BBMP Election: 8 ವರ್ಷದಿಂದ ನಡೆಯದ ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್
ಅಂದಹಾಗೇ, ಐದು ಗ್ಯಾರಂಟಿಗಳ ಜಾರಿಗೆ ಹೆಜ್ಜೆ ಇಟ್ಟು ಕಾಂಗ್ರೆಸ್ ಸರ್ಕಾರ ಕೇಕೆ ಹಾಕ್ತಿದೆ. ಸದ್ಯ ಜನರ ಮನಸಲ್ಲಿ ಕಾಂಗ್ರೆಸ್ ಪಾಳೆಯವಿದ್ದು, ಇದೇ ಅಲೆಯಲ್ಲಿ ಪಾಲಿಕೆಯನ್ನೂ ಗೆಲ್ಲಬಹುದು ಅಂತ ಕೈಕಲಿಗಳು ರಾಗಾ ತೆಗೆದಿದ್ದಾರೆ. ವಾರ್ಡ್ ವಿಂಗಡಣೆಗೆ ತಲೆ ಕೆಡಿಸಿಕೊಳ್ಳದೆ ಚುನಾವಣೆಯತ್ತ ಗಮನ ಹರಿಸ್ತೀವಿ ಅಂತ ಸಚಿವರು ಹೇಳಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ(Karnataka Assembly Election) ಕಾಂಗ್ರೆಸ್(Congress) ಭರ್ಜರಿ ಜಯಭೇರಿ ಬಾರಿಸಿ ರಾಜ್ಯದ ಚುಕ್ಕಾಣಿ ಹಿಡಿಯುತ್ತಿದ್ದಂತಯೇ ಕೈನಾಯಕರ ಕಣ್ಣು ಬಿಬಿಎಂಪಿ(BBMP) ಗದ್ದುಗೆಯ ಮೇಲೆ ಬಿದ್ದಿದೆ. ಲೋಕಾಸಭಾ ಚುನಾವಣೆಗೂ ಮುನ್ನ ಪಾಲಿಕೆಯ ಚುನಾವಣೆ ನಡೆಸಿ ಅಧಿಕಾರದ ಗದ್ದುಗೆ ಹಿಡಿಯಲು ಕೈ ನಾಯಕರು ಪ್ಲಾನ್ ಮಾಡಿದ್ದು ಬಿಜೆಪಿಗೆ ಪಾಲಿಕೆಯಲ್ಲಿ ಈ ಬಾರಿ ಠಕ್ಕರ್ ನೀಡಲು ಕಾಂಗ್ರೆಸ್ ನಯಾ ಪ್ಲಾನ್ ಮಾಡಿದೆ. ಇದಕ್ಕಾಗಿ ರಣತಂತ್ರ ರೂಪಿಸಲು ಮುಂದಾಗಿದೆ.
ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಕೈನಾಯಕರ ಪ್ಲಾನ್
ಒಂದಲ್ಲ.. ಎರಡಲ್ಲ.. ಬಿಬಿಎಂಪಿ ಚುನಾವಣೆ ನಡೆದು ಈ ವರ್ಷಕ್ಕೆ 8 ವರ್ಷಗಳು ತುಂಬಲಿದೆ. ಬಿಜೆಪಿ ಸರ್ಕಾರವಿದ್ದಾಗ ಪಾಲಿಕೆ ಚುನಾವಣೆಯನ್ನೇ ಗಮನದಲ್ಲಿ ಇಟ್ಕೊಂಡು, ವಾರ್ಡ್ ವಿಂಗಡಣೆ ಮಾಡಿದ್ರು. ಆದ್ರೆ ಇದು ಕ್ರಮಬದ್ಧವಾಗಿಲ್ಲ ಅಂತ ಕಾಂಗ್ರೆಸ್ ಶಾಸಕರು, ಮಾಜಿ ಕಾರ್ಪೊರೇಟರ್ಗಳು ಆರೋಪಿಸ್ತಿದ್ರು. ಇದೀಗ, ಅಧಿಕಾರಕ್ಕೆ ಏರುತ್ತಿದ್ದಂತೆ ಪಾಲಿಕೆಯತ್ತ ಕಾಂಗ್ರೆಸ್ ದೃಷ್ಟಿ ಹರಿಸಿದೆ. ವಾರ್ಡ್ ವಿಗಂಡಣೆ ಹಾಗೂ ಮೀಸಲಾತಿಗೆ ಅಂತ್ಯ ಹಾಡಿ ಅಧಿಕಾರಕ್ಕೇರಲು ಕನಸು ಕಾಣ್ತಿದೆ. ಹೀಗಾಗಿಯೇ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್ ಹಿರಿಯ ಸಚಿವರ ಸಭೆ ನಡೀತು. ಕೃಷ್ಣ ಭೈರೇಗೌಡ, ದಿನೇಶ್ ಗುಂಡುರಾವ್, ಶಾಸಕ ಪ್ರಿಯಾಕೃಷ್ಣ ಹಾಗೂ ಮಾಜಿ ಮೇಯರ್ ಪದ್ಮಾವತಿ ಸೇರಿದಂತೆ ಕೈನಾಯಕರು ಭಾಗಿಯಾಗಿ ಸಭೆ ನಡೆಸಿದ್ರು.
ಇದನ್ನೂ ಓದಿ: Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 4ರ ದಿನಭವಿಷ್ಯ
ಅಂದಹಾಗೇ, ಐದು ಗ್ಯಾರಂಟಿಗಳ ಜಾರಿಗೆ ಹೆಜ್ಜೆ ಇಟ್ಟು ಕಾಂಗ್ರೆಸ್ ಸರ್ಕಾರ ಕೇಕೆ ಹಾಕ್ತಿದೆ. ಸದ್ಯ ಜನರ ಮನಸಲ್ಲಿ ಕಾಂಗ್ರೆಸ್ ಪಾಳೆಯವಿದ್ದು, ಇದೇ ಅಲೆಯಲ್ಲಿ ಪಾಲಿಕೆಯನ್ನೂ ಗೆಲ್ಲಬಹುದು ಅಂತ ಕೈಕಲಿಗಳು ರಾಗಾ ತೆಗೆದಿದ್ದಾರೆ. ವಾರ್ಡ್ ವಿಂಗಡಣೆಗೆ ತಲೆ ಕೆಡಿಸಿಕೊಳ್ಳದೆ ಚುನಾವಣೆಯತ್ತ ಗಮನ ಹರಿಸ್ತೀವಿ ಅಂತ ಸಚಿವರು ಹೇಳಿದ್ದಾರೆ.
ಹಳೆ ಲೆಕ್ಕದಂತೆ ಚುನಾವಣೆ ನಡೆಸಲು ಕೈ ಕಾರ್ಪೋರೇಟರ್ಗಳ ಒತ್ತಾಯ
ಇನ್ನು, ವಾರ್ಡ್ ವಿಂಗಡಣೆ ಕುರಿತು ವಸ್ತುಸ್ಥಿತಿ ಅವಲೋಕಿಸಲು ಕೆಪಿಸಿಸಿ ಮುಂದಾಗಿದೆ. ರಾಮಲಿಂಗಾರೆಡ್ಡಿ ನೇತೃತ್ವದ 11 ನಾಯಕರಿಗೆ ಟಾಸ್ಕ್ ನೀಡಿದೆ. ಈ ಸಮಿತಿಯ ವರದಿಗಾಗಿ ಪಕ್ಷ ಕಾಯುತ್ತಿದೆ. ಈ ನಡುವೆ ಕಾಂಗ್ರೆಸ್ನ ಮಾಜಿ ಕಾರ್ಪೋರೇಟರ್ ಗಳು, ಬಿಜೆಪಿ ವಿಂಗಡಿಸಿರುವ 243 ವಾರ್ಡ್ ಗಳನ್ನ ಕೈಬಿಟ್ಟು, ಹಳೆಯ 198 ವಾರ್ಡ್ ಗಳಿಗಷ್ಟೇ ಎಲೆಕ್ಷನ್ ಮಾಡಿದ್ರೆ ಉತ್ತಮ ಅಂತಿದ್ದಾರೆ.
ಒಟ್ನಲ್ಲಿ, ಜೂನ್ 30ರೊಳಗೆ ಬಿಬಿಎಂಪಿ ಚುನಾವಣೆಯ ಬಗ್ಗೆ ಸಮಗ್ರ ಮಾಹಿತಿಯನ್ನ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ ಕೆಪಿಸಿಸಿಗೆ ನೀಡಲಿದೆ. ಸದ್ಯ, ಪಾಲಿಕೆ ಚುನಾವಣೆಯನ್ನ ತುರ್ತಾಗಿ ನಡೆಸಲು ಕಾಂಗ್ರೆಸ್ ಮುಂದಾಗಿದ್ದು, ಹತ್ತಾರು ಸರ್ಕಸ್ ನಡೀತಿದೆ. –
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ