ಗೋಹತ್ಯೆ ರಕ್ತದ ಹನಿ ಭೂಮಿ ಮೇಲೆ ಬೀಳಲು ಬಿಡೋದಿಲ್ಲ; ಕಾಂಗ್ರೆಸ್ಗೆ ಗೋ ಶಾಪ ತಟ್ಟುತ್ತೆ -ಪ್ರಮೋದ್ ಮುತಾಲಿಕ್
ಸಚಿವ ವೆಂಕಟೇಶ್ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಗೋ ಸಂರಕ್ಷಣೆ ಆಗಬೇಕು ಅನ್ನೋದು ಕಾಂಗ್ರೆಸ್ ನಿಲುವಾಗಿತ್ತು. ಈಗ ಈ ಹೇಳಿಕೆ ಕೊಡಲು ಪ್ರನಾಳಿಕೆ ಕಾರಣವಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ಕಾಯಿದೆ ಹಿಂಪಡಿತೀವಿ ಎಂದು ಕಾಂಗ್ರೆಸ್ ಹೇಳಿದೆ ಎಂದರು.
ಬೆಂಗಳೂರು: ಎಮ್ಮೆ ಕೋಣಗಳನ್ನು ಕಡಿದು ಹಾಕುವುದಾದರೇ ಹಸುಗಳನ್ನು ಏಕೆ ಕಡಿಯಬಾರದು? ಎಂದು ಹೇಳಿದ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್(K Venkatesh) ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಹೇಳಿಕೆ ಸಂಬಂಧ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod Muthalik) ಹಾಗೂ ಶಾಸಕ ಯಶ್ಪಾಲ್ ಸುವರ್ಣ(Yashpal Suvarna) ವಾಗ್ದಾಳಿ ನಡೆಸಿದ್ದಾರೆ.
ಸಚಿವ ವೆಂಕಟೇಶ್ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಗೋ ಸಂರಕ್ಷಣೆ ಆಗಬೇಕು ಅನ್ನೋದು ಕಾಂಗ್ರೆಸ್ ನಿಲುವಾಗಿತ್ತು. ಈಗ ಈ ಹೇಳಿಕೆ ಕೊಡಲು ಪ್ರನಾಳಿಕೆ ಕಾರಣವಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ಕಾಯಿದೆ ಹಿಂಪಡಿತೀವಿ ಎಂದು ಕಾಂಗ್ರೆಸ್ ಹೇಳಿದೆ. ಮುಸ್ಲಿಂ ಓಲೈಕೆಗಾಗಿ ಈ ರೀತಿ ಮಾಡ್ತಿದ್ದಾರೆ. ಕೋಣ ಮತ್ತು ಎಮ್ಮೆ ಕೂಡ ಗೋ ವ್ಯಾಖ್ಯಾನದಲ್ಲಿ ಬರುತ್ತೆ. ಅದನ್ನು ಕೂಡ ಕಡಿಯಬಾರದು. ಆದರೆ ಯಾವಾಗ ಕಡಿಯಬೇಕು ಅನ್ನೋ ವ್ಯಾಖ್ಯಾನ ಇದೆ. 13 ವರ್ಷದ ಬಳಿಕ ಅದನ್ನ ಕಡಿಯಬಹುದು. ಸಾಧು, ಸಂತರು, ಋಷಿ ಮುನಿಗಳು ಗೋ ಸಂರಕ್ಷಣೆ ಆಗಬೇಕು ಅಂದಿದ್ದಾರೆ. ಕಡಿದರೆ ಕಾಂಗ್ರೆಸ್ ಗೆ ಗೋವಿನ ಶಾಪ ತಟ್ಟುತ್ತದೆ. ಮುಸ್ಲಿಂ ತುಷ್ಟೀಕರಣ ಒಂದೇ ಇವರ ಉದ್ದೇಶ ಆಗಿದೆ. ಗೋಹತ್ಯೆ ಹತ್ಯೆ ನಿಷೇಧ ಕಾನೂನು ಹಿಂಪಡೆದರೆ ಉಗ್ರ ಹೋರಾಟ ಮಾಡ್ತೀವಿ. ಗೋಹತ್ಯೆ ರಕ್ತದ ಹನಿ ಕೂಡ ಭೂಮಿ ಮೇಲೆ ಬೀಳಲು ಬಿಡೋದಿಲ್ಲ. ಮುಸ್ಲಿಂ ತುಷ್ಟೀಕರ ಮಾಡಲು ನಾವು ಬಿಡೋದಿಲ್ಲ ಎಂದು ಬೆಂಗಳೂರಲ್ಲಿ ಪ್ರಮೋದ್ ಮುತಾಲಿಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಎಮ್ಮೆ, ಕೋಣ ಕಡಿದು ಹಾಕುವುದಾದ್ರೆ ಹಸು ಏಕೆ ಕಡಿಯಬಾರದು? ಸಚಿವ ಕೆ.ವೆಂಕಟೇಶ್ ಪ್ರಶ್ನೆ
ಇನ್ನು ಮತ್ತೊಂದೆಡೆ ಉಡುಪಿಲ್ಲಿ ಶಾಸಕ ಯಶ್ಪಾಲ್ ಸುವರ್ಣ ತಿರುಗೇಟು ನೀಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹಿಂದೂಗಳ ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡಿರುವುದು ಖಂಡನೀಯ. ಈ ಹೇಳಿಕೆಯಿಂದ ಗೋಹತ್ಯೆ ನಿಷೇಧ ಕಾನೂನು ವಾಪಸ್ಸು ಪಡೆಯುತ್ತೇವೆ ಎಂಬ ಹೇಳಿಕೆ ಮೊದಲ ಹೆಜ್ಜೆ ಇಟ್ಟಂತೆ ಆಗುತ್ತದೆ. ಸಚಿವರು 84 ಶೇಕಡ ಇರುವ ಹಿಂದೂಗಳ ಭಾವನೆಯಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಒಂದು ಅವಧಿಗೆ ಮಾತ್ರ ಜನರು ಅವರಿಗೆ ಸರ್ಕಾರ ರಚನೆ ಮಾಡಲು ಅವಕಾಶ ಕೊಟ್ಟಿದ್ದಾರೆ. ರಾಜ್ಯವನ್ನು ಅವರಿಗೆ ಮಾರಾಟ ಮಾಡಿಲ್ಲ. ನೀಡಿರುವ ಹೇಳಿಕೆಯನ್ನು ಸಚಿವರು ವಾಪಸ್ಸು ಪಡೆಯಬೇಕು. ಈ ಬಗ್ಗೆ ಹೇಳಿಕೆ ನೀಡುವ ಸಮಯದಲ್ಲಿ ಕಾನೂನಿನ ಬಗ್ಗೆ ಅರಿವು ಇರಬೇಕು. ಹಿಂದೂ ಭಾವನೆಗಳಿಗೆ ಧಕ್ಕೆ ಆಗುವ ರೀತಿಯ ಹೇಳಿಕೆ ನೀಡಿದರೆ, ಸರಿಯಾದ ಉತ್ತರ ನೀಡಲು ಹಿಂದೂ ಸಂಘಟನೆ ಹಾಗೂ ಕಾರ್ಯಕರ್ತರು ಸಿದ್ದರಿದ್ದಾರೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ