆದ ರೈಲು ದುರಂತದಲ್ಲಿ (Odisha Train Accident) ಬೆಂಗಳೂರಿನ (Bangalore) ಹೊಟೇಲ್​ವೊಂದರ ಕಾರ್ಮಿಕ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಪಘಾತದಲ್ಲಿ ಹೌರಾ ಎಕ್ಸ್‌ಪ್ರೆಸ್‌ನಲ್ಲಿದ್ದ (Howrah Express) ಕನಿಷ್ಠ 36 ಪ್ರಯಾಣಿಕರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಸದ್ಯ ಇವರೆಲ್ಲರಿಗೂ ಪರಿಹಾರವನ್ನು ನೀಡಲಾಗಿದೆ. ಗಂಭೀರ ಗಾಯಗೊಂಡ ವ್ಯಕ್ತಿಯ ಪತ್ನಿಗೆ ಎರಡು ಲಕ್ಷ ರೂ. ಹಾಗೂ ಇತರರು ತಲಾ 50,000 ರೂ. ಪರಿಹಾರ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ನಿವಾಸಿ ಸಾಗರ್ ಖೇರಿಯಾ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ. 30 ವರ್ಷದ ಖೇರಿಯಾ ಅವರು ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಗೆ ಹಿಂದಿರುಗುತ್ತಿದ್ದಾಗ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅವರು ಜಲ್ಪೈಗುರಿ ಜಿಲ್ಲೆಯ ನಗರಕಟಾ ಬ್ಲಾಕ್‌ನಿಂದ ಇತರ 13 ಜನರೊಂದಿಗೆ ಪ್ರಯಾಣಿಸಿದ್ದರು ಎಂದು ವರದಿ ಮಾಡಲಾಗಿದೆ.

ಇದನ್ನೂ ಓದಿ: Video: ಒಡಿಶಾ ರೈಲು ದುರಂತ: ಎದೆ ಝಲ್​ ಎನಿಸುತ್ತೆ ಏರಿಯಾಲ್ ವೀವ್ ದೃಶ್ಯ

ಸಾಗರ್ ಖೇರಿಯಾ ಜೊತೆ ಇದ್ದ ಧರ್ಮನಾಥ್ ಸಿಂಗ್ (19) ಮತ್ತು ಅಮನ್ ಒನ್ರಾವ್ (24) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಂಗಳೂರಿನ ರೈಲ್ವೆ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಡೆಕ್ಕನ್ ಹೆರಾಲ್ಡ್​ಗೆ ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ರೈಲು ವ್ಯವಸ್ಥಾಪಕರು ಮತ್ತು ಇತರ ಇಬ್ಬರು ಎಸ್‌ಎಲ್‌ಆರ್‌ಡಿ (ಅಂಗವಿಕಲರಿಗಾಗಿ ಎರಡನೇ ದರ್ಜೆಯ ಲಗೇಜ್ ರೇಕ್) ಕೋಚ್‌ಗೆ ಜೋಡಿಸಲಾದ ಗಾರ್ಡ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇವರೆಲ್ಲರನ್ನೂ ಬಾಲಸೋರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಪ್ರಯಾಣಿಕರು ಕರ್ನಾಟಕದವರಲ್ಲ ಎಂದು ಬೆಂಗಳೂರಿನ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 23 ಬೋಗಿಗಳ ಸೂಪರ್‌ಫಾಸ್ಟ್ ರೈಲು ಹೌರಾ ಕಡೆಗೆ ಗಂಟೆಗೆ 90-100 ಕಿಮೀ ವೇಗದಲ್ಲಿ ಬರುತ್ತಿದ್ದಾಗ ಒಡಿಶಾದ ಬಹಂಗಾ ಬಜಾರ್ ರೈಲು ನಿಲ್ದಾಣದ ಬಳಿ ರಾತ್ರಿ 7 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿ ಪಕ್ಕದ ಹಳಿಯಲ್ಲಿ ಬರುತ್ತಿದ್ದ ಶಾಲಿಮಾರ್-ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್‌ನ ಕೋಚ್‌ಗಳಿಗೆ ಡಿಕ್ಕಿ ಹೊಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ